ಹೋಸ್ಟನ್: ಭಾರತವೇ ಇರಲಿ, ವಿದೇಶವೇ ಇರಲಿ ಎಲ್ಲಿದ್ದರೂ ಮೋದಿ ಸರಳವಾಗಿಯೇ ಇರುತ್ತಾರೆ. ಸರಳತೆ ಎಂಬುದು ಅವರ ರಕ್ತದಲ್ಲೇ ಇದೆ. ಹೋಸ್ಟನ್ ವಿಮಾನನಿಲ್ದಾಣಕ್ಕೆ ನಿನ್ನೆ ಬಂದಿಳಿಯುತ್ತಿದ್ದಂತೆ ಗಣ್ಯರು ಅವರಿಗೆ ನೀಡಿದ್ದ ಹೂಗುಚ್ಛದಿಂದ ಕೆಳಕ್ಕೆ ಬಿದ್ದ ಹೂವಿನ ದಂಟನ್ನು ಬಗ್ಗಿ ಎತ್ತಿಕೊಂಡು ತಮ್ಮ ಭದ್ರತಾ ಸಿಬ್ಬಂದಿಗಳಿಗೆ ನೀಡಿದ್ದು ಮೋದಿಯವರ ಸರಳತೆಗೊಂದು ನಿದರ್ಶನ.
ಭಾನುವಾರ ಮೋದಿಯವರು ಹೋಸ್ಟನ್ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಅಮೆರಿಕಾ ಮತ್ತು ಭಾರತದ ಅಧಿಕಾರಿಗಳು ಅವರನ್ನು ಸ್ವಾಗತಿಸಿದರು. ಅಮೆರಿಕಾದ ಗಣ್ಯರೊಬ್ಬರು ಅವರಿಗೆ ಹೂಗುಚ್ಛವನ್ನು ನೀಡಿ ಆದರದಿಂದ ಬರಮಾಡಿಕೊಂಡು. ಈ ವೇಳೆ ಹೂಗುಚ್ಛದಿಂದ ಹೂವಿನ ದಂಟೊಂದು ಕೆಳಕ್ಕೆ ಬಿದ್ದಿತು. ಇದನ್ನು ಬಗ್ಗೆ ಎತ್ತಿಕೊಂಡ ಮೋದಿ ತಮ್ಮ ಭದ್ರತಾ ಸಿಬ್ಬಂದಿಗೆ ಹಸ್ತಾಂತರಿಸಿದರು. ಅವರ ಈ ನಡೆ ಕೋಟ್ಯಾಂತರ ಜನರ ಹೃದಯವನ್ನು ಗೆದ್ದಿದೆ.
ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮೋದಿಯವರ ಸರಳತೆಗೆ, ಸ್ವಚ್ಛತಾ ಪ್ರಜ್ಞೆಗೆ ಎಲ್ಲರೂ ಭೇಷ್ ಎಂದಿದ್ದಾರೆ. ಮೌನವಾಗಿಯೇ ಮೋದಿ ಜಾಗತಿಕ ವೇದಿಕೆಯಲ್ಲೂ ಸ್ವಚ್ಛತಾ ಅಭಿಯಾನವನ್ನು ಪ್ರಚುರಪಡಿಸುತ್ತಿದ್ದಾರೆ ಎಂದು ಅನೇಕರು ಅಭಿಪ್ರಾಯಿಸಿದ್ದಾರೆ.
#WATCH United States: PM Narendra Modi arrives in Houston, Texas. He has been received by Director, Trade and International Affairs, Christopher Olson and other officials. US Ambassador to India Kenneth Juster and Indian Ambassador to the US Harsh Vardhan Shringla also present. pic.twitter.com/3CqvtHkXlk
— ANI (@ANI) September 21, 2019

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.