ಸ್ಟಾಕ್ಹೋಲ್ಮ್: 2019ರ ವೈದ್ಯಕೀಯ ಶಾಸ್ತ್ರದಲ್ಲಿ ಅಥವಾ ಔಷಧಕ್ಕಾಗಿನ ನೊಬೆಲ್ ಪ್ರಶಸ್ತಿಯನ್ನು ವಿಜ್ಞಾನಿಗಳಾದ ವಿಲಿಯಂ ಜಿ. ಕೈಲಿನ್, ಪೀಟರ್ ಜೆ. ರಾಟ್ಕ್ಲಿಫ್ ಮತ್ತು ಗ್ರೆಗ್ ಎಲ್. ಸೆಮೆನ್ಜಾ ಅವರಿಗೆ ಘೋಷಣೆ ಮಾಡಲಾಗಿದೆ. “ಜೀವಕೋಶಗಳು ಹೇಗೆ ಗ್ರಹಿಸುತ್ತವೆ ಮತ್ತು ಆಮ್ಲಜನಕದ ಲಭ್ಯತೆಗೆ ಹೊಂದಿಕೊಳ್ಳುತ್ತವೆ” ಎಂಬ ವಿಷಯದ ಬಗೆಗಿನ ಇವರ ಸಂಶೋಧನೆಗಾಗಿ ಪ್ರಶಸ್ತಿಯನ್ನು ನೀಡಲಾಗಿದೆ.
ಈ ಮೂವರು ಕಂಡುಹಿಡಿದ ಸಂಶೋಧನೆಗಳು, ಶರೀರ ವಿಜ್ಞಾನಕ್ಕೆ ಮೂಲಭೂತ ಪ್ರಾಮುಖ್ಯತೆಯನ್ನು ಹೊಂದಿವೆ ಮತ್ತು ರಕ್ತಹೀನತೆ, ಕ್ಯಾನ್ಸರ್ ಮತ್ತು ಇತರ ಅನೇಕ ಕಾಯಿಲೆಗಳ ವಿರುದ್ಧ ಹೋರಾಡಲು ಹೊಸ ತಂತ್ರಗಳ ಭರವಸೆಯನ್ನು ನೀಡಿವೆ ಎಂದು ಕರೋಲಿನ್ಸ್ಕಾ ಇನ್ಸ್ಟಿಟ್ಯೂಟ್ ಹೇಳಿದೆ.
ಈ ಮೂವರ ಪೈಕಿ ಕೈಲಿನ್ ಮತ್ತು ಸೆಮೆನ್ಜಾ ಅಮೆರಿಕದವರಾಗಿದ್ದಾರೆ ಮತ್ತು ರಾಟ್ಕ್ಲಿಫ್ ಬ್ರಿಟಿಷ್ ಮೂಲದವರಾಗಿದ್ದಾರೆ. ಈ ಮೂವರು ವಿಜ್ಞಾನಿಗಳು 9 ಮಿಲಿಯನ್ ಕ್ರೋನರ್ (918,000 ಡಾಲರ್) ನಗದು ಪ್ರಶಸ್ತಿಯನ್ನು ಇವರು ಸಮಾನವಾಗಿ ಹಂಚಿಕೊಳ್ಳಲಿದ್ದಾರೆ. 1901 ರಿಂದ ನೀಡಲಾಗುವ ವಿಭಾಗದಲ್ಲಿ ಇದು 110 ನೇ ಪ್ರಶಸ್ತಿಯಾಗಿದೆ.
ಕೈಲಿನ್ ಹಾರ್ವರ್ಡ್ನಲ್ಲಿ ಕೆಲಸ ಮಾಡುತ್ತಿದ್ದಾರೆ, ಸೆಮೆನ್ಜಾ ಅವರು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದಲ್ಲಿ ಮತ್ತು ರಾಟ್ಕ್ಲಿಫ್ ಬ್ರಿಟನ್ನಿನ ಫ್ರಾನ್ಸಿಸ್ ಕ್ರಿಕ್ ಇನ್ಸ್ಟಿಟ್ಯೂಟ್ನಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.