ಲಂಡನ್: 1980ರ ದಶಕದಲ್ಲಿ ಪಾಕಿಸ್ಥಾನದಲ್ಲಿ ಉಗ್ರವಾದಿ ಶಕ್ತಿಗಳು ಬೆಳೆಯತೊಡಗಿದವು ಎಂದು ವಿಶ್ವಸಂಸ್ಥೆಯ ಭಾಷಣದ ವೇಳೆ ಹೇಳಿಕೊಂಡಿರುವ ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಅವರ ವಿರುದ್ಧ ಬಲೂಚ್ ಹೋರಾಟಗಾರ ಮೆಹ್ರನ್ ಮರ್ರಿ ಕಿಡಿಕಾರಿದ್ದಾರೆ. ಇದನ್ನು ಒಪ್ಪಿಕೊಳ್ಳುವ ಮೂಲಕ ಇಮ್ರಾನ್ ಅವರು ತನ್ನ ದೇಶದ ಇಮೇಜ್ ಅನ್ನು ಜಾಗತಿಕ ಮಟ್ಟದಲ್ಲಿ ಸರಿಪಡಿಸಲು ಪ್ರಯತ್ನಿಸುತ್ತಿದ್ದಾರೆಯೇ ಹೊರತು ಉಗ್ರವಾದದ ಬಗ್ಗೆ ಅವರು ಪ್ರಾಮಾಣಿಕವಾದ ನಡೆಯನ್ನು ಅನುಸರಿಸುತ್ತಿಲ್ಲ ಎಂದಿದ್ದಾರೆ.
“ಇದೇ ಮೊದಲ ಬಾರಿಗೆ ಪಾಕಿಸ್ಥಾನದ ಕೈಗೊಂಬೆ ಪ್ರಧಾನಿಯವರು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಂತಹ ಅಂತಾರಾಷ್ಟ್ರೀಯ ವೇದಿಕೆಯಲ್ಲಿ 80 ಮತ್ತು 90ರ ದಶಕದಲ್ಲಿ ನಮ್ಮ ದೇಶ ಉಗ್ರವಾದವನ್ನು ಪೋಷಿಸಿತ್ತು, ಅವರಿಗೆ ತರಬೇತಿಯನ್ನು ನೀಡಿತ್ತು ಎಂಬುದನ್ನು ಒಪ್ಪಿಕೊಂಡಿದ್ದಾರೆ. ಭಯೋತ್ಪಾದನೆ ಮಾಡಿದ ಕೃತ್ಯಗಳಿಗೆ ಅವರೀಗ ಕ್ಷಮೆ ಕೇಳುತ್ತಿದ್ದಾರೆ. ಅವರ ಹೇಳಿಕೆಯನ್ನು ಪ್ರತಿಯೊಬ್ಬರೂ ಕೇಳಬೇಕೆಂದು ನನ್ನ ಕೋರಿಕೆ. ಕೇವಲ ಅಮೆರಿಕಾದಿಂದ ಅನುದಾನವನ್ನು ಗಿಟ್ಟಿಸಿಕೊಳ್ಳುವ ಸಲುವಾಗಿ ಅವರು ಇಂತಹ ಹೇಳಿಕೆ ನೀಡುತ್ತಿದ್ದಾರೆ” ಎಂದು ಮರ್ರಿ ಹೇಳಿದ್ದಾರೆ.
“ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಸೆ.27ರಂದು ಮಾಡಿದ ಭಾಷಣದಲ್ಲಿ ಇಮ್ರಾನ್ ಅವರು 1980 ಮತ್ತು 90ರಲ್ಲಿ ಪಾಕಿಸ್ಥಾನವು ಜಿಹಾದಿಗಳಿಗೆ ತರಬೇತಿಯನ್ನು ನೀಡುತ್ತಿತ್ತು, ನಂತರ ಬಂದ ಸರ್ಕಾರಗಳು ಅದನ್ನು ಮುಂದುವರೆಸಿದವು ಎಂದಿದ್ದಾರೆ. ಖಾನ್ ಅವರು ತಮ್ಮ ದೇಶವನ್ನು ಇಸ್ಲಾಂನ ಚಾಂಪಿಯನ್ ಎಂದು ಬಿಂಬಿಸಲು ಪ್ರಯತ್ನಿಸಿದ್ದಾರೆ. ಕೆಲವೊಂದು ಮಂತ್ರ ಪಠಿಸಿ ಅವರು ಇಸ್ಲಾಮ್ ಜಗತ್ತಿನ ಬೆಂಬಲ ಪಡೆಯಲು ಪ್ರಯತ್ನಿಸಿದ್ದಾರೆ. ಆದರೆ ಪ್ರತಿಯೊಬ್ಬರಿಗೂ ಪಾಕಿಸ್ಥಾನ. ಅದರ ಸೇನೆ ಮತ್ತು ಕೈಗೊಂಬೆ ಸರ್ಕಾರದ ಸತ್ಯಾಸತ್ಯತೆ ಗೊತ್ತಿದೆ” ಎಂದಿದ್ದಾರೆ.
“ವಿಶ್ವಸಂಸ್ಥೆಯಲ್ಲಿ ಕಾಶ್ಮೀರದ ಬಗೆಗಿನ ನಿರ್ಣಯ ಅಂಗೀಕರಿಸಲು ಬೆಂಬಲ ಪಡೆಯುವಲ್ಲಿನ ಡೆಡ್ಲೈನ್ ಅನ್ನು ತಪ್ಪಿಸಿಕೊಳ್ಳುವ ಮೂಲಕ ಪಾಕಿಸ್ಥಾನದ ಅಸಮರ್ಥತೆಯು ಜಗತ್ತಿನ ಮುಂದೆ ಅನಾವರಣಗೊಂಡಿದೆ. ನಿಸ್ಸಂಶಯವಾಗಿ ಅವರಿಗೆ ಸಂಖ್ಯಾ ಬಲವಿಲ್ಲ. ಆದರೆ ಅವರು ಗಡುವನ್ನು ತಪ್ಪಿಸಿಕೊಂಡಿರುವುದು ಪ್ರೌಢ ಶಾಲೆಯ ಮಕ್ಕಳು ಹೋಂವರ್ಕ್ ಮಾಡುವುದನ್ನು ತಪ್ಪಿಸಿಕೊಂಡಂತೆ ತೋರುತ್ತದೆ”ಎಂದು ಅವರು ಹೇಳಿದರು.
ಕಾಶ್ಮೀರ ಸಮಸ್ಯೆಯನ್ನು ಅಂತಾರಾಷ್ಟ್ರೀಕರಿಸಲು ಪಾಕಿಸ್ಥಾನ ತೀವ್ರವಾಗಿ ಪ್ರಯತ್ನಿಸುತ್ತಿದೆ ಆದರೆ ಜಾಗತಿಕ ಸಮುದಾಯವು ಇಸ್ಲಾಮಾಬಾದ್ ಅನ್ನು ದೂಷಿಸುತ್ತಿದೆ ಮತ್ತು ಭಾರತದ ನಿಲುವಿನ ಪರ ನಿಂತಿವೆ. ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ 370 ನೇ ವಿಧಿಯನ್ನು ರದ್ದುಗೊಳಿಸಿದ ಭಾರತದ ನಿರ್ಧಾರವನ್ನು ಭಾರತ ಬೆಂಬಲಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.