News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ದೀಪಾವಳಿಗಾಗಿ ಪರಿಸರಸ್ನೇಹಿ ಪಟಾಕಿ ಬಿಡುಗಡೆ

ನವದೆಹಲಿ: ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರು ಶನಿವಾರ ನವದೆಹಲಿಯಲ್ಲಿ ಹಸಿರು ಮತ್ತು ಪರಿಸರಸ್ನೇಹಿ ಪಟಾಕಿಗಳನ್ನು ಬಿಡುಗಡೆ ಮಾಡಿದ್ದಾರೆ. ದೀಪಾವಳಿ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ಪಟಾಕಿಗಳನ್ನು ಬಿಡುಗಡೆ ಮಾಡಲಾಗಿದೆ.

ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸಲ್ಟ್ಸ್ ಲ್ಯಾಬೋರೇಟರಿಯಲ್ಲಿ ಪರಿಸರಸ್ನೇಹಿ ಪಟಾಕಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ಪಟಾಕಿಗಳು ಸೌಂಡ್ ಎಮಿಟಿಂಗ್ ಕ್ರ್ಯಾಕರ್ಸ್, ಪೆನ್ಸಿಲ್, ಫ್ಲವರ್ ಪಾಟ್ ಕ್ರ್ಯಾಕರ್ಸ್ ಮತ್ತು ಸ್ಪಾರ್ಕ್ಲರಸ್‌ಗಳನ್ನು ಒಳಗೊಂಡಿದೆ.

ಈ ಪಟಾಕಿಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ ಸಚಿವರು, “ಈ ಪಟಾಕಿಗಳ ಬಗ್ಗೆ ನಿಜಕ್ಕೂ ಸಂತೋಷವಾಗುತ್ತದೆ, ಈ ಬಾರಿಯ ದೀಪಾವಳಿಗೆ ನಾವು ಇದೇ ಪರಿಸರಸ್ನೇಹಿ ಪಟಾಕಿಗಳನ್ನು ಬಳಸಬೇಕು. ಈ ಪಟಾಕಿಗಳು ಪರಿಸರಕ್ಕೂ ಮಾಲಿನ್ಯವನ್ನು ಉಂಟು ಮಾಡುವುದಿಲ್ಲ ಮತ್ತು ದೀಪಾವಳಿಯಲ್ಲಿ ಪಟಾಕಿ ಸಿಡಿಸುವ ನಮ್ಮ ಸಂಪ್ರದಾಯವನ್ನು ಉಳಿಸಿ ಕೊಡುತ್ತದೆ. ಪಟಾಕಿ ಉತ್ಪಾದನೆಯನ್ನು ನೆಚ್ಚಿಕೊಂಡು ಬದುಕು ಕಟ್ಟಿಕೊಂಡಿರುವ ಹಲವಾರು ಕುಟುಂಬಗಳಿಗೂ ಈ ಪಟಾಕಿಗಳು ಹಬ್ಬದ ಸಂದರ್ಭದಲ್ಲಿ ಸಮೃದ್ಧಿಯನ್ನು ತಂದುಕೊಡಲಿದೆ. ನಮ್ಮ ವಿಜ್ಞಾನಿಗಳಿಗೆ ಧನ್ಯವಾದಗಳು” ಎಂದಿದ್ದಾರೆ.

ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸಲ್ಟ್ ಅಭಿವೃದ್ಧಿಪಡಿಸಿದ ಈ ಪರಿಸರ ಸ್ನೇಹಿ ಪಟಾಕಿಗಳನ್ನು ಉತ್ಪಾದಿಸಲು ಸುಮಾರು 165 ಪಟಾಕಿ ಕಂಪನಿಗಳು ಪರವಾನಿಗೆ ಪಡೆಯಲು ಅರ್ಜಿ ಹಾಕಿವೆ‌. ಇನ್ನು 65 ಕಂಪನಿಗಳು ಮುಂಬರುವ ದಿನಗಳಲ್ಲಿ ಪಟಾಕಿಗಳು ಉತ್ಪಾದನೆಗೆ ಮುಂದಾಗುವ ನಿರೀಕ್ಷೆ ಇದೆ ಎನ್ನಲಾಗಿದೆ.

ಈ ಪರಿಸರ ಸ್ನೇಹಿ ಪಟಾಕಿಗಳಲ್ಲಿ ಗ್ರೀನ್ ಲೋಗೋ ಮತ್ತು ಕ್ವಿಕ್ ರೆಸ್ಪಾನ್ಸ್ ಕೋಡಿಂಗ್ ಸಿಸ್ಟಮ್ ಇದೆ. ಇದು ಇತರ ಪಟಾಕಿಗಳಿಂದ ಈ ಪಟಾಕಿಗಳನ್ನು ಪ್ರತ್ಯೇಕಿಸುತ್ತದೆ. ಇದರಿಂದ ಇದನ್ನು ಸುಲಭವಾಗಿ ಗುರುತಿಸಲೂಬಹುದು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top