ನವದೆಹಲಿ: ಪಶ್ಚಿಮಬಂಗಾಳದ ಬುರ್ದ್ವಾನ್ ಜಂಕ್ಷನ್ನಲ್ಲಿ ಭಾರತೀಯ ರೈಲ್ವೇಯು ಬೃಹತ್ ಚತುಷ್ಪಥ ಕೇಬಲ್-ಸ್ಟೇಡ್ ರೈಲ್ವೇ ಓವರ್ ಬ್ರಿಡ್ಜ್ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿದ್ದು, ಸೆಪ್ಟಂಬರ್ 30ರಂದು ಇದನ್ನು ರೈಲ್ವೇ ಸಚಿವ ಪಿಯೂಶ್ ಗೋಯಲ್ ಅವರು ಲೋಕಾರ್ಪಣೆಗೊಳಿಸಲಿದ್ದಾರೆ.
ಈ ರೈಲ್ವೇ ಬ್ರಿಡ್ಜ್ ಅನ್ನು ದೇಶದ ಎರಡನೇ ಅತೀದೊಡ್ಡ ಬ್ರಿಡ್ಜ್ ಎಂದು ಪರಿಗಣಿಸಲಾಗಿದ್ದು, ಒಂದೇ ಒಂದು ದಿನವೂ ಸಾರಿಗೆ ಸಂಚಾರಕ್ಕೆ ಅಡ್ಡಿಪಡಿಸದೆ ಕೇವಲ 197 ದಿನಗಳಲ್ಲಿ ಇದರ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ.
188.43 ಮೀಟರ್ ಕೇಬಲ್ ಸ್ಟೇಡ್ ಬ್ರಿಡ್ಜ್ ಇದಾಗಿದ್ದು, ಎರಡೂ ಬದಿಗಳಲ್ಲಿ 1.5 ಮೀಟರ್ ಅಗಲದ ಫುಟ್ಪಾತ್ ಅನ್ನು ಒಳಗೊಂಡಿದೆ. ಈ ಬ್ರಿಡ್ಜಿನ ಅಗಲ 27.7 ಮೀಟರ್ ಆಗಿದೆ. 300 ಕೋಟಿ ರೂಪಾಯಿ ವೆಚ್ಚದಲ್ಲಿ ಇದನ್ನು ನಿರ್ಮಾಣ ಮಾಡಲಾಗಿದೆ. ಕೇಂದ್ರ ರೈಲ್ವೇ ಸಚಿವಾಲಯ ಮತ್ತು ಪಶ್ಚಿಮಬಂಗಾಳ 50:50 ಹಣ ಹೂಡಿಕೆ ಮೂಲಕ ಇದನ್ನು ನಿರ್ಮಾಣ ಮಾಡಲಾಗಿದೆ.
ಈ ಬ್ರಿಡ್ಜ್ ರೋಬ್ ಬುರ್ದ್ವಾನ್ ಪಟ್ಟಣವನ್ನು ಕಲ್ನಾ ಮತ್ತು ಕಟ್ವಾದ ಎರಡು ಉಪ-ವಿಭಾಗಗಳೊಂದಿಗೆ ಸಂಪರ್ಕಿಸುತ್ತದೆ ಮತ್ತು ಇದು ಹೌರಾ-ಬರ್ಧಮಾನ್ ಮುಖ್ಯ ಮಾರ್ಗದಲ್ಲಿದೆ.
New 4 lane cable stayed Road Overbridge at Barddhaman W.B, (under final stage of completion) will be inaugurated by Shri Piyush Goyal, Hon’ble Minister of Railways on 30 September, 2019. This project will set the standards for future fast track construction over busy Railway yard pic.twitter.com/FmHarW95uV
— Ministry of Railways (@RailMinIndia) September 23, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.