ಮುಂಬಯಿ: ಭಾರತವು ಮಹಾತ್ಮ ಗಾಂಧಿಯ 150 ನೇ ಜನ್ಮದಿನಾಚರಣೆಯನ್ನು ಆಚರಿಸಲು ಸನ್ನದ್ಧವಾಗುತ್ತಿದೆ. ಈ ಹಿನ್ನಲೆಯಲ್ಲಿ ಗಾಂಧೀಜಿಗೆ ಅತ್ಯಂತ ನಿಕಟವಾಗಿದ್ದ ಚರಕವನ್ನು ಅಕ್ಟೋಬರ್ 2 ರಂದು ಆಜಾದ್ ಮೈದಾನದಲ್ಲಿ ಇಡಲಾಗುತ್ತಿದೆ. ಇಲ್ಲಿ ಚರಕವನ್ನು ಕೇವಲ ಪ್ರದರ್ಶನಕ್ಕಾಗಿ ಇಡುತ್ತಿಲ್ಲ ಬದಲಾಗಿ ಚರಕದ ಮೂಲಕ ಹೇಗೆ ನೇಯುವುದು ಎಂಬುದನ್ನೂ ಜನರು ಕಲಿಯಬಹುದಾಗಿದೆ. ಪರಿಣಿತರು ಜನರಿಗೆ ಇಲ್ಲಿ ತರಬೇತಿಯನ್ನು ನೀಡಲಿದ್ದಾರೆ.
ನೇಯುವ ಚಕ್ರ ಅಥವಾ ಚರಕ ಕೇವಲ ಕ್ರಾಂತಿಯ ಸಂಕೇತ ಮಾತ್ರವಲ್ಲ, ಅದು ಸ್ವಾವಲಂಬನೆ, ಪರಿಶ್ರಮ ಮತ್ತು ದೃಢ ನಿಶ್ಚಯದ ಶಕ್ತಿಗೆ ಸಮಾನಾರ್ಥಕ ಸಂಕೇತವಾಗಿದೆ. ಸ್ವಾತಂತ್ರ್ಯ ಪೂರ್ವದಿಂದ ಹಿಡಿದು ಇಲ್ಲಿಯವರೆಗೆ ಚರಕ ಒಂದು ಚಳುವಳಿಯನ್ನೇ ಪ್ರಾರಂಭಿಸಿದೆ ಮತ್ತು ಭಾರತೀಯ ನೇಯುವ ಉದ್ಯಮಕ್ಕೆ ಪ್ರಗತಿಯ ಹಾದಿಯನ್ನು ಗುರುತಿಸಿಕೊಟ್ಟಿದೆ.
ಬ್ರಿಟಿಷ್ ಉತ್ಪಾದಿತ ಉತ್ಪನ್ನಗಳನ್ನು ಖರೀದಿಸುವುದಿಲ್ಲ ಎಂದು ಭಾರತೀಯರು ಪಣತೊಟ್ಟು ಗಾಂಧೀಜಿ ಕರೆಯಂತೆ ಚರಕದ ಮೂಲಕ ನೇಯ್ದು ಬಟ್ಟೆಯನ್ನು ತಯಾರಿಸಿದರು. ಭಾರತದಲ್ಲಿ ತಯಾರಿಸಿದ ಹತ್ತಿಯ ಬಟ್ಟೆಗಳನ್ನೇ ಬಳಸಬೇಕೆಂದು ಗಾಂಧೀಜಿ ಜನರಿಗೆ ಮನವಿಯನ್ನೂ ಆ ವೇಳೆ ಮಾಡಿಕೊಂಡಿದ್ದರು.
ಸ್ವದೇಶಿ ಆಂದೋಲನವು ಭಾರತೀಯ ಹತ್ತಿ ಜವಳಿಗಳ ಬೇಡಿಕೆಯನ್ನು ಹೆಚ್ಚಿಸಿತು ಮತ್ತು ಭಾರತೀಯ ಜವಳಿ ಉದ್ಯಮವು ತುಂಬಾ ಎತ್ತರಕ್ಕೆ ಬೆಳೆಯುವಂತೆ ಮಾಡಿತು.
ಚರಕ ತರಬೇತಿ ಹೊರತಾಗಿ ಜನರು ಇಲ್ಲಿ ಗಾಂಧೀಜಿಯವರ ಪುಸ್ತಕಗಳನ್ನು ಶೇ. 50 ರಷ್ಟು ರಿಯಾಯಿತಿಯಲ್ಲಿ ಖರೀದಿಸಬಹುದಾಗಿದೆ. ಸಣ್ಣ ಗಾತ್ರದ ಸ್ಮರಣಿಕೆಯ ಚರಕಗಳೂ ಇಲ್ಲಿ ಇರಲಿದ್ದು, ಇವುಗಳನ್ನು ಜನರು ಖರೀದಿ ಮಾಡಬಹುದಾಗಿದೆ.
ಗಾಂಧಿ ಜಯಂತಿ ವಾರದಲ್ಲಿ, ಅದೇ ಸ್ಥಳದಲ್ಲಿ ಗಾಂಧಿಯನ್ನು ಆಧರಿಸಿದ ಚಲನಚಿತ್ರಗಳ ಪ್ರದರ್ಶನವೂ ಇರಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.