2017-18ರ ಅವಧಿಯಲ್ಲಿ ದೃಷ್ಟಿ ಅಧ್ಯಯನವನ್ನು ಹಮ್ಮಿಕೊಳ್ಳಲಾಗಿದೆ, 5 ಪ್ರದೇಶಗಳು, 29 ರಾಜ್ಯಗಳು, ಐದು ಕೇಂದ್ರಾಡಳಿತ ಪ್ರದೇಶಗಳು ಮತ್ತು 465 ಜಿಲ್ಲೆಗಳಲ್ಲಿ ಮಹಿಳೆಯರ ಸ್ಥಿತಿಗತಿ ಕುರಿತಂತೆ ಅಧ್ಯಯನವನ್ನು ನಡೆಸಲಾಗಿದೆ. ಭಾರತದಲ್ಲಿ 17 ರಾಜ್ಯಗಳು ಅಂತಾರಾಷ್ಟ್ರೀಯ ಗಡಿಗಳನ್ನು ಹೊಂದಿವೆ. ಭಾರತದಲ್ಲಿ, ಅಂತಾರಾಷ್ಟ್ರೀಯ ಗಡಿಗಳನ್ನು ಹೊಂದಿರುವ ಒಟ್ಟು ಜಿಲ್ಲೆಗಳು 106 ಆಗಿದ್ದು, ಅದರಲ್ಲಿ 70 ಜಿಲ್ಲೆಗಳು (66.04%) ಅಧ್ಯಯನಕ್ಕೊಳಪಟ್ಟಿವೆ. 18 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ವಿಶ್ಲೇಷಣಾ ಘಟಕವಾಗಿದ್ದರು ಮತ್ತು ಒಟ್ಟು 43255 ಮಹಿಳೆಯರನ್ನು ಇಲ್ಲಿ ಸಂದರ್ಶಿಸಲಾಗಿದೆ.
18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳ ಬಗೆಗೂ ಇದೇ ರೀತಿಯ ಅಧ್ಯಯನವನ್ನು ನಡೆಸಲಾಯಿತು. 5 ಪ್ರದೇಶಗಳು, 25 ರಾಜ್ಯಗಳು, 2 ಕೇಂದ್ರಾಡಳಿತ ಪ್ರದೇಶಗಳು ಮತ್ತು 283 ಜಿಲ್ಲೆಗಳ 7675 ಬಾಲಕಿಯರನ್ನು ಸಂದರ್ಶಿಸಲಾಗಿದೆ. ಅಧ್ಯಯನಕ್ಕೊಳಪಟ್ಟ ಹೆಚ್ಚಿನ ಮಹಿಳೆಯರು ವಿವಾಹಿತರು. ಅವಿವಾಹಿತ ಮಹಿಳೆಯರು (21.96%) ಅವರಲ್ಲಿ ಹೆಚ್ಚಿನವರು 18-25 ವರ್ಷ ವಯಸ್ಸಿನವರು. ಇದು ಹಿಂದೂ, ಮುಸ್ಲಿಂ, ಬುದ್ಧ, ಕ್ರಿಶ್ಚಿಯನ್, ಜೈನ ಮತ್ತು ಸಿಖ್ನಂತಹ ಎಲ್ಲಾ ಪ್ರಮುಖ ಧರ್ಮಗಳನ್ನು ಈ ಅಧ್ಯಯನದಲ್ಲಿ ಸೇರ್ಪಡೆಗೊಳಿಸಲಾಗಿದೆ.
ಶಿಕ್ಷಣ
🔹 2011 ರ ಜನಗಣತಿಯ ಪ್ರಕಾರ, ಸ್ತ್ರೀಯರ ಸಾಕ್ಷರತೆಯ ಪ್ರಮಾಣವು ಶೇಕಡಾ 64.63 ರಷ್ಟಿತ್ತು. ಪ್ರಸ್ತುತ ಅಧ್ಯಯನದಲ್ಲಿ ಸ್ತ್ರೀ ಸಾಕ್ಷರತೆಯ ಪ್ರಮಾಣವು ಶೇಕಡಾ 79.63 ಎಂದು ಕಂಡುಬಂದಿದೆ. ಸಾಕ್ಷರತೆಯ ದರದಲ್ಲಿ ಹೆಚ್ಚಳವಾಗಿದ್ದರೂ, ಅವರಲ್ಲಿ ಕೆಲವರು ಮಾತ್ರ ಪದವಿಗಿಂತ ಹೆಚ್ಚಿನ ಶಿಕ್ಷಣದ ಮಟ್ಟವನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
🔹 ಅಧ್ಯಯನದಲ್ಲಿ ಪರಿಶಿಷ್ಟ ಜಾತಿ ಮತ್ತು ವಿಶೇಷ ಹಿಂದುಳಿದ ವರ್ಗದ ನಂತರ ಪರಿಶಿಷ್ಟ ಪಂಗಡದ ಮಹಿಳೆಯರಲ್ಲಿ ಅನಕ್ಷರತೆ ಹೆಚ್ಚು ಬಂದಿದೆ. ಆಧ್ಯಾತ್ಮಿಕ ಕ್ಷೇತ್ರದ ಮಹಿಳೆಯರಲ್ಲಿ ಅನಕ್ಷರತೆ ಶೇಕಡಾವಾರು ಕಡಿಮೆ.
🔹 ಅಧ್ಯಯನದ ಪ್ರಕಾರ ಮಹಿಳೆಯರು ಶಿಕ್ಷಣವನ್ನು ಸ್ಥಗಿತಗೊಳಿಸಲು ಮದುವೆ ಮತ್ತು ಆರ್ಥಿಕ ತೊಂದರೆಗಳು ಪ್ರಮುಖ ಕಾರಣಗಳಾಗಿವೆ.
🔹 ಮೀಸಲಾತಿ ನೀತಿ ಮತ್ತು ಶೈಕ್ಷಣಿಕ ಬೆಂಬಲ ಕ್ರಮಗಳು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಶೇಷ ಹಿಂದುಳಿದ ವರ್ಗ ಮತ್ತು ಇತರ ಹಿಂದುಳಿದ ವರ್ಗದ ಮಹಿಳೆಯರಿಗೆ ಉನ್ನತ ಮಟ್ಟದ ಶಿಕ್ಷಣವನ್ನು ಪಡೆಯಲು ಸಹಾಯ ಮಾಡುತ್ತದೆ ಎಂದು ಗಮನಿಸಲಾಗಿದೆ.
🔹 ಅಧ್ಯಯನಕ್ಕೊಳಪಟ್ಟ ಮೂರನೇ ಎರಡರಷ್ಟು ಮಹಿಳೆಯರು, ತಮ್ಮ ಆಸಕ್ತಿಯ ಕ್ಷೇತ್ರ ಯಾವುದೆಂದು ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ಮನೆಯ ಚಟುವಟಿಕೆಗಳ ಒತ್ತಡ ಮತ್ತು ಸಾಂಪ್ರದಾಯಿಕ ಮನಸ್ಥಿತಿಯೊಂದಿಗೆ ಅನೇಕ ಪಾತ್ರಗಳನ್ನು ನಿರ್ವಹಿಸುವುದು ಮಹಿಳೆಯು ತನ್ನ ಆಸಕ್ತಿಯ ಕ್ಷೇತ್ರದ ಬಗ್ಗೆ ಯೋಚಿಸುವುದನ್ನು ನಿರ್ಬಂಧಿಸಿದೆ ಎಂಬುದನ್ನು ಸೂಚಿಸುತ್ತದೆ. ಪ್ರತಿಕ್ರಿಯಿಸಿದವರಲ್ಲಿ ಹೆಚ್ಚಿನವರು ತಮ್ಮ ಆಸಕ್ತಿಯ ಕ್ಷೇತ್ರದ ಬಗ್ಗೆ ಯೋಚಿಸಿಯೇ ಇಲ್ಲ ಎಂದು ಉಲ್ಲೇಖಿಸಿದ್ದಾರೆ.
🔹 ಪ್ರತಿಕ್ರಿಯೆ ನೀಡಿದವರಲ್ಲಿ ನಾಲ್ಕನೇ ಒಂದು ಭಾಗದಷ್ಟು ಜನರಿಗೆ ವಿರಾಮ ಸಮಯವನ್ನು ಪಡೆಯಲೂ ಸಾಧ್ಯವಾಗುತ್ತಿಲ್ಲ ಎಂಬುದು ತಿಳಿದು ಬಂದಿದೆ.
ಉದ್ಯೋಗ
🔹 ಎಸ್ಟಿ ಕೆಟಗರಿಯಲ್ಲಿ ಸ್ತ್ರೀ ಉದ್ಯೋಗ ದರ ಅತೀ ಹೆಚ್ಚು ಮತ್ತು ಮುಕ್ತ ಕೆಟಗರಿಯಲ್ಲಿ ಮಹಿಳಾ ನಿರುದ್ಯೋಗ ದರ ಅತೀ ಹೆಚ್ಚು ಇದೆ.
🔹 ಉದ್ಯೋಗಸ್ಥ ಮಹಿಳೆಯರಲ್ಲಿ ಹೆಚ್ಚಿನವರು ತಮ್ಮ ಕೆಲಸದ ಸ್ಥಳದಲ್ಲಿ ಕ್ಯಾಂಟೀನ್, ಸಾರಿಗೆ ಮತ್ತು ವಿಶ್ರಾಂತಿ ಕೊಠಡಿ ಸೌಲಭ್ಯಗಳನ್ನು ಹೊಂದಿಲ್ಲ ಎಂದು ಉಲ್ಲೇಖಿಸಿದ್ದಾರೆ. ಅವರಲ್ಲಿ ಶೇ.60ಕ್ಕಿಂತಲೂ ಹೆಚ್ಚಿನವರಿಗೆ ಸಾಲ ಸೌಲಭ್ಯವಿಲ್ಲ.
🔹 ಅಧ್ಯಯನದ ಮಾದರಿಯಲ್ಲಿ, ಕ್ರಿಶ್ಚಿಯನ್ ಧರ್ಮದ ಮಹಿಳೆಯರಲ್ಲಿ ಹೆಚ್ಚಿನ ಶೇಕಡಾವಾರು ಉದ್ಯೋಗಗಳು ಕಂಡುಬಂದರೆ, ಬಳಿಕ ಸ್ಥಾನ ಕ್ರಮವಾಗಿ ಹಿಂದೂ, ಬೌದ್ಧ, ಮುಸ್ಲಿಂ, ಜೈನ, ಸಿಖ್ ಧರ್ಮಿಯರಲ್ಲಿದೆ.
ಆರೋಗ್ಯ ಮತ್ತು ಪೋಷಣೆ
🔹 ಸುಮಾರು ಅರ್ಧದಷ್ಟು ಮಹಿಳೆಯರು ದಿನಕ್ಕೆ ಎರಡು ಬಾರಿ ಊಟವನ್ನು ಮಾಡುತ್ತಿದ್ದಾರೆ, ಆದರೆ ಇನ್ನೂ ಶೇ.3.73 ರಷ್ಟು ಮಹಿಳೆಯರು ದಿನಕ್ಕೆ ಒಂದು ಬಾರಿ ಮಾತ್ರ ಊಟ ಮಾಡುತ್ತಿದ್ದಾರೆ ಮತ್ತು ಆಧ್ಯಾತ್ಮಿಕ ಕ್ಷೇತ್ರದ ಮಹಿಳೆಯರ ವಿಷಯದಲ್ಲಿ ಇದರ ಪ್ರಮಾಣವು ಸುಮಾರು ಹತ್ತನೇ ಒಂದು ಭಾಗವಾಗಿದೆ.
🔹 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರಲ್ಲಿ, ಮುಟ್ಟಿನ ಸಮಸ್ಯೆ ಪ್ರಮುಖ ಸಮಸ್ಯೆಯಾಗಿದೆ ಮತ್ತು ಅವರಲ್ಲಿ ಶೇ.64ಕ್ಕಿಂತ ಹೆಚ್ಚಿನವರು ಇದರಿಂದಾಗಿ ಬಳಲುತ್ತಿದ್ದಾರೆ. ಸಂಧಿವಾತವು ಎರಡನೇ ಪ್ರಮುಖ ಸಮಸ್ಯೆಯಾಗಿದ್ದು, ಶೇ.15 ಮಂದಿ ಇದರಿಂದ ಬಳಲುತ್ತಿದ್ದಾರೆ. ರಕ್ತದೊತ್ತಡ (5.28%), ಹೃದಯ ಸಮಸ್ಯೆ (3.07%), ಮಧುಮೇಹ (1.62%) ಮತ್ತು ಕ್ಯಾನ್ಸರ್ (0.51%) ನಿಂದ ಬಳಲುತ್ತಿದ್ದಾರೆ.
🔹 ಅಧ್ಯಯನಕ್ಕೊಳಪಟ್ಟವರಲ್ಲಿ ಶೇ. 40 ರಷ್ಟು ಮಂದಿ ಮಹಿಳೆಯರು ಕಳೆದ ಎರಡು ವರ್ಷಗಳಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಮತ್ತು ಆಧ್ಯಾತ್ಮಿಕ ಕ್ಷೇತ್ರದ ಮಹಿಳೆಯರ ವಿಷಯದಲ್ಲಿ ಇದರ ಶೇಕಡಾವಾರು ಹೆಚ್ಚು ಇದೆ. 18 ರಿಂದ 20 ವರ್ಷದೊಳಗಿನವರು ಹೆಚ್ಚು ಪ್ರಮಾಣದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
🔹 ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಮಹಿಳೆಯರ ಪೈಕಿ ಹೆಚ್ಚಿನವರು ಬುಡಕಟ್ಟು ಸಮುದಾಯದವರು ಎಂಬುದು ಗಮನೀಯ.
🔹 ಶೇ.80ರಷ್ಟು ಮಹಿಳೆಯರು ಸಂತೋಷ ಹೆಚ್ಚಿನ ಮಟ್ಟದಲ್ಲಿದೆ ಮತ್ತು ತುಂಬಾ ಕ್ಷೇಮವಾಗಿದ್ದಾರೆ. ಪ್ರತಿಕ್ರಿಯೆದಾರರ ಪೈಕಿ ಆಧ್ಯಾತ್ಮಿಕ ಕ್ಷೇತ್ರದ ಮಹಿಳೆಯರು ಹೆಚ್ಚಿನ ಮಟ್ಟದ ಸಂತೋಷವನ್ನು ಹೊಂದಿದ್ದಾರೆ.
🔹 ಉನ್ನತ ಮಟ್ಟದ ಸಂತೋಷವನ್ನು ಹೊಂದಿರುವ ಮಹಿಳೆಯರ ಪೈಕಿ ಹೆಚ್ಚಿನವರು ವಿವಾಹಿತ ಮಹಿಳೆಯರು. ಆದರೆ ಲಿವ್ ಇನ್ ಸಂಬಂಧದಲ್ಲಿ ವಾಸಿಸುವ ಮಹಿಳೆಯರಲ್ಲಿ ಕಡಿಮೆ ಸಂತೋಷದ ಮಟ್ಟ ಕಂಡು ಬರುತ್ತದೆ.
🔹 ಕುಟುಂಬವನ್ನು ಹೊಂದಿರದ ಮತ್ತು ಆದಾಯವಿಲ್ಲದ ಶೇ.90ರಷ್ಟು ಮಹಿಳೆಯರು ಉನ್ನತ ಮಟ್ಟದ ಸಂತೋಷವನ್ನು ಮತ್ತು ಯೋಗಕ್ಷೇಮವನ್ನು ಹೊಂದಿದ್ದಾರೆ. ಆದರೆ ಕುಟುಂಬದ ಆದಾಯವು ರೂ. 10,000 / – ಕ್ಕಿಂತ ಕಡಿಮೆ ಇರುವ ಮಹಿಳೆಯರಲ್ಲಿ ಸಂತೋಷದ ಮಟ್ಟ ಕಡಿಮೆಯಾಗಿರುವುದು ಕಂಡುಬರುತ್ತದೆ. ಇದು ಕುಟುಂಬದ ಆದಾಯಕ್ಕೂ ಸಂತೋಷ ಮತ್ತು ಯೋಗಕ್ಷೇಮದ ಮಟ್ಟಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ಇದು ತೋರಿಸುತ್ತದೆ.
ಶಿಫಾರಸ್ಸುಗಳು
🔹 ಮಹಿಳೆಯರಲ್ಲಿ ಮತದಾನದ ಕಾರ್ಡ್ ಬಗ್ಗೆ ಜಾಗೃತಿ ಮೂಡಿಸಬೇಕು.
🔹 ಈಶಾನ್ಯದ ಮಹಿಳೆಯರಿಗೆ ಆಧಾರ್ ಕಾರ್ಡ್ ಪಡೆಯಲು ಪ್ರೇರೇಪಿಸಬೇಕು.
🔹 ಉತ್ತರ ಭಾಗದ ಮಹಿಳೆಯರು ವೈಯಕ್ತಿಕ ಬ್ಯಾಂಕ್ ಖಾತೆ ಹೊಂದುವಂತೆ ಮಾಡಲು ವಿಶೇಷ ಪ್ರಯತ್ನಗಳನ್ನು ಮಾಡಬೇಕಾಗಿದೆ. ಬುಡಕಟ್ಟು ಮಹಿಳೆಯರು ಮತ್ತು ನಗರ ಕೊಳೆಗೇರಿಗಳಲ್ಲಿನ ಮಹಿಳೆಯರಿಗೂ ಇದೇ ತಂತ್ರಗಳನ್ನು ಜಾರಿಗೆ ತರಬೇಕು; ಇದರಿಂದ ಅವರಿಗೆ ಸರ್ಕಾರದ ವಿವಿಧ ಯೋಜನೆಗಳಿಂದ ಲಾಭವಾಗಲಿದೆ.
🔹 ಬುಡಕಟ್ಟು ಮಹಿಳೆಯರಿಗೆ ಸಾಕ್ಷರತೆಯ ಮಟ್ಟವನ್ನು ಹೆಚ್ಚಿಸಲು ವಿಶೇಷ ನೆರವು ಕಾರ್ಯಕ್ರಮ ಮತ್ತು ಕಾರ್ಯತಂತ್ರಗಳ ಅವಶ್ಯಕತೆಯಿದೆ.
🔹 ಪಠ್ಯಕ್ರಮವನ್ನು ಮರುವಿನ್ಯಾಸಗೊಳಿಸಬೇಕು ಮತ್ತು ಅದು ಅವರ ದಿನನಿತ್ಯದ ಜೀವನಕ್ಕೆ ಸಂಬಂಧಿಸಿರಬೇಕು.
🔹 ಜೀವನ ಕೌಶಲ್ಯ, ದೈಹಿಕ ಸಾಮರ್ಥ್ಯ, ಮೌಲ್ಯ ದೃಷ್ಟಿಕೋನ, ಕೌಶಲ್ಯ ತರಬೇತಿಗೆ ಸಂಬಂಧಿಸಿದ ಪಠ್ಯಕ್ರಮದ ವಿಷಯವನ್ನು ಅಭಿವೃದ್ಧಿಪಡಿಸಬೇಕು ಮತ್ತು ಅದನ್ನು ಎಲ್ಲಾ ಹಂತದ ಶಿಕ್ಷಣದಲ್ಲೂ ಸೇರಿಸಿಕೊಳ್ಳಬೇಕು.
🔹 ಸಾಮಾನ್ಯವಾಗಿ ಪ್ರೌಢ ಶಾಲಾ ಮಟ್ಟದಲ್ಲಿ ಮತ್ತು ಪರಿಶಿಷ್ಟ ಪಂಗಡ (ಪ್ರಾಥಮಿಕ ಮಟ್ಟದಲ್ಲಿ) ಮತ್ತು ಪರಿಶಿಷ್ಟ ಜಾತಿ (ಮಧ್ಯಮ ಶಾಲಾ ಮಟ್ಟದಲ್ಲಿ) ಹೆಣ್ಣುಮಕ್ಕಳು ಶಾಲೆ ಬಿಟ್ಟು ಹೋಗುವ ಪ್ರಮಾಣವನ್ನು ಕಡಿಮೆ ಮಾಡುವ ಕಾರ್ಯಕ್ರಮದತ್ತ ಸರ್ಕಾರ (ಕೇಂದ್ರ / ರಾಜ್ಯ) ಮತ್ತು ಎನ್ಜಿಒಗಳು ಗಮನ ಹರಿಸಬೇಕಾಗಿದೆ.
🔹 ಎನ್ಜಿಒಗಳು ಸಮಾಜದಲ್ಲಿ ಮತ್ತು ಕುಟುಂಬ ಮಟ್ಟದಲ್ಲಿಯೂ ಲಿಂಗ ಸಮಾನತೆಗಾಗಿ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಬೇಕಾಗಿದೆ.
🔹 ಮಹಿಳೆಯರಿಗೆ ಕಂಪ್ಯೂಟರ್ ಪ್ರವೇಶ ಕಡಿಮೆ ಮತ್ತು ಪಿಎಂಕೆವಿವೈ ಯೋಜನೆಗಳ ಬಗ್ಗೆ ತಿಳಿದಿಲ್ಲ. ನೋಂದಣಿ ಪ್ರಕ್ರಿಯೆಯು ಆನ್ಲೈನ್ನಲ್ಲಿರುವುದರಿಂದ ಅವರಿಗೆ ಈ ಯೋಜನೆಯ ಲಾಭ ಪಡೆಯಲು ಸಾಧ್ಯವಾಗುತ್ತಿಲ್ಲ. ತರಬೇತಿ ಕೇಂದ್ರಕ್ಕೆ ಅವರ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ಮತ್ತು ಆಫ್ಲೈನ್ ಕೋರ್ಸ್ಗಳನ್ನು ನಡೆಸಲು ಮಹಿಳೆಯರಿಗಾಗಿ ಪ್ರತ್ಯೇಕ ರಚನೆ / ವಿಭಾಗವನ್ನು ಸ್ಥಾಪಿಸುವ ಅವಶ್ಯಕತೆಯಿದೆ.
🔹 ಮಹಿಳೆಯರಿಗಾಗಿ ವಿವಿಧ ಕ್ಷೇತ್ರಗಳ ಕುರಿತು ಹೆಚ್ಚಿನ ಕೌಶಲ್ಯ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕಾಗಿದೆ. ಉದ್ಯೋಗದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ವೇಗಗೊಳಿಸಲು ಇದು ಸಹಾಯ ಮಾಡುತ್ತದೆ.
🔹 ಕೌಶಲ್ಯ ತರಬೇತಿಯು ಉದ್ಯೋಗ ಆಧಾರಿತ ಮತ್ತು ಉದ್ಯೋಗ ಸೃಷ್ಟಿ ಮಾಡುವಂತಿರಬೇಕು. ಕೌಶಲ್ಯ ತರಬೇತಿ ಕಾರ್ಯಕ್ರಮ ಕೇಂದ್ರಗಳನ್ನು ನೇಮಕಾತಿ ಸಂಸ್ಥೆಗಳಿಗೆ ಜೋಡಿಸಬೇಕು.
🔹 ಉದ್ಯೋಗದ ಸೃಷ್ಟಿಗೆ ಸಂಬಂಧಿಸಿದ ಎಲ್ಲಾ ಯೋಜನೆಗಳನ್ನು ತಳಮಟ್ಟದಲ್ಲಿ ವಿಸ್ತರಿಸುವ ಅವಶ್ಯಕತೆಯಿದೆ ಮತ್ತು ಅದರ ಬಗ್ಗೆ ಮಹಿಳೆಯರು ಅರಿವು ಮೂಡಿಸಿಕೊಳ್ಳುವಂತೆ ಮಾಡುವ ಪ್ರಯತ್ನಗಳಾಗಬೇಕು.
🔹 ಮಹಿಳೆಯರಿಗಾಗಿ ಆಫ್ಲೈನ್ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಬೇಕು.
🔹 ಜಾತಿ ಮತ್ತು ವೈವಾಹಿಕ ಸ್ಥಾನಮಾನವನ್ನು ಲೆಕ್ಕಿಸದೆ, ಸೇವಾ ವಲಯದ ಎಲ್ಲಾ ರೀತಿಯ ಮಹಿಳೆಯರಿಗೆ ನೇಮಕಾತಿ ಮಟ್ಟದಲ್ಲಿ ವಯಸ್ಸಿನ ಮಾನದಂಡಗಳನ್ನು ಸಡಿಲಿಸಬೇಕು. ಹೆಚ್ಚಿನ ಮಹಿಳೆಯರು ನಿರುದ್ಯೋಗಿಗಳಾಗಿದ್ದಾರೆ ಮತ್ತು ವಿವಾಹದ ಆರಂಭಿಕ ಹಂತದಲ್ಲಿ ವಲಸೆ ಮತ್ತು ಜವಾಬ್ದಾರಿಗಳನ್ನು ಹೊತ್ತುಕೊಳ್ಳುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.
🔹 ಅಸಂಘಟಿತ ವಲಯದ ಮಹಿಳೆಯರ ಸ್ಥಿತಿಗತಿಯನ್ನು ನೋಡಿಕೊಳ್ಳಲು ಒಂದು ಮಾನಿಟರಿಂಗ್ ಏಜೆನ್ಸಿ ಇರಬೇಕು. ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಮಹಿಳೆಯರು ಮತ್ತು ಕೌಶಲ್ಯರಹಿತ ಕಾರ್ಮಿಕರು ಪ್ರತಿಯೊಂದು ರೀತಿಯ ಶೋಷಣೆಗೆ ಗುರಿಯಾಗುತ್ತಾರೆ.
🔹 ಪ್ರತಿ ಹಂತದಲ್ಲೂ ಆಂತರಿಕ ದೂರು ಸಮಿತಿಗಳ ಪರಿಣಾಮಕಾರಿ ಅನುಷ್ಠಾನದ ಅಗತ್ಯವಿದೆ.
🔹 ಶಾಲಾ ಮಟ್ಟದಲ್ಲಿ ಉದ್ಯೋಗ ಕೌಶಲ್ಯ ತರಬೇತಿ ನೀಡಬೇಕು. ಅನಕ್ಷರಸ್ಥ ಮತ್ತು ಪದವಿಪೂರ್ವ ವಿದ್ಯಾರ್ಥಿಗಳಿಗೆ ಇಂತಹ ತರಬೇತಿ ನೀಡಲು ಸರ್ಕಾರ ಮುಂದಾಗಬೇಕು.
🔹 ಪೂರ್ಣ ಪ್ರಮಾಣದ ಆಹಾರದ ಪ್ರಾಮುಖ್ಯತೆ ಮತ್ತು ಆಹಾರದ ಡಯೆಟ್ ಕುರಿತು ಜಾಗೃತಿ ಕಾರ್ಯಕ್ರಮವು ಎಲ್ಲಾ ವರ್ಗದ ಮಹಿಳೆಯರಿಗಾಗಿ ಸಂಘಟಿಸುವ ಅಗತ್ಯವಿದೆ.
🔹 ಹದಿಹರೆಯದ ಬಾಲಕಿಯರ ಜಾಗೃತಿ ಮತ್ತು ಮಧ್ಯಪ್ರವೇಶ ಕಾರ್ಯಕ್ರಮವನ್ನು ಉತ್ತೇಜಿಸಬೇಕಾಗಿದೆ. ಶೇ. 60 ರಷ್ಟು ಹದಿಹರೆಯದ ಹುಡುಗಿಯರು ಮುಟ್ಟಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ.
🔹 ಸಂಧಿವಾತ, ರಕ್ತದೊತ್ತಡ ಮುಂತಾದ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟುವ ಮತ್ತು ಗುಣಪಡಿಸುವ ವಿಶೇಷ ಆರೋಗ್ಯ ಕಾರ್ಯಕ್ರಮಗಳನ್ನು ಸಂಘಟಿಸುವ ಅಗತ್ಯವಿದೆ.
🔹 ಬುಡಕಟ್ಟು ಮಹಿಳೆಯರ ಆರೋಗ್ಯ ಸ್ಥಿತಿ ಖಚಿತಪಡಿಸಿಕೊಳ್ಳಲು ವಿಶೇಷ ಪ್ರಯತ್ನಗಳನ್ನು ಕೈಗೊಳ್ಳಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.