ವಸಾಹತುಶಾಹಿಗಳು ಸೇರಿದಂತೆ ಆಕ್ರಮಣಕಾರರ ಸುದೀರ್ಘ ಅವಧಿಯ ಆಡಳಿತವನ್ನು ಕಂಡರೂ ತನ್ನ ಸಂಸ್ಕೃತಿಯನ್ನು ಜತನದಿಂದ ಕಾಪಾಡಿಕೊಂಡು ಬಂದ ಜನರ ದೇಶ ನಮ್ಮದು.
ಸ್ವಾಮಿ ವಿವೇಕಾನಂದರ ಮಾತುಗಳಂತೆ ನಮ್ಮ ಜನರು ವಿಶ್ವಕ್ಕೆ ಸೌಹಾರ್ದತೆ ಮತ್ತು ಸಾರ್ವತ್ರಿಕ ಸ್ವೀಕಾರವನ್ನು ಕಲಿಸಿಕೊಟ್ಟವರು. ಈ ದೇಶದ ಜನರಾದ ನಾವು ನಮ್ಮ ನಾಗರಿಕತೆಯನ್ನು, ನಮ್ಮ ಮೌಲ್ಯಗಳನ್ನು ಬಲಿಷ್ಠವಾಗಿ ಸಮರ್ಥಿಸಿಕೊಂಡು ಬಂದಿದ್ದೇವೆ ಮತ್ತು ಭಾರತವನ್ನು ಎಲ್ಲಾ ಸವಾಲುಗಳಿಂದಲೂ ಕಾಪಾಡಿ ಬಲಿಷ್ಠವನ್ನಾಗಿಸಿದ್ದೇವೆ.
ನಾವು ನಮ್ಮ ಶ್ರೇಷ್ಠತೆಯಿಂದಾಗಿ ‘ವಿಶ್ವ ಗುರು’ ಎಂಬ ಗೌರವವನ್ನು ಎಲ್ಲರಿಂದ ಪಡೆದುಕೊಂಡಿದ್ದವರು ಮತ್ತು ನಮ್ಮ ಪೂರ್ವಜರು ಭಾರತದ ಈ ಶ್ರೇಷ್ಠತೆಯನ್ನು ಪುನಃಸ್ಥಾಪಿಸುವ ಕನಸನ್ನು ಸದಾ ಕಾಣುತ್ತಿದ್ದರು. ಆದರೂ, ನಮ್ಮ ಸ್ವಾತಂತ್ರ್ಯವನ್ನು ಭದ್ರಪಡಿಸುವ ಉತ್ಸಾಹವು ಬೇಗನೆ ಕರಗಿತು. ಗಳಿಕೆಗಳು ಮತ್ತು ಪ್ರಗತಿಯು ಹೆಚ್ಚಾಗಿದ್ದರೂ ವೈಫಲ್ಯಗಳು ಮತ್ತು ಹಿನ್ನಡೆಗಳು ಕೂಡ ಬೃಹತ್ ಪ್ರಮಾಣದಲ್ಲಿವೆ.
2014ರ ಮೇ 26ರ ಸಂಜೆ ನರೇಂದ್ರ ಮೋದಿ ಅವರು 15 ನೇ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ಯುಗಗಳ ತಪ್ಪನ್ನು ಸರಿಪಡಿಸಲು ಇದೇ ಕೊನೆಯ ಅವಕಾಶ ಎಂಬಂತೆ ಇಡೀ ರಾಷ್ಟ್ರವು ಸಾಮೂಹಿಕವಾಗಿ ಮತವನ್ನು ಚಲಾಯಿಸಿತ್ತು,
1.3 ಬಿಲಿಯನ್ ನಾಗರಿಕರ ಭರವಸೆಯ ಬೆಳಕಾಗಿ ಸರ್ಕಾರವು ಕಾರ್ಯವನ್ನು ಆರಂಭಿಸಿತು. ಬಡವರನ್ನು ಬ್ಯಾಂಕಿಗೆ ಕರೆತಂದಿತು, ಮನೆಗಳಿಗೆ ಶೌಚಾಲಯ ನೀಡಿತು, ಅಡುಗೆ ಅನಿಲ ನೀಡಿತು, ವಿದ್ಯುತ್ ಸಂಪರ್ಕ ಕಲ್ಪಿಸಿತು.
ಸರ್ಕಾರಗಳ ಸಾಮಾಜಿಕ-ಆರ್ಥಿಕ ಕಾರ್ಯಸೂಚಿಯ ಅದ್ಭುತ ಲಾಭಗಳು ರಾಷ್ಟ್ರೀಯ ಭದ್ರತಾ ಕಾರ್ಯಸೂಚಿಯನ್ನು ಭದ್ರಪಡಿಸುವ ಪ್ರಯತ್ನಗಳಿಗೆ ಸಮಾನಾಂತರವಾಗಿ ನಡೆಯುತ್ತವೆ. ಮೋದಿ ಸರ್ಕಾರದ ನೇತೃತ್ವದಲ್ಲಿರುವ ಭಾರತವನ್ನು ಪಟ್ಟಭದ್ರರಿಗೆ ಸುಲಿಗೆ ಮಾಡಲಾಗಲಿಲ್ಲ. ಸರ್ಜಿಕಲ್ ಸ್ಟ್ರೈಕ್ ದಾಳಿಗಳು ಮತ್ತು ಬಾಲಕೋಟ್ ವೈಮಾನಿಕ ದಾಳಿಗಳು ಹೊಸ ಸಾಮಾನ್ಯತೆಯನ್ನು ವ್ಯಾಖ್ಯಾನಿಸಿವೆ. ರಕ್ಷಣಾ ಸಂಗ್ರಹಣೆಗಳಾದ ರಫೇಲ್ ಜೆಟ್ಗಳು ಮತ್ತು ಅಪಾಚೆ ಹೆಲಿಕಾಪ್ಟರ್ಗಳ ಮೇಲಿನ ವ್ಯಯ ನಮ್ಮ ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿದೆ.
ಸಂಕ್ಷಿಪ್ತವಾಗಿ ಹೇಳುವುದಾದರೆ ಎರಡನೇಯ ಅವಧಿಯ ಮೋದಿ ಸರ್ಕಾರವೆಂಬುದು ಮೂಲಭೂತ ಅಂಶಗಳನ್ನು ಒದಗಿಸುವುದರ ದ್ಯೋತಕವಾಗಿ ಪ್ರತಿಫಲಿತವಾಗಿದೆ. ಜನರಿಗೆ ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಯೋಗಕ್ಷೇಮವನ್ನು ಭದ್ರಪಡಿಸುವುದು, ಆರ್ಥಿಕತೆಯನ್ನು ಹೆಚ್ಚಿಸುವ ಸಾಧನಗಳನ್ನು ಒದಗಿಸುವುದು, ಆಕ್ರಮಣಕಾರಿ ಕೃತ್ಯಗಳಿಗೆ ಪ್ರತಿಕ್ರಿಯಿಸಲು ನಮ್ಮ ಪಡೆಗಳಿಗೆ ಅಧಿಕಾರ ನೀಡುವುದು ಈ ಮೂಲಭೂತ ಅಂಶಗಳಾಗಿವೆ.
ಇದರಿಂದಾಗಿ, 2019 ರ ಲೋಕಸಭಾ ಚುನಾವಣೆಯಲ್ಲಿ ಮತದಾರರು ಬಿಜೆಪಿಯನ್ನು ಅಭೂತಪೂರ್ವವಾಗಿ ವಿಜಯಿಯನ್ನಾಗಿ ಮಾಡಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಮೋದಿಯ ಮೊದಲ ಸರ್ಕಾರ ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ಗಮನ ನೀಡಿತ್ತು, ಮೋದಿಯ ಎರಡನೆಯ ಅವಧಿಯ ಸರ್ಕಾರ ಮೊದಲ ಅವಧಿಯಲ್ಲಿ ಹಾಕಿದ ಅಡಿಪಾಯಗಳನ್ನು ಕ್ರೋಢಿಕರಿಸುತ್ತಿದೆ. ಈ ಕಾರ್ಯವು ಮೇ 31 ರಂದು ಸರ್ಕಾರ ಪ್ರಮಾಣವಚನ ಸ್ವೀಕರಿಸಿದ ದಿನದಿಂದಲೇ ಪ್ರಾರಂಭವಾಗಿದೆ.
ಇತ್ತೀಚೆಗೆ ಮುಕ್ತಾಯಗೊಂಡ ಸಂಸತ್ತಿನ ಅಧಿವೇಶನವು ಸಾರ್ವಕಾಲಿಕ ಅತ್ಯಂತ ಉತ್ಪಾದಕವಾದದ್ದು, ಅನೇಕ ಮಹತ್ವದ ಮಸೂದೆಗಳನ್ನು ಇಲ್ಲಿ ಅಂಗೀಕರಿಸಲಾಯಿತು.
ಗೌರವಾನ್ವಿತ ಪ್ರಧಾನ ಮಂತ್ರಿಯವರು ಎರಡನೆಯ ಅವಧಿಯಲ್ಲಿ ಹಾಕಿದ ಮೊದಲ ಸಹಿಯು ನಮ್ಮ ರಕ್ಷಣಾ ಸಿಬ್ಬಂದಿಯ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಇದು ನಮ್ಮ ಗಡಿಗಳನ್ನು ರಕ್ಷಿಸುವವರ ಕಲ್ಯಾಣಕ್ಕಾಗಿ ಸರ್ಕಾರ ಬದ್ಧತೆಯನ್ನು ತೋರಿಸುತ್ತದೆ.
ನಮ್ಮ ತನಿಖಾ ಸಂಸ್ಥೆಗಳನ್ನು ಭದ್ರಗೊಳಿಸುವ ಅಗತ್ಯವನ್ನು ಸರ್ಕಾರವು ಅರ್ಥಮಾಡಿಕೊಂಡಿದೆ, ಮುಕ್ತ, ನ್ಯಾಯಯುತ ಮತ್ತು ನಿಷ್ಪಕ್ಷಪಾತ ತನಿಖೆಗಳನ್ನು ನಡೆಸಲು ಇದು ಅತ್ಯಂತ ಅಗತ್ಯವೂ ಆಗಿದೆ.
ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ (ಯುಎಪಿಎ)ಯ ಅನುಮೋದನೆಯಿಂದಾಗಿ ‘ವ್ಯಕ್ತಿಗಳನ್ನು ಭಯೋತ್ಪಾದಕರು ಎಂದು ಹೆಸರಿಸಲು ಅವಕಾಶ ಸಿಕ್ಕಿದೆ. ಈ ಕಾಯ್ದೆಯ ಯಾವುದೇ ದುರುಪಯೋಗಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ವ್ಯವಸ್ಥೆಯನ್ನು ತರುವುದಾಗಿ ಗೃಹ ಸಚಿವ ಅಮಿತ್ ಶಾ ಅವರು ಖಚಿತಪಡಿಸಿದ್ದಾರೆ.
ಭೀಕರ 26/11 ಮುಂಬಯಿ ಭಯೋತ್ಪಾದಕ ದಾಳಿಯ ನಂತರ ಅಂಗೀಕರಿಸಲ್ಪಟ್ಟ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಮಸೂದೆಯು ಬಲಿಷ್ಠವಾಗಿರಲಿಲ್ಲ. ಆದ್ದರಿಂದ, ಮೂಲ ಕಾಯ್ದೆ ಜಾರಿಗೆ ಬಂದ ಸುಮಾರು ಒಂದು ದಶಕದ ನಂತರ ರಾಷ್ಟ್ರೀಯ ತನಿಖಾ ಸಂಸ್ಥೆಯ ವ್ಯಾಪ್ತಿಯನ್ನು ವಿಸ್ತರಿಸುವ ತಿದ್ದುಪಡಿಯನ್ನು ತರಲಾಯಿತು.
ರಾಷ್ಟ್ರೀಯ ತನಿಖಾ ಸಂಸ್ಥೆ ಈಗ ಭಾರತದ ಭೂಪ್ರದೇಶದ ಹೊರಗೂ ಮಾಡಿದ ಅಪರಾಧಗಳನ್ನೂ ವಿಚಾರಣೆಗೆ ಒಳಪಡಿಸಬಹುದು. ಈ ಅಪರಾಧಗಳಲ್ಲಿ ಮಾನವ ಕಳ್ಳಸಾಗಣೆ, ನಕಲಿ ಕರೆನ್ಸಿಗಳು, ನಿಷೇಧಿತ ಶಸ್ತ್ರಾಸ್ತ್ರಗಳ ತಯಾರಿಕೆ ಅಥವಾ ಮಾರಾಟ, ಸೈಬರ್ ಭಯೋತ್ಪಾದನೆ ಮತ್ತು ಸ್ಫೋಟಕ ಪದಾರ್ಥಗಳ ಕಾಯ್ದೆ 1908 ರ ಅಡಿಯಲ್ಲಿ ಎಣಿಕೆ ಮಾಡಲಾದ ಅಪರಾಧಗಳು ಸೇರಿವೆ. ಈ ಕಾನೂನು ಭಯೋತ್ಪಾದನೆ ಮತ್ತು ಉಗ್ರವಾದದ ಬಗ್ಗೆ ಶೂನ್ಯ ಸಹಿಷ್ಣುತೆಯ ಭರವಸೆಯನ್ನು ನೀಡುತ್ತದೆ.
ನಮ್ಮ ಸಂವಿಧಾನದಲ್ಲಿ ತಾತ್ಕಾಲಿಕ ನಿಬಂಧನೆಯಾಗಿದ್ದ 370 ನೇ ವಿಧಿಯನ್ನು ರದ್ದುಪಡಿಸುವುದು ಬಿಜೆಪಿ ಪ್ರಣಾಳಿಕೆಯಲ್ಲಿನ ಪ್ರಮುಖ ವಿಷಯವಾಗಿತ್ತು. ಮುಖ್ಯವಾಹಿನಿಯ ಭಾರತದೊಂದಿಗೆ ಜಮ್ಮು ಮತ್ತು ಕಾಶ್ಮೀರದ ಸಂಪೂರ್ಣ ಏಕೀಕರಣವನ್ನು ಸಾಧಿಸಲು 370 ನೇ ವಿಧಿಯನ್ನು ರದ್ದುಪಡಿಸುವುದು ಅಗತ್ಯವಾಗಿತ್ತು.
ಭಾರತದ ಕಾನೂನು ಮಂತ್ರಿಯಾಗಿ ಮತ್ತು ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಡಾ. ಅಂಬೇಡ್ಕರ್ ಅವರನ್ನು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ಕಾಯ್ದೆಯನ್ನು ರೂಪಿಸುವಂತೆ ಶೇಖ್ ಅಬ್ದುಲ್ಲಾ ಅವರು ಕೇಳಿದಾಗ, ಅವರು ಪ್ರತಿಕ್ರಿಯಿಸಿ, “ಭಾರತವು ಕಾಶ್ಮೀರವನ್ನು ರಕ್ಷಿಸಬೇಕು, ತನ್ನ ಜನರಿಗೆ ಆಹಾರವನ್ನು ನೀಡಬೇಕು, ಕಾಶ್ಮೀರಿಗಳಿಗೆ ಭಾರತದಾದ್ಯಂತ ಸಮಾನ ಹಕ್ಕುಗಳನ್ನು ನೀಡಬೇಕು ಎಂದು ನೀವು ಬಯಸುತ್ತೀರಿ. ಆದರೆ ನೀವು ಕಾಶ್ಮೀರದಲ್ಲಿ ಭಾರತ ಮತ್ತು ಭಾರತೀಯರಿಗೆ ಎಲ್ಲಾ ಹಕ್ಕುಗಳನ್ನು ನಿರಾಕರಿಸಲು ಬಯಸುತ್ತೀರಿ. ನಾನು ಭಾರತದ ಕಾನೂನು ಸಚಿವ. ರಾಷ್ಟ್ರೀಯ ಹಿತಾಸಕ್ತಿಗಳಿಗೆ ಮಾರಕವಾದ ಈ ನಿಲುವಿಗೆ ನಾನು ಬೆಂಬಲು ನೀಡಲು ಸಾಧ್ಯವಿಲ್ಲ. ಜಮ್ಮು ಕಾಶ್ಮೀರದ ಹೆಣ್ಣುಮಕ್ಕಳು ರಾಜ್ಯದ ಹೊರಗಿನವರನ್ನು ಮದುವೆಯಾಗುವುದನ್ನು ವಿರೋಧಿಸುವ 370 ನೇ ವಿಧಿ ಮಹಿಳಾ ವಿರೋಧಿ. ದುರ್ಬಲ ವರ್ಗಗಳಿಗೆ ಸಮಾನ ಅವಕಾಶಗಳನ್ನು ಕಸಿದುಕೊಂಡಿದ್ದರಿಂದ ಅದು ದಲಿತ ವಿರೋಧಿ ಮತ್ತು ಬುಡಕಟ್ಟು ವಿರೋಧಿ” ಎಂದು ಪ್ರತಿಪಾದಿಸಿದ್ದರು.
ಜಮ್ಮು ಮತ್ತು ಕಾಶ್ಮೀರದಲ್ಲಿನ ವಾಲ್ಮೀಕಿಗಳಿಗೆ ಅಲ್ಲಿನ ಶಾಶ್ವತ ನಿವಾಸವನ್ನು ನಿರಾಕರಿಸಿದ್ದರಿಂದ ಅವರು ಜೀವನಪರ್ಯಂತ ನೈರ್ಮಲ್ಯ ಕಾರ್ಮಿಕರಾಗಿಯೇ ಉಳಿಯಬೇಕಾಯಿತು.
370 ನೇ ವಿಧಿಯ ಪರಿಣಾಮವಾಗಿ, ಶಿಕ್ಷಣದ ಹಕ್ಕು ಕಾಶ್ಮೀರದಲ್ಲಿ ಮೂಲಭೂತ ಹಕ್ಕಾಗಿರಲಿಲ್ಲ. ಬಾಲ್ಯ ವಿವಾಹದ ತಡೆಗಟ್ಟುವಿಕೆಯಂತಹ ಹಲವಾರು ಪ್ರಮುಖ ಕಾಯ್ದೆಗಳು ಅಲ್ಲಿ ಅನುಷ್ಠಾನಕ್ಕೇ ಬರಲಿಲ್ಲ.
ಇದಲ್ಲದೆ, ಲಡಾಖ್ ಅನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವಾಗಿ ರಚಿಸುವುದು ದೀರ್ಘಕಾಲದ ಬೇಡಿಕೆಯಾಗಿತ್ತು, ಅದು ಆ ಪ್ರದೇಶದ ಜನರ ಆಕಾಂಕ್ಷೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.
ಮೋದಿಯ ಎರಡನೇ ಅವಧಿಯ ಸರ್ಕಾರವು ತನ್ನ ಜನರಿಗೆ ಸಾಮಾಜಿಕ ಒಳಿತನ್ನು ಸಾಧಿಸಲು ಶ್ರಮಿಸುತ್ತದೆ ಮತ್ತು ಉತ್ತಮವಾಗಿ ರೂಪಿಸಲಾದ ಸಂಪ್ರದಾಯಗಳು ಮತ್ತು ಸಾಂವಿಧಾನಿಕ ತತ್ವಗಳಿಗೆ ಬದ್ಧವಾಗಿ ಕಾರ್ಯನಿರ್ವಹಿಸುತ್ತಿದೆ. ಕನಿಷ್ಠ ಸರ್ಕಾರ ಮತ್ತು ಗರಿಷ್ಠ ಆಡಳಿತದ ಮಂತ್ರದ ಮೂಲಕ ನಿಜವಾಗಿಯೂ ಜನರ, ಜನರಿಂದ ಮತ್ತು ಜನರಿಗಾಗಿನ ಸರ್ಕಾರವಾಗಿ ಸಾಧನೆಗಳನ್ನು ಸಾಧಿಸಿ ತೋರಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.