ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ‘ಆರೋಗ್ಯ ಮಂಥನ್’ನ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಆಯುಷ್ಮಾನ್ ಭಾರತ್ ಯೋಜನೆಯ ಒಂದು ವರ್ಷ ಪೂರ್ಣಗೊಂಡಿರುವ ಸಲುವಾಗಿ ‘ಆರೋಗ್ಯ ಮಂಥನ್’ ಎಂಬ ಎರಡು ದಿನಗಳ ಕಾರ್ಯಕ್ರಮವನ್ನು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು ಆಯೋಜನೆಗೊಳಿಸಿತ್ತು.
ಸಮಾರಂಭದಲ್ಲಿ ಮೋದಿಯವರು ಆಯುಷ್ಮಾನ್ ಭಾರತ್ ಯೋಜನೆಯ ಹೊಸ ಮೊಬೈಲ್ ಅಪ್ಲಿಕೇಶನ್ ಅನ್ನು ಅನಾವರಣಗೊಳಿಸಿದರು. ಅಲ್ಲದೇ, ‘ಆಯುಷ್ಮಾನ್ ಭಾರತ್ ಸ್ಟಾರ್ಟ್-ಆ್ಯಪ್ ಗ್ರ್ಯಾಂಡ್ ಚಾಲೆಂಜ್’ ಅನ್ನು ಕೂಡ ಬಿಡುಗಡೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸ್ಮರಣಾರ್ಥ ಅಂಚೆಚೀಟಿ ಕೂಡ ಬಿಡುಗಡೆಯಾಗಿದೆ.
ಆಯುಷ್ಮಾನ್ ಭಾರತ್ ಪಿಎಂ-ಜೆಎವೈಯ ಆಯ್ದ ಫಲಾನುಭವಿಗಳೊಂದಿಗೆ ಪ್ರಧಾನಿ ಸಂವಾದ ನಡೆಸಿದ್ದಾರೆ. ಇದೇ ವೇಳೆ PM-JAY ನಲ್ಲಿನ ಪ್ರದರ್ಶನಕ್ಕೆ ಭೇಟಿ ನೀಡಿದ್ದಾರೆ. ಇದು ಕಳೆದ ಒಂದು ವರ್ಷದಲ್ಲಿ ಆಯುಷ್ಮಾನ್ ಯೋಜನೆಯು ಸಾಗಿ ಬಂದ ಹಾದಿಯ ಪ್ರಯಾಣವನ್ನು ಪ್ರದರ್ಶಿಸುತ್ತದೆ.
ಕಳೆದ ವರ್ಷದಲ್ಲಿ ಯೋಜನೆಯ ಅನುಷ್ಠಾನದಲ್ಲಿ ಎದುರಾದ ಸವಾಲುಗಳನ್ನು ಎದುರಿಸಲು ಮತ್ತು ಚರ್ಚಿಸಲು ಮತ್ತು ಅನುಷ್ಠಾನವನ್ನು ಸುಧಾರಿಸುವತ್ತ ಹೊಸ ತಿಳುವಳಿಕೆ ಮತ್ತು ಮಾರ್ಗಗಳನ್ನು ರೂಪಿಸಲು PM-JAY ಯ ಎಲ್ಲಾ ಪ್ರಮುಖ ಪಾಲುದಾರರನ್ನು ಭೇಟಿ ಮಾಡಲು ವೇದಿಕೆಯನ್ನು ಒದಗಿಸುವುದು ಆರೋಗ್ಯ ಮಂಥನ್ನ ಉದ್ದೇಶವಾಗಿತ್ತು.
ಈ ಸಮಾರೋಪದ ಸಂದರ್ಭದಲ್ಲಿ ಆರೋಗ್ಯ ಮಂಥನ್ನ ಪ್ರಮುಖ ಶಿಫಾರಸುಗಳನ್ನು ಪ್ರಸ್ತುತಪಡಿಸಲಾಗಿದೆ.
ಆಯುಷ್ಮಾನ್ ಭಾರತ್ PM-JAYಗೆ ಪ್ರಧಾನಿ ನರೇಂದ್ರ ಮೋದಿ ಅವರು 2018ರ ಸೆಪ್ಟೆಂಬರ್ 23ರಂದು ಚಾಲನೆಯನ್ನು ನೀಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.