ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಂಗಳವಾರ ಫ್ರಾನ್ಸಿನಲ್ಲಿ ಮೊದಲ ರಫೇಲ್ ಯುದ್ಧ ವಿಮಾನವನ್ನು ಸ್ವೀಕಾರ ಮಾಡಲಿದ್ದಾರೆ. ಫ್ರೆಂಚ್ ಬಂದರು ನಗರವಾದ ಬೋರ್ಡೆಕ್ಸ್ನಲ್ಲಿ ಹಸ್ತಾಂತರ ಸಮಾರಂಭ ಜರುಗಲಿದೆ. ಇದಾದ ಬಳಿಕ ಸಿಂಗ್ ಅವರು ರಫೆಲ್ ಯುದ್ಧ ವಿಮಾನಕ್ಕೆ ಆಯುಧ ಪೂಜೆಯನ್ನು ನೆರವೇರಿಸಲಿದ್ದಾರೆ. ಪೂಜೆಯ ಬಳಿಕ ಈ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಲಿದ್ದಾರೆ.
ಶಸ್ತ್ರ ಪೂಜೆ ಅಥವಾ ಆಯುಧ ಪೂಜೆ ಪ್ರಾಚೀನ ಹಿಂದೂ ಸಂಪ್ರದಾಯವಾಗಿದ್ದು, ನವರಾತ್ರಿ ಸಂದರ್ಭದಲ್ಲಿ ಇರು ಜರುಗುತ್ತದೆ. ಯೋಧರು ತಮ್ಮ ಶಸ್ತ್ರಾಸ್ತ್ರ ಮತ್ತು ಪರಿಕರಿಗಳಿಗೆ ಈ ದಿನ ಪೂಜೆಯನ್ನು ನೆರವೇರಿಸುತ್ತಾರೆ. ಹಿಂದೆ ಕೇಂದ್ರ ಗೃಹ ಸಚಿವರಾಗಿದ್ದ ಅವಧಿಯನ್ನೂ ಒಳಗೊಂಡಂತೆ ರಾಜನಾಥ್ ಸಿಂಗ್ ಅವರು ಕಳೆದ ಹಲವಾರು ವರ್ಷಗಳಿಂದ ಶಸ್ತ್ರ ಪೂಜೆಯನ್ನು ನೆರವೇರಿಸುತ್ತಾ ಬಂದಿದ್ದಾರೆ.
ರಾಜನಾಥ್ ಸೋಮವಾರದಿಂದ ಎರಡು ದಿನಗಳ ಫ್ರಾನ್ಸ್ ಪ್ರವಾಸವನ್ನು ಕೈಗೊಳ್ಳುತ್ತಿದ್ದಾರೆ, ಭಾರತೀಯ ವಾಯುಸೇನೆಯ ಸಂಸ್ಥಾಪನಾ ದಿನವಾದ ಅ.8ರಂದು ಮೊದಲ ರಫೇಲ್ ಫೈಟರ್ ಜೆಟ್ ಅನ್ನು ವಾಯುಸೇನೆಗೆ ಸೇರ್ಪಡೆಗೊಳಿಸಲಾಗುತ್ತಿದೆ. ಭೇಟಿಯ ಸಂದರ್ಭದಲ್ಲಿ ಫ್ರೆಂಚ್ ರಕ್ಷಣಾ ಸಚಿವ ಫ್ಲಾರೆನ್ಸ್ ಪಾರ್ಲಿಯೊಂದಿಗೆ ವಾರ್ಷಿಕ ರಕ್ಷಣಾ ಮಾತುಕತೆಯನ್ನು ನಡೆಸಲಿದ್ದಾರೆ ಎಂದು ರಕ್ಷಣಾ ಸಚಿವಾಲಯದ ಹೇಳಿಕೆ ತಿಳಿಸಿದೆ.
ರಫೇಲ್ ಜೆಟ್ ಅನ್ನು ಹಸ್ತಾಂತರಿಸುವ ಸಮಾರಂಭವು ಪ್ಯಾರಿಸ್ ನಿಂದ 600 ಕಿ.ಮೀ ದೂರದಲ್ಲಿರುವ ಬೋರ್ಡೆಕ್ಸ್ನ ಮೆರಿಗ್ನಾಕ್ನಲ್ಲಿ ವಿಮಾನ ತಯಾರಕ ಸಂಸ್ಥೆ ಡೆಸಾಲ್ಟ್ ಏವಿಯೇಷನ್ ಸೌಲಭ್ಯದಲ್ಲಿ ನಡೆಯಲಿದೆ.
ರಫೆಲ್ ಯುದ್ಧ ವಿಮಾನವನ್ನು ಹಸ್ತಾಂತರಿಸುವ ಸಮಾರಂಭದಲ್ಲಿ ಭಾಗವಹಿಸುವುದಕ್ಕೂ ಮುನ್ನ ರಾಜನಾಥ್ ಸಿಂಗ್ ಮಂಗಳವಾರ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ಭೇಟಿ ಮಾಡಲಿದ್ದಾರೆ. ನಂತರ, ಉಭಯ ನಾಯಕರು ವಾರ್ಷಿಕ ರಕ್ಷಣಾ ಸಂವಾದವನ್ನು ನಡೆಸಲಿದ್ದಾರೆ.
ಅಕ್ಟೋಬರ್ 9 ರಂದು, ಅವರು ಫ್ರೆಂಚ್ ರಕ್ಷಣಾ ಉದ್ಯಮದ ಸಿಇಒಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ, ಈ ಸಮಯದಲ್ಲಿ ಅವರು 2020ರ ಫೆಬ್ರವರಿ 5-8ರಂದು ಲಕ್ನೋದಲ್ಲಿ ನಡೆಯಲಿರುವ ‘ಮೇಕ್ ಇನ್ ಇಂಡಿಯಾ’ ಮತ್ತು DefExpo ನಲ್ಲಿ ಭಾಗವಹಿಸುವಂತೆ ಸಿಇಒಗಳಿಗೆ ಆಹ್ವಾನವನ್ನು ನೀಡಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.