ಚೆನ್ನೈ: ಎರಡು ದಿನಗಳ ಚೆನ್ನೈ ಭೇಟಿಯಲ್ಲಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಬುಧವಾರ ಭಾರತೀಯ ತಟ ರಕ್ಷಣಾ ನೌಕೆ (ಐಸಿಜಿಎಸ್) ವರಾಹವನ್ನು ಅಧಿಕೃತವಾಗಿ ಕರ್ತವ್ಯಕ್ಕೆ ನಿಯೋಜಿಸಿದರು.
ವರಾಹ ಕಡಲತಡಿಯ ಗಸ್ತು ವಾಹನವಾಗಿದೆ. ರಕ್ಷಣಾ ಸಚಿವಾಲಯದೊಂದಿಗೆ ಒಪ್ಪಂದ ಮಾಡಿಕೊಂಡು ಖಾಸಗಿ ಸಂಸ್ಥೆ ಲಾರ್ಸೆನ್ ಮತ್ತು ಟೌಬ್ರೊ (ಎಲ್ & ಟಿ) ಇದನ್ನು ಅಭಿವೃದ್ಧಿಪಡಿಸಿದೆ.
ಅಲ್ಟ್ರಾ-ಅಡ್ವಾನ್ಸ್ಡ್ ನ್ಯಾವಿಗೇಷನ್ ಮತ್ತು ಸಂವಹನ ಸೆನ್ಸಾರ್ಗಳಂತಹ ವೈಶಿಷ್ಟ್ಯಗಳೊಂದಿಗೆ ಎಲ್ & ಟಿ ತಯಾರಿಸಿರುವ ಏಳು ಹಡಗುಗಳ ಸರಣಿಯಲ್ಲಿ ಇದು ನಾಲ್ಕನೆಯದು. ಪಶ್ಚಿಮ ಕರಾವಳಿಯ ನವ ಮಂಗಳೂರು ಬಂದರಿನಿಂದ ಕನ್ಯಾಕುಮಾರಿವರೆಗಿನ ವಿಶೇಷ ಆರ್ಥಿಕ ವಲಯವನ್ನು (EEZ) ಒಳಗೊಂಡಂತೆ ವರಾಹ ಕಾರ್ಯನಿರ್ವಹಿಸಲಿದೆ.
“ವರಾಹ” ಎಂಬ ಹೆಸರನ್ನು ಪುರಾಣಗಳಿಂದ ತೆಗೆದುಕೊಳ್ಳಲಾಗಿದೆ. ವರಾಹ ವಿಷ್ಣುವಿನ ಮೂರನೆಯ ಅವತಾರವಾಗಿದೆ. ದಾನವನಾದ ಹಿರಣ್ಯಾಕ್ಷನು ತನ್ನ ಶಕ್ತಿ ಬಲ, ವರಬಲ ಗರ್ವದಿಂದ ಭೂದೇವಿಯನ್ನು ಸಮುದ್ರದಲ್ಲಿ ಬಚ್ಚಿಟ್ಟ ಸಂದರ್ಭದಲ್ಲಿ ಭೂದೇವಿಯನ್ನು ರಕ್ಷಿಸುವ ಸಲುವಾಗಿ ಹಾಗೂ ದುಷ್ಟನಾಗಿದ್ದ ಹಿರಣ್ಯಾಕ್ಷನ ಸಂಹರಿಸುವ ಸಲುವಾಗಿ ವಿಷ್ಣು ಎತ್ತಿದ ಅವತಾರ ವರಾಹಾವತಾರ. ಇದು ತ್ಯಾಗದ ತತ್ವವನ್ನು ನಮಗೆ ನೆನಪಿಸುತ್ತದೆ ಮತ್ತು ಮಾತೃ ಭೂಮಿಯನ್ನು ಉಳಿಸುವ ಕರ್ತವ್ಯವನ್ನು ಪ್ರತಿಪಾದಿಸುತ್ತದೆ ಎಂದು ಸಚಿವರು ಹೇಳಿದ್ದಾರೆ.
ಈ ಅತ್ಯಾಧುನಿಕ ಹಡಗು ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ದೇಶೀಯವಾಗಿ ಅಭಿವೃದ್ಧಿಪಡಿಸಿದ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ ಅನ್ನು ನಿರ್ವಹಿಸಬಲ್ಲದು. ಕಡಲ ಭಯೋತ್ಪಾದನೆ, ಕಳ್ಳಸಾಗಣೆ ಮತ್ತು ಕಡಲ ಕಾನೂನನ್ನು ಜಾರಿಗೊಳಿಸುವ ಸವಾಲುಗಳಿಗೆ ಸ್ಪಂದಿಸುವಲ್ಲಿ ಕೋಸ್ಟ್ಗಾರ್ಡ್ನ ಬಲವನ್ನು ಹೆಚ್ಚಿಸುವ ನಿರೀಕ್ಷೆಯಿದೆ.
ಹಡಗಿನಲ್ಲಿ ಹೆಚ್ಚಿನ ವೇಗದ ದೋಣಿಗಳು, ವೈದ್ಯಕೀಯ ಸೌಲಭ್ಯಗಳು ಮತ್ತು ಆಧುನಿಕ ಕಣ್ಗಾವಲು ವ್ಯವಸ್ಥೆಗಳೂ ಇವೆ. ಸಮುದ್ರದಲ್ಲಿ ತೊಂದರೆಯಲ್ಲಿರುವ ನೌಕಾಪಡೆಗಳಿಗೆ ಹುಡುಕಾಟ ಮತ್ತು ರಕ್ಷಣೆಯನ್ನು ಒದಗಿಸಲು ಇದು ಸಹಾಯ ಮಾಡಲಿದೆ.
Had a good look at the ICG Varaha after the Commissioning Ceremony.
This ship is well equipped with all the modern technology and the facilities required by the @IndiaCoastGuard to ensure maritime security for our country. pic.twitter.com/SumEBESsKX
— Rajnath Singh (@rajnathsingh) September 25, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.