ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಹಲವಾರು ವರ್ಷಗಳಿಂದ ಮುಚ್ಚಿ ಹೋಗಿರುವ ಶಾಲೆಗಳ ಬಗ್ಗೆ, ದೇವಸ್ಥಾನಗಳ ಬಗ್ಗೆ ಸಮೀಕ್ಷೆಯನ್ನು ನಡೆಸುವ ಸಲುವಾಗಿ ಕೇಂದ್ರ ಸರ್ಕಾರವು ಸಮಿತಿಯನ್ನು ರಚನೆ ಮಾಡಿದೆ ಎಂದು ಕೇಂದ್ರ ಸಚಿವ ಜಿ.ಕಿಶನ್ ರೆಡ್ಡಿ ಅವರು ಸೋಮವಾರ ಬೆಂಗಳೂರಿನಲ್ಲಿ ಘೋಷಣೆ ಮಾಡಿದ್ದಾರೆ.
ಹಲವು ವರ್ಷಗಳಿಂದ ಕಣಿವೆಯಲ್ಲಿ 50 ಸಾವಿರಕ್ಕೂ ಅಧಿಕ ದೇಗುಲಗಳನ್ನು ಮುಚ್ಚಲಾಗಿದೆ, ಇವುಗಳಲ್ಲಿ ಕೆಲವನ್ನು ಧ್ವಂಸ ಮಾಡಲಾಗಿದೆ, ಮೂರ್ತಿಗಳನ್ನು ಭಗ್ನಗೊಳಿಸಲಾಗಿದೆ. ಇಂತಹ ದೇಗುಲಗಳ ಸಮೀಕ್ಷೆಗೆ ಆದೇಶಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
ಜಮ್ಮು ಕಾಶ್ಮೀರದ ವಿಶೇಷಾಧಿಕಾರವನ್ನು ಹಿಂಪಡೆದ ಬಳಿಕ ಮತ್ತು ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಪರಿವರ್ತಿಸಿದ ಒಂದು ತಿಂಗಳ ಬಳಿಕ ಕೇಂದ್ರ ಇದಕ್ಕೆ ಆದೇಶಿಸಿದೆ.
1990 ರ ದಶಕದಲ್ಲಿ ಇಸ್ಲಾಮಿಕ್ ಜಿಹಾದಿನ ಉದಯದೊಂದಿಗೆ ಭಯೋತ್ಪಾದನೆ ಪೀಡಿತ ರಾಜ್ಯವಾಗಿ ಪರಿವರ್ತನೆಯಾದ ಜಮ್ಮು ಕಾಶ್ಮೀರವು, ಕಾಶ್ಮೀರಿ ಪಂಡಿತ ಸಮುದಾಯದ ಸಾಮೂಹಿಕ ವಲಸೆಯನ್ನು ಕಂಡಿತು. ಕಣಿವೆಯಲ್ಲಿ ಹಿಂದೂಗಳ ವಿರುದ್ಧ ದೌರ್ಜನ್ಯ, ಸಾಮೂಹಿಕ ಅತ್ಯಾಚಾರಗಳು ಸೇರಿದಂತೆ ಹಲವಾರು ಹಿಂಸಾಚಾರಗಳು ನಡೆದವು.
2012 ರಲ್ಲಿ ಜಮ್ಮ ಕಾಶ್ಮೀರ ಸರ್ಕಾರ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಎರಡು ದಶಕಗಳಲ್ಲಿ ಕಣಿವೆಯ ರಾಜ್ಯದ ಅರ್ಧದಷ್ಟು ದೇವಾಲಯಗಳು ಹಾನಿಗೊಳಗಾಗಿವೆ. “ಕಣಿವೆಯ 438 ದೇವಾಲಯಗಳ ಪೈಕಿ, 208 ದೇವಾಲಯಗಳು ಹಾನಿಗೊಳಗಾಗಿವೆ” ಎಂದು ಅಲ್ಲಿಮ ರಾಜ್ಯ ಸರ್ಕಾರವು ರಾಜ್ಯ ವಿಧಾನಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದೆ. ಶ್ರೀನಗರದಲ್ಲಿ ಅತಿ ಹೆಚ್ಚು ವಿಧ್ವಂಸಕ ಕೃತ್ಯಗಳು ನಡೆದಿದ್ದು, ಇಲ್ಲಿ 57 ದೇವಾಲಯಗಳು ಹಾನಿಗೊಳಗಾಗಿವೆ. 56 ದೇವಾಲಯಗಳು ಹಾನಿಗೊಳಗಾದ ಅನಂತನಾಗ್ ಜಿಲ್ಲೆಯು ಎರಡನೇ ಸ್ಥಾನದಲ್ಲಿದೆ.
ಆದರೆ, ಒಮರ್ ಅಬ್ದುಲ್ಲಾ ನೇತೃತ್ವದ ಅಂದಿನ ಸರ್ಕಾರವು ವಿಧ್ವಂಸಕ ಕೃತ್ಯ ಮತ್ತು ಹಾನಿ ನಡೆಸಿದವರ ಬಗ್ಗೆ ಮೌನವಾಗಿಯೇ ಇತ್ತು. ದೇವಾಲಯಗಳ ಮೇಲಿನ ದಾಳಿಗೆ ಉಗ್ರವಾದ ಕಾರಣ ಎಂಬುದನ್ನೂ ಆ ಸರ್ಕಾರ ಒಪ್ಪಿಕೊಂಡಿರಲಿಲ್ಲ.ಮತ್ತೊಂದೆಡೆ, ಸರ್ಕಾರ ಬಿಡುಗಡೆ ಮಾಡಿದ ಅಂಕಿಅಂಶಗಳನ್ನು ಕಾಶ್ಮೀರಿ ಪಂಡಿತ ಸಂಘಟನೆಗಳು ತಿರಸ್ಕರಿಸಿವೆ.
ಕಾಶ್ಮೀರಿ ಪಂಡಿತ್ ಸಂಘರ್ಷ ಸಮಿತಿಯ (ಕೆಪಿಎಸ್ಎಸ್) ಸಂಜಯ್ ಟಿಕೂ ಅವರು, “ಸುಮಾರು 550 ದೇವಾಲಯಗಳು ಹಾನಿಗೊಳಗಾಗಿವೆ ಮತ್ತು 50,000 ಮಂದಿರಗಳನ್ನು ಅತಿಕ್ರಮಿಸಲಾಗಿದೆ” ಎಂದು ಹೇಳಿದ್ದಾರೆ.
ದೇವಾಲಯಗಳ ಅಪವಿತ್ರತೆ ಮತ್ತು ಕಾಶ್ಮೀರ ರಾಜ್ಯದಲ್ಲಿ ಹಿಂದೂಗಳ ಮೇಲಿನ ಕಿರುಕುಳವು ಈ ಪ್ರದೇಶದ ಇಸ್ಲಾಮಿಕ್ ಆಕ್ರಮಣಗಳೇ ಕಾರಣವಾಗಿದೆ. ಮಾರ್ತಾಂಡ ಸೂರ್ಯ ದೇವಸ್ಥಾನ, ಶಾರದಾ ಪೀಠ ಸೇರಿದಂತೆ ಹಲವಾರು ಪ್ರಾಚೀನ ದೇವಾಲಯಗಳು ಇಸ್ಲಾಮಿಕ್ ಆಕ್ರಮಣಕಾರರಿಂದ ನಾಶವಾದವು ಮತ್ತು ವಿಗ್ರಹಗಳನ್ನು ನಾಶಪಡಿಸಿದವುಗಳು ಭಗ್ನಗೊಂಡವು ಮತ್ತು ಹಿಂದೂ ನಿವಾಸಿಗಳನ್ನು ಬಲವಂತವಾಗಿ ಮತಾಂತರಗೊಳಿಸಲಾಯಿತು.
ಜನಾಂಗೀಯ ಶುದ್ಧೀಕರಣದ ಹೆಸರಲ್ಲಿ ರಕ್ತವನ್ನು ಹರಿಸಿ ಇಡೀ ಸ್ಥಳೀಯ ಹಿಂದೂ ಸಮುದಾಯವನ್ನು ಭೂಪ್ರದೇಶದಿಂದ ಹೊರಹಾಕಲಾಯಿತು, ಕಣಿವೆಯಲ್ಲಿ ವಹಾಬಿ / ಸಲಾಫಿ ರೂಪದ ಇಸ್ಲಾಂ ಧರ್ಮವನ್ನು ವ್ಯವಸ್ಥಿತವಾಗಿ ಅಳವಡಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.