ಲಕ್ನೋ: ರಫೆಲ್ ಯುದ್ಧ ವಿಮಾನವನ್ನು ತಯಾರಿಸುವ ಫ್ರಾನ್ಸಿನ ಡೆಸಾಲ್ಟ್ ಆವಿಯೇಶನ್ ಸಂಸ್ಥೆಯು ಉತ್ತರಪ್ರದೇಶದಲ್ಲಿ ತನ್ನ ಘಟಕವನ್ನು ಆರಂಭಿಸಲು ಮುಂದಾಗಿದೆ. ಈ ರಾಜ್ಯದಲ್ಲಿ ಮುಂಬರಲಿರುವ ರಿಫೆನ್ಸ್ ಕಾರಿಡಾರ್ನಲ್ಲಿ ತನ್ನ ಘಟಕವನ್ನು ಅದು ಆರಂಭಿಸಲಿದೆ. ಇದಕ್ಕೆ ಯುಪಿ ಸರ್ಕಾರ ಅನುಮತಿಯನ್ನು ನೀಡಿದೆ.
ಡೆಸಾಲ್ಟ್ ಸಂಸ್ಥೆಯು ಭಾರತಕ್ಕೆ ರಫೆಲ್ ಯುದ್ಧ ವಿಮಾನವನ್ನು ಪೂರೈಕೆ ಮಾಡುತ್ತಿದೆ. ಈಗಾಗಲೇ ಅದು ರಫೆಲ್ ಯುದ್ಧ ವಿಮಾನದ ಹಸ್ತಾಂತರ ಪ್ರಕ್ರಿಯೆಯನ್ನೂ ನಡೆಸಲು ಪ್ರಾರಂಭಿಸಿದೆ. ಉತ್ತರ ಪ್ರದೇಶದಲ್ಲಿ ಈ ಸಂಸ್ಥೆ ಘಟಕವನ್ನು ಸ್ಥಾಪನೆ ಮಾಡಿದರೆ, ಭಾರತದ ಮೇಕ್ ಇನ್ ಇಂಡಿಯಾ ಯೋಜನೆಗೆ ಹೆಚ್ಚಿನ ಉತ್ತೇಜನ ಸಿಗಲಿದೆ ಮತ್ತು ರಕ್ಷಣಾ ವಲಯಕ್ಕೂ ಹೆಚ್ಚಿನ ಬಲ ಬರಲಿದೆ.
ಡೆಸಾಲ್ಟ್ ಜೊತೆಗೆ, ಜನರಲ್ ಡೈನಾಮಿಕ್ಸ್, ರಿಲ್ಸ್ ರಾಯ್ಸ್, ಏರ್ಬಸ್, ಸಾಬ್ ಸೇರಿದಂತೆ ರಕ್ಷಣಾ ಕ್ಷೇತ್ರದ ಹಲವಾರು ದೊಡ್ಡ ಕಂಪನಿಗಳು ಇತ್ತೀಚೆಗೆ ಲಂಡನ್ನಲ್ಲಿ ನಡೆದ ಡಿಫೆನ್ಸ್ ಎಕ್ಸ್ಪೋ ಸಂದರ್ಭದಲ್ಲಿ ಉತ್ತರಪ್ರದೇಶ ಸರ್ಕಾರದ ನಿಯೋಗವನ್ನು ಭೇಟಿಯಾಗಿವೆ. ವರದಿಗಳ ಪ್ರಕಾರ, ಈ ಸಂದರ್ಭದಲ್ಲಿ ಉತ್ತರಪ್ರದೇಶದ ನಿಯೋಗವು 25 ಕಂಪನಿಗಳ ಪ್ರತಿನಿಧಿಗಳನ್ನು ಭೇಟಿಯಾಗಿತ್ತು ಮತ್ತು ಸಭೆಯಲ್ಲಿ ಈ ಎಲ್ಲಾ ಕಂಪನಿಗಳು ಟೆಸ್ಟಿಂಗ್ ರೇಂಜ್ ಸ್ಥಾಪನೆಗೆ ದೊಡ್ಡ ಪ್ರಮಾಣದ ಭೂಮಿಯನ್ನು ನೀಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿವೆ.
ಈ ಕಂಪನಿಗಳಿಗೆ ಬಾಬಿನಾದಲ್ಲಿ ಈ 25-30 ಎಕರೆ ಭೂಮಿಯನ್ನು ನೀಡುವ ಸಾಧ್ಯತೆಯಿದೆ ಎಂದು ಉತ್ತರಪ್ರದೇಶ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಮುಂದಿನ ವರ್ಷ ಫೆಬ್ರವರಿ 5-7 ರಿಂದ ಲಕ್ನೋದಲ್ಲಿ ಆಯೋಜನೆಗೊಳ್ಳುತ್ತಿರುವ ಡಿಫೆನ್ಸ್ ಎಕ್ಸ್ಪೋಗೆ ಹಾಜರಾಗಲು ಹಲವಾರು ರಕ್ಷಣಾ ಕಂಪನಿಗಳು ಇಚ್ಛೆಯನ್ನು ವ್ಯಕ್ತಪಡಿಸಿವೆ ಎಂದು ತಿಳಿದುಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.