ನವದೆಹಲಿ: ಭಾರತವು 5ನೇ ತಲೆಮಾರಿನ ಸ್ಟೀಲ್ತ್ ಫೈಟರ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ವಾಯುಸೇನೆಯ ರಫೇಲ್, ಸುಖೋಯ್ ಸು-30ಎಂಕೆಐ ಮತ್ತು ಎಲ್ಸಿಎ ತೇಜಸ್ಗೆ ಪೂರಕವಾಗಿ ಇದನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ಶೀಘ್ರದಲ್ಲೇ ಲಾಕ್ಹೀಡ್ ಮಾರ್ಟಿನ್’ಸ್ ಎಫ್ -22 ರಾಪ್ಟರ್ ಮತ್ತು ಅಮೆರಿಕದ ಎಫ್ -35 ಲೈಟನಿಂಗ್ II, ಚೀನಾದ ಚೆಂಗ್ಡು ಜೆ -20 ಮತ್ತು ರಷ್ಯಾದ ಸುಖೋಯ್ ಸು -57 ಯುದ್ಧ ವಿಮಾನದ ಎದುರು ಪ್ರತಿಸ್ಪರ್ಧಿಯಾಗಲಿರುವಂತಹ ಸ್ಟೀಲ್ತ್ ಫೈಟರ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಅಡ್ವಾನ್ಸ್ಡ್ ಮೀಡಿಯಮ್ ಕಂಬಾತ್ ಏರ್ಕ್ರಾಫ್ಟ್ (ಎಎಂಸಿಎ) ಕಾರ್ಯಕ್ರಮಕ್ಕೆ ಭಾರಿ ಉತ್ತೇಜನ ನೀಡುವ ಭಾಗವಾಗಿ 5 ನೇ ತಲೆಮಾರಿನ ಸುಧಾರಿತ ಮಲ್ಟಿ-ರೋಲ್ ಯುದ್ಧ ವಿಮಾನಗಳ ಅಭಿವೃದ್ಧಿಯನ್ನು ಪ್ರಾರಂಭಿಸಲಾಗಿದೆ ಎಂದು ವಾಯುಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಘೋಷಿಸಿದ್ದಾರೆ.
ಭಾರತೀಯ ವಾಯುಪಡೆಗೆ ಶಸ್ತ್ರಗಳನ್ನು ಪೂರೈಕೆ ಮಾಡಲು ದೇಶೀಯ ಶಸ್ತ್ರಾಸ್ತ್ರ ವೇದಿಕೆಗಳಿಗೆ ಉತ್ತೇಜನ ನೀಡುವ ಸಲುವಾಗಿ, 5 ನೇ ತಲೆಮಾರಿನ ಸ್ಟೀಲ್ತ್ ಫೈಟರ್ ಅನ್ನು ಅಭಿವೃದ್ಧಿಪಡಿಸುವುದು ಅತ್ಯಗತ್ಯ ಎಂದು ಭದೌರಿಯಾ ಹೇಳಿದ್ದಾರೆ. ವಾಯುಸೇನೆಯು ಇನ್ನು ಮುಂದೆ ವಿದೇಶಿ ನಿರ್ಮಿತ 5 ನೇ ಜನರೇಷನ್ ಫೈಟರ್ ಏರ್ಕ್ರಾಫ್ಟ್ ಖರೀದಿಗೆ ಮುಂದಾಗುವುದಿಲ್ಲ, ದೇಶೀಯವಾಗಿಯೇ ಅದನ್ನು ನಿರ್ಮಾಣ ಮಾಡಲು ಉತ್ತೇಜನ ನೀಡುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.
ರಫೇಲ್, ಸುಖೋಯ್ ಸು -30 ಎಂಕೆಐ ಮತ್ತು ಲೈಟ್ ಕಾಂಬಾತ್ ಏರ್ಕ್ರಾಫ್ಟ್ ತೇಜಸ್ ಜೊತೆಗೆ, ಎಎಂಸಿಎ ಮುಂಬರುವ ದಶಕಗಳಲ್ಲಿ ವಾಯುಸೇನೆಯ ಬೆನ್ನೆಲುಬಾಗಿರಲಿದೆ. ಪ್ರಸ್ತುತ ಮೈಕೋಯಾನ್-ಗುರೆವಿಚ್ ಮಿಗ್ -29 ಕೆ ಅನ್ನು ನಿರ್ವಹಿಸುವ ಭಾರತೀಯ ನೌಕಾಪಡೆಯ ವಿಮಾನವಾಹಕ ನೌಕೆಗಳಿಗಾಗಿ 5 ನೇ ತಲೆಮಾರಿನ ಯುದ್ಧವಿಮಾನದ ನೌಕಾ ಆವೃತ್ತಿಯನ್ನು ಸಹ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.