ನವದೆಹಲಿ: ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ (ಎನ್ಸಿಎಂ) ಉಪಾಧ್ಯಕ್ಷ ಜಾರ್ಜ್ ಕುರಿಯನ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರವೊಂದನ್ನು ಬರೆದಿದ್ದು, ಕೇರಳದ ಕ್ರಿಶ್ಚಿಯನ್ ಹುಡುಗಿಯರು ‘ಲವ್ ಜಿಹಾದ್’ಗೆ ಗುರಿಯಾಗುತ್ತಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
“ಸಂಘಟಿತ ಧಾರ್ಮಿಕ ಮತಾಂತರ ಮತ್ತು ಮತಾಂತರಗೊಂಡ ಬಲಿಪಶುಗಳನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ‘ಲವ್ ಜಿಹಾದ್ ‘ ಮೂಲಕ ಬಳಸಿಕೊಳ್ಳುವಂತಹ ಕೃತ್ಯಗಳನ್ನು ಎಸಗಲಾಗುತ್ತಿದೆ. ಕ್ರೈಸ್ತ ಸಮುದಾಯವು ಇಸ್ಲಾಮಿಕ್ ಮೂಲಭೂತವಾದಿಗಳ ಮೃದು ಗುರಿಯಾಗಿದೆ ಎಂಬುದನ್ನು ಈ ಕೃತ್ಯಗಳು ತೋರಿಸುತ್ತಿವೆ” ಎಂದು ಕುರಿಯನ್ ಹೇಳಿಕೆ ನೀಡಿದ್ದಾರೆ.
“ಈ ಆತಂಕಕಾರಿ ಪ್ರವೃತ್ತಿಯನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಈ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆಗೆ ತನಿಖೆಯನ್ನು ನಡೆಸಲು ಆದೇಶಿಸಬೇಕು” ಎಂದು ಕುರಿಯನ್ ಶಾ ಅವರಿಗೆ ಮನವಿಯನ್ನು ಮಾಡಿಕೊಂಡಿದ್ದಾರೆ. ಆಯೋಗವು ಎರಡು ಕ್ರಿಶ್ಚಿಯನ್ ಕುಟುಂಬಗಳಿಂದ ಈ ಬಗೆಗಿನ ಪತ್ರಗಳನ್ನು ಸ್ವೀಕರಿಸಿದೆ ಎಂದಿರುವ ಕುರಿಯನ್, ಇಂತಹ ಮೋಸದ ಚಟುವಟಿಕೆಗಳನ್ನು ತಡೆಯಲು ಪರಿಣಾಮಕಾರಿ ಕಾನೂನನ್ನು ತರಬೇಕೆಂದು ಒತ್ತಾಯಿಸಿದ್ದಾರೆ.
ಕೇರಳ ಕ್ಯಾಥೊಲಿಕ್ ಬಿಷಪ್ಸ್ ಕಾನ್ಫರೆನ್ಸ್ ಕಮಿಷನ್ ಫಾರ್ ಸೋಷಿಯಲ್ ಹಾರ್ಮೋನಿ ಆ್ಯಂಡ್ ವಿಜಿಲೆನ್ಸ್ ಇಂತಹ ಕೃತ್ಯಗಳ ಬಗ್ಗೆ ಮಾಹಿತಿಯನ್ನು ಪ್ರಕಟಿಸಿದ್ದು, 2005 ರಿಂದ 2012 ರವರೆಗೆ ಸುಮಾರು 4,000 ಹುಡುಗಿಯರನ್ನು ಪ್ರೀತಿಯಲ್ಲಿ ಸಿಲುಕಿಸಿ ನಂತರ ಮತಾಂತರ ಮಾಡಲಾಗಿದೆ ಎಂದು ಹೇಳಿದೆ.
“ಪೋಷಕರು ಈ ವಿಷಯದಲ್ಲಿ ವ್ಯಕ್ತಪಡಿಸಿರುವ ಭಯ ಅರ್ಥಹೀನವಾದುದಲ್ಲ, ಹಳೆಯ ಪ್ರಕರಣಗಳಿಂದ ಕಹಿ ಅನುಭವಗಳನ್ನು ಹೊಂದಿರುವವರೂ ಭಯ ವ್ಯಕ್ತಪಡಿಸಿದ್ದಾರೆ. ಕೇರಳದಿಂದ 21 ಮಂದಿ ಇಸಿಸ್ ಸೇರಿದ್ದಾರೆ ಎಂದು ವರದಿಗಳು ಹೇಳುತ್ತಿವೆ, ಇವರದಲ್ಲಿ 5 ಮಂದಿ ಕ್ರೈಸ್ಥ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡವರು” ಎಂದಿ ಕುರಿಯನ್ ಹೇಳಿದ್ದಾರೆ.
ಅಲ್ಲದೇ, ಲವ್ ಜಿಹಾದ್ ಬಗ್ಗೆ ರಾಷ್ಟ್ರೀಯ ತನಿಖಾ ದಳದಿಂದ ತನಿಖೆಯನ್ನು ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.