ನವದೆಹಲಿ: ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ಚುನಾವಣೆಯನ್ನು ಘೋಷಣೆ ಮಾಡಿರುವ ಚುನಾವಣಾ ಆಯೋಗದ ನಿರ್ಧಾರವನ್ನು ಸ್ವಾಗತಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಭಾರೀ ಪ್ರಮಾಣದಲ್ಲಿ ಮತದಾನವನ್ನು ಮಾಡಿ ಬಿಜೆಪಿಯನ್ನು ಗೆಲ್ಲಿಸಿಕೊಡುವಂತೆ ಎರಡೂ ರಾಜ್ಯಗಳ ಜನತೆಗೆ ಕರೆಯನ್ನು ನೀಡಿದ್ದಾರೆ.
ಸರಣಿ ಟ್ವಿಟ್ಗಳನ್ನು ಮಾಡಿರುವ ಅವರು, ಹರಿಯಾಣ ಮತ್ತು ಮಹಾರಾಷ್ಟ್ರವನ್ನು ಆಡಳಿತಾರೂಢ ಬಿಜೆಪಿ, ಅಭಿವೃದ್ಧಿಯ ಉನ್ನತ ಮಟ್ಟಕ್ಕೆ ಕೊಂಡೊಯ್ದಿದೆ ಎಂದಿದ್ದಾರೆ. ಅಲ್ಲದೇ, ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಅರಿವು ಮೂಡಿಸುವಂತೆ ಅವರು ಕಾರ್ಯಕರ್ತರಿಗೆ ಕರೆಯನ್ನು ನೀಡಿದ್ದಾರೆ.
“ಹರಿಯಾಣ ಮತ್ತು ಮಹಾರಾಷ್ಟ್ರ ಚುನಾವಣಾ ಘೋಷಣೆಯನ್ನು ಮಾಡಿರುವ ಚುನಾವಣಾ ಆಯೋಗದ ನಿರ್ಧಾರವನ್ನು ನಾನು ಮುಕ್ತ ಮನಸ್ಸಿನಿಂದ ಸ್ವಾಗತ ಮಾಡುತ್ತೇನೆ. ಚುನಾವಣೆ ಪ್ರಜಾಪ್ರಭುತ್ವದ ಅತೀದೊಡ್ಡ ಹಬ್ಬ ಮಾತ್ರವಲ್ಲ, ಅದು ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಇಡುವ ಮತ್ತು ಉತ್ತಮ ಆಡಳಿತವನ್ನು ಸ್ಥಾಪಿಸುವ ವಿಧಾನವೂ ಹೌದು” ಎಂದಿದ್ದಾರೆ.
“ಹರಿಯಾಣ ಮತ್ತು ಮಹಾರಾಷ್ಟ್ರದ ಜನತೆಯಲ್ಲಿ ಅದರಲ್ಲೂ ಯುವಕರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾಯಿಸಿ ಮತ್ತು ಸದೃಢ, ಬಲಿಷ್ಠ ಸರ್ಕಾರವನ್ನು ಆಯ್ಕೆ ಮಾಡಿ” ಎಂದು ಕರೆ ನೀಡಿದ ಅವರು, ಬಿಜೆಪಿ ಕಳೆದ ಐದು ವರ್ಷದಲ್ಲಿ ಎರಡೂ ರಾಜ್ಯಗಳನ್ನೂ ಅಭಿವೃದ್ಧಿಯಲ್ಲಿ ಉನ್ನತ ಮಟ್ಟಕ್ಕೆ ಕೊಂಡೊಯ್ದಿದೆ ಎಂದಿದ್ದಾರೆ. ಅಲ್ಲದೇ, ಸರ್ಕಾರಗಳು ಮಾಡಿದ ಸಾಧನೆಯನ್ನು ಜನರ ಬಳಿಗೆ ಕೊಂಡೊಯ್ಯವ ಕಾರ್ಯವನ್ನು ಕಾರ್ಯಕರ್ತರು ಮಾಡಬೇಕು ಎಂದು ಕರೆ ನೀಡಿದ್ದಾರೆ.
महाराष्ट्र और हरियाणा में गत 5वर्षों में चली भाजपा की राज्य सरकारों ने प्रदेश को विकास और सुशासन की नित नयी ऊंचाइयों पर पहुंचाया है।
इन प्रदेशों के कार्यकर्ताओं से आवाहन करता हूँ कि अपनी सरकारों की उपलब्धियों को जन-जन तक पहुँचाये और पुनः प्रचंड बहुमत के साथ हमारी सरकारें बनाये।
— Amit Shah (@AmitShah) September 21, 2019
मैं महाराष्ट्र और हरियाणा के सभी मतदाताओं से और विशेषकर युवाओं से आवाहन करता हूँ कि आप अधिक से अधिक संख्या में मतदान कर एक मजबूत सरकार चुनने में और अपने प्रदेश के विकास और उन्नति में भागीदार बने।
— Amit Shah (@AmitShah) September 21, 2019
आज चुनाव आयोग द्वारा महाराष्ट्र और हरियाणा विधानसभा चुनावों की घोषणा का हृदय से स्वागत करता हूँ।
चुनाव न सिर्फ लोकतंत्र का सबसे बड़ा उत्साव होता है बल्कि यह अपने देश और प्रदेश को विकास और सुशासन के पथ पर अग्रसर रखने का भी सबसे बड़ा माध्यम होता है।
— Amit Shah (@AmitShah) September 21, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.