ಎಕಟೆರಿನ್ಬರ್ಗ್: ರಷ್ಯಾದ ಎಕಟೆರಿನ್ಬರ್ಗ್ನಲ್ಲಿ ನಡೆದ ವಿಶ್ವ ಪುರುಷರ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಭಾರತದ ಉದಯೋನ್ಮುಖ ಬಾಕ್ಸಿಂಗ್ ಪಟು, ಏಷ್ಯಾ ಚಾಂಪಿಯನ್ ಅಮಿತ್ ಪಂಗಲ್ (52 ಕೆಜಿ) ಅವರು ಶುಕ್ರವಾರ ಫೈನಲ್ಗೆ ಪ್ರವೇಶಿಸಿದ್ದಾರೆ. ಈ ಮೂಲಕ ಫೈನಲ್ ಪ್ರವೇಶಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರೆ. ಮತ್ತೋರ್ವ್ ಬ್ಯಾಕ್ಸಿಂಗ್ ಪಟು ಮನೀಶ್ ಕೌಶಿಕ್ (63 ಕೆಜಿ) ಇಲ್ಲಿ ನಡೆದ ಸೆಮಿಫೈನಲ್ನಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.
ಎರಡನೇ ಶ್ರೇಯಾಂಕಿತ ಪಂಗಲ್ ಕೊನೆಯ ನಾಲ್ಕು ಹಂತದಲ್ಲಿ ಕಝಕೀಸ್ಥಾನದ ಸಾಕೆನ್ ಬಿಬೊಸಿನೋವ್ ವಿರುದ್ಧ 3-2ರಿಂದ ಮೇಲುಗೈ ಸಾಧಿಸಿದರು.
“ನಾನು ಯೋಚಿಸಿದ್ದಕ್ಕಿಂತ ಹೆಚ್ಚಿನ ಪ್ರಯತ್ನವನ್ನು ಇಲ್ಲಿ ಮಾಡಬೇಕಾಗಿ ಬಂತು, ಆದರೂ ಪಂದ್ಯ ಚೆನ್ನಾಗಿಯೇ ನಡೆಯಿತು. ಇದು ಭಾರತೀಯ ಬಾಕ್ಸಿಂಗ್ಗೆ ಒಂದು ದೊಡ್ಡ ಸಾಧನೆಯಾಗಿದೆ ಮತ್ತು ನನಗೆ ದೊರೆತ ಎಲ್ಲ ಬೆಂಬಲಕ್ಕೂ ನಾನು ಆಭಾರಿಯಾಗಿದ್ದೇನೆ ”ಎಂದು ವಿಜಯದ ನಂತರ ಪಂಗಲ್ ಪ್ರತಿಕ್ರಿಯೆ ನೀಡಿದ್ದಾರೆ.
ಶನಿವಾರ, ಪಂಗಲ್ ಒಲಿಂಪಿಕ್ ಚಾಂಪಿಯನ್ ಉಜ್ಬೇಕಿಸ್ತಾನ್ನ ಶಖೋಬಿಡಿನ್ ಅವರನ್ನು ಎದುರಿಸಲಿದ್ದಾರೆ. ಜೊಯಿರೊವ್ ತನ್ನ ಸೆಮಿಫೈನಲ್ ಮುಖಾಮುಖಿಯಲ್ಲಿ ಫ್ರೆಂಚ್ ಆಟಗಾರ ಬಿಲ್ಲಾಲ್ ಬೆನ್ನಾಮಾ ಅವರನ್ನು ಸೋಲಿಸಿದ್ದರು.
ಕಾಮನ್ವೆಲ್ತ್ ಕ್ರೀಡಾಕೂಟದ ಬೆಳ್ಳಿ ವಿಜೇತ ಮನೀಶ್ ಕೌಶಿಕ್, ತಮ್ಮ ಚೊಚ್ಚಲ ವಿಶ್ವ ಚಾಂಪಿಯನ್ಶಿಪ್ನಲ್ಲಿ ಅಗ್ರ ಶ್ರೇಯಾಂಕಿತ ಕ್ಯೂಬಾದ ಆಂಡಿ ಗೊಮೆಜ್ ಕ್ರೂಜ್ ವಿರುದ್ಧ 0-5 ರಿಂದ ಸೋತರು, ಇವರು ಪ್ಯಾನ್ ಅಮೆರಿಕನ್ ಗೇಮ್ಸ್ ಚಾಂಪಿಯನ್ ಆಗಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.