ನ್ಯೂಯಾರ್ಕ್: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ನ್ಯೂಯಾರ್ಕ್ನಲ್ಲಿ ನಡೆದ ಯುಎನ್ ಜನರಲ್ ಅಸೆಂಬ್ಲಿ (ಯುಎನ್ಜಿಎ) ಅಧಿವೇಶನದ ಸಂದರ್ಭದಲ್ಲಿ ಹಲವಾರು ಸರಣಿ ದ್ವಿಪಕ್ಷೀಯ ಸಭೆಗಳನ್ನು ನಡೆಸಿದರು. ಜರ್ಮನಿಯ ಚಾನ್ಸೆಲರ್ ಏಂಜೆಲಾ ಮರ್ಕೆಲ್, ಇಟಲಿ ಅಧ್ಯಕ್ಷ ಗೈಸೆಪೆ ಕಾಂಟೆ ಮತ್ತು ಕತಾರ್ನ ರಾಜ ಶೇಖ್ ತಮೀಮ್ ಬಿನ್ ಹಮದ್ ಸೇರಿದಂತೆ ಹಲವಾರು ಗಣ್ಯರೊಂದಿಗೆ ಮಾತುಕತೆಯನ್ನು ನಡೆಸಿದರು.
ಮೆಗಾ ಕಾರ್ಯಕ್ರಮ ‘ಹೌಡಿ, ಮೋದಿ’ಯಲ್ಲಿ 50 ಸಾವಿರಕ್ಕೂ ಅಧಿಕ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಭಾಷಣ ಮಾಡಿದ ಮೋದಿಯವರು ಬಳಿಕ, ಯುಎನ್ಜಿಎದ 74 ನೇ ಅಧಿವೇಶನದಲ್ಲಿ ಭಾಗವಹಿಸಲು ಭಾನುವಾರ ರಾತ್ರಿ ನ್ಯೂಯಾರ್ಕ್ಗೆ ಆಗಮಿಸಿದರು.
ಯುಎನ್ ಜನರಲ್ ಅಸೆಂಬ್ಲಿ ಸಂದರ್ಭದಲ್ಲಿ, ಪ್ರಧಾನಿ ಮೋದಿ ಹಲವಾರು ರಾಷ್ಟ್ರಗಳ ಮುಖ್ಯಸ್ಥರೊಂದಿಗೆ ಸಂವಹನ ನಡೆಸಿದರು. ಕೊಲಂಬಿಯಾದ ಅಧ್ಯಕ್ಷ ಇವಾನ್ ಡುಕ್ ಮಾರ್ಕ್ವೆಜ್, ನೈಜೀರಿಯಾದ ಇಸೌಫೌ ಮಹಮದೌ, ಭೂತಾನ್ ಪ್ರಧಾನಿ ಲೋಟೇ ಶೆರಿಂಗ್ ಮತ್ತು ನೆದರ್ಲ್ಯಾಂಡಿನ ಪ್ರಧಾನಿ ಮಾರ್ಕ್ ರುಟ್ಟೆ ಅವರೊಂದಿಗೂ ಮೋದಿ ಮಾತುಕತೆಯನ್ನು ನಡೆಸಿದರು.
ಪ್ರಧಾನ ಮಂತ್ರಿ ಇಟಲಿಯ ಅಕ್ಷರೊಂದಿಗೆ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸುವ ಬಗ್ಗೆ ಚರ್ಚಿಸಿದರು, ವಿಶೇಷವಾಗಿ ವ್ಯಾಪಾರ ಮತ್ತು ಹೂಡಿಕೆ ಕ್ಷೇತ್ರದಲ್ಲಿ, ರಕ್ಷಣಾ ಕ್ಷೇತ್ರದಲ್ಲಿ ಸಹಕಾರದ ಬಗ್ಗೆ ಮಾತುಕತೆಯನ್ನು ನಡೆಸಿದರು.
ಪ್ರಧಾನಿ ಮೋದಿ, ಶೇಖ್ ತಮೀಮ್ ಬಿನ್ ಹಮದ್ ಅವರೊಂದಿಗಿನ ಸಭೆಯಲ್ಲಿ, ಭಾರತ ಮತ್ತು ಕತಾರ್ ನಡುವಿನ ಪೂರ್ಣ ಪ್ರಮಾಣದ ಸಂಬಂಧಗಳ ಬಗ್ಗೆ ಚರ್ಚಿಸಿದರು.
ಮೋದಿ ಯುನಿಸೆಫ್ನ ಕಾರ್ಯನಿರ್ವಾಹಕ ನಿರ್ದೇಶಕರಾದ ಹೆನ್ರಿಯೆಟಾ ಫೋರ್ ಅವರನ್ನು ಭೇಟಿಯಾದರು ಮತ್ತು ಭಾರತದ ಮಕ್ಕಳ ಆರೋಗ್ಯ ಮತ್ತು ಪೋಷಣೆಗೆ ತಮ್ಮ ಸರ್ಕಾರ ಕೈಗೊಂಡ ಪ್ರಯತ್ನಗಳನ್ನು ಒತ್ತಿಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.