ನವದೆಹಲಿ: ಮಹಾತ್ಮ ಗಾಂಧಿಯವರ 150 ನೇ ಜನ್ಮದಿನಾಚರಣೆಗೆ ಕೆಲವೇ ದಿನಗಳು ಬಾಕಿ ಇರುವ ಸಂದರ್ಭದಲ್ಲಿ, ಪುಣೆ ಮೂಲದ ನ್ಯಾಷನಲ್ ಫಿಲ್ಮ್ ಆರ್ಚೈವ್ ಆಫ್ ಇಂಡಿಯಾ (ಎನ್ಎಫ್ಎಐ) ರಾಷ್ಟ್ರಪಿತನ ಬಗೆಗಿನ ಎಡಿಟ್ ಆಗಿರದ ಫಿಲ್ಮ್ ಅನ್ನು ಒಳಗೊಂಡ 30 ರೀಲ್ಗಳನ್ನು ಪತ್ತೆ ಮಾಡಿದೆ. ಒಟ್ಟು ಆರು ಗಂಟೆಗಳ ದೃಶ್ಯವನ್ನು ಈ ರೀಲ್ ಹೊಂದಿದೆ ಎಂದು ಹೇಳಲಾಗಿದೆ.
“ಇದು ನಿಜಕ್ಕೂ ಎನ್ಎಫ್ಎಐಗೆ ಬಹಳ ಅದ್ಭುತವಾದ ಆವಿಷ್ಕಾರವಾಗಿದೆ. ಈ ಸಮಯದಲ್ಲಿ ಇಡೀ ಪ್ರಪಂಚವು ಮಹಾತ್ಮ ಗಾಂಧಿಯವರ 150 ನೇ ಜನ್ಮದಿನಾಚರಣೆಯನ್ನು ಆಚರಿಸುತ್ತಿದೆ. ಈ ಸಂಗ್ರಹಣೆಯು ಕೆಲವು ಅಪರೂಪದ ತುಣುಕಗಳನ್ನು ಹೊಂದಿರುವಂತೆ ತೋರುತ್ತಿದೆ. ಆದರೆ ಇದರಲ್ಲಿನ ಅನೇಕ ದೃಶ್ಯಗಳು ಈಗಗಾಲೇ ಲಭ್ಯವಿರುವ ಕಿರುಚಿತ್ರಗಳು ಮತ್ತು ಸಾಕ್ಷ್ಯಚಿತ್ರಗಳ ಭಾಗವಾಗಿದೆ. ಇದರಲ್ಲಿನ ಕೆಲವು ದೃಶ್ಯಗಳನ್ನು ಬಳಸಲಾಗಿದೆ ಆದರೆ ಕೆಲವು ದೃಶ್ಯಗಳು ಅನನ್ಯವಾಗಿ ತೋರುತ್ತಿವೆ ”ಎಂದು ಎನ್ಎಫ್ಎಐ ನಿರ್ದೇಶಕ ಪ್ರಕಾಶ್ ಮ್ಯಾಗ್ಡಮ್ ಹೇಳಿದ್ದಾರೆ.
ಆ ಕಾಲದ ಹಲವಾರು ಪ್ರಮುಖ ಚಲನಚಿತ್ರ ಸ್ಟುಡಿಯೋಗಳಾದ ಪ್ಯಾರಾಮೌಂಟ್, ಪ್ಯಾಥೆ, ವಾರ್ನರ್, ಯೂನಿವರ್ಸಲ್, ಬ್ರಿಟಿಷ್ ಮೊವಿಟೋನ್, ವಾಡಿಯಾ ಮೊವಿಟೋನ್ ಮುಂತಾದವುಗಳಿಂದ ಈ 35 ಎಂಎಂ ಸೆಲ್ಯುಲಾಯ್ಡ್ ಫೂಟೇಜ್ಗಳು, ಎಡಿಟ್ ಮಾಡಲಾಗದ ಮತ್ತು ಶೀರ್ಷಿಕೆ ಕಾರ್ಡ್ಗಳನ್ನು ಹೊಂದಿರುವ ಸ್ಟಾಕ್ ಶಾಟ್ಗಳನ್ನು ಸಂಗ್ರಹ ಮಾಡಲಾಗಿದೆ ಎಂದು ಹೇಳಲಾಗಿದೆ.
ಗಾಂಧೀಜಿಯವರ ಚಿತಾಭಸ್ಮವನ್ನು ಮದ್ರಾಸಿನಿಂದ ರಾಮೇಶ್ವರಕ್ಕೆ ತೆಗೆದುಕೊಂಡು ಹೋಗುತ್ತಿರುವ ದೃಶ್ಯವನ್ನು ಹೊಂದಿರುವ ಫುಟೇಜ್ ಅತ್ಯಂತ ಅನನ್ಯ ಎನಿಸಿದೆ. ಗಾಂಧಿ ಚಿತಾಭಸ್ಮವನ್ನು ಎದುರುಗೊಳ್ಳಲು ಜನಸಾಗರ ಸೇರಿರುವ ದೃಶ್ಯ ಇದರಲ್ಲಿದೆ.
The rare footage includes visuals of immersion of #Gandhiji’s ashes with several important politicians from #TamilNadu taking part in the immersion ceremony.#Gandhi150@MIB_India @PrakashJavdekar @Mahatma150 pic.twitter.com/ehoFW3WL1n
— NFAI (@NFAIOfficial) September 27, 2019
A very wonderful discovery at a time, celebrating the 150th birth anniversary of #MahatmaGandhi. NFAI has discovered 30 reels of unedited footage on #Mahatma. The highlight of the discovery is rare footage of a special train carrying Gandhi’s ashes from Madras to Rameshwaram. pic.twitter.com/grQACt9Pb7
— NFAI (@NFAIOfficial) September 27, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.