ನವದೆಹಲಿ: ಚಂಢೀಗಢ ಪೊಲೀಸ್ ಇಲಾಖೆಯ ಮೂರು ನಾಗರಿಕ ಕೇಂದ್ರೀಕೃತ ಸೇವೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಅನಾವರಣಗೊಳಿಸಿದ್ದಾರೆ. ತುರ್ತು ಸ್ಪಂದನಾ ಸಹಾಯ ವ್ಯವಸ್ಥೆ (ERSS – Dial 112), ಇ-ಬೀಟ್ ಬುಕ್ ವ್ಯವಸ್ಥೆ ಮತ್ತು ಇ-ಸಾಥಿ ಆ್ಯಪ್ ಅನ್ನು ಬಿಡುಗಡೆ ಮಾಡಿದ್ದಾರೆ. ಈ ಮಹತ್ವದ ನಾಗರಿಕ ಕೇಂದ್ರೀಕೃತ ವ್ಯವಸ್ಥೆಯನ್ನು ಜಾರಿಗೊಳಿಸಿದ ಚಂಡೀಗಢ ಪೊಲೀಸರ ಕಾರ್ಯಕ್ಕೆ ಅವರು ಅಭಿನಂದನೆಗಳನ್ನು ತಿಳಿಸಿದ್ದಾರೆ.
ಬೀಟ್ ಆಫೀಸರ್ ವ್ಯವಸ್ಥೆಯು ಸುದೀರ್ಘ ಕಾಲದಿಂದಲೂ ಭಾರತೀಯ ಪೊಲೀಸ್ ವ್ಯವಸ್ಥೆಯ ಪ್ರಮುಖ ಅಂಶವಾಗಿದೆ ಮತ್ತು ಅಂತಹ ನಾಗರಿಕ ಕೇಂದ್ರಿತ ಸೇವೆಗಳ ಮೂಲಕ ದೇಶದಲ್ಲಿ ಸ್ಮಾರ್ಟ್ ಪೊಲೀಸ್ ಪಡೆಯನ್ನು ನಿರ್ಮಿಸಬಹುದು ಎಂದು ಅಮಿತ್ ಶಾ ಅಭಿಪ್ರಾಯಿಸಿದ್ದಾರೆ.
ತುರ್ತು ಸ್ಪಂದನಾ ಸಹಾಯ ವ್ಯವಸ್ಥೆ ಕೇಂದ್ರ ಗೃಹಸಚಿವಾಲಯದ ನಿರ್ಭಯಾ ಅನುದಾನದಡಿಯಲ್ಲಿನ ಪ್ರಮುಖ ಯೋಜನೆಯಾಗಿದೆ. ಅಪರಾಧಗಳನ್ನು ಅದರಲ್ಲೂ ಮಹಿಳೆ ಮತ್ತು ಮಕ್ಕಳ ವಿರುದ್ಧ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟುವ ಸಲುವಾಗಿ ಹೊರ ತರಲಾದ ಮಹತ್ವದ ಯೋಜನೆಯಾಗಿದೆ. 112 ಎಂಬ ಏಕ ತುರ್ತು ಸಂಖ್ಯೆಯನ್ನು ಇದರಡಿಯಲ್ಲಿ ಒದಗಿಸಲಾಗಿದ್ದು, ಇದಕ್ಕೆ ಕರೆ, ಎಸ್ಎಂಎಸ್, ಇಮೇಲ್ ಮಾಡುವ ಮೂಲಕ ಮತ್ತು 112 ಭಾರತೀಯ ಆ್ಯಪ್ಗಳ ಮೂಲಕ ತುರ್ತು ಮಾಹಿತಿಗಳನ್ನು ರವಾನಿಸಬಹುದಾಗಿದೆ.
ಸಮುದಾಯ ಪೊಲೀಸಿಂಗ್ ಅನ್ನು ಬಲಪಡಿಸುವ ನಿಟ್ಟಿನಲ್ಲಿ ‘ಡಯಲ್ 112’ ಅನ್ನು ಹೊರತರಲಾಗಿದೆ. ಆಪತ್ತಿನಲ್ಲಿ ಸಿಲುಕಿದ ವೇಳೆ ಮಹಿಳೆಯರು ಮತ್ತು ಇತರರು ಇದಕ್ಕೆ ಕರೆ ಮಾಡಿದರೆ ಅವರಿಗೆ ಶೀಘ್ರ ಸಹಾಯ ದೊರೆಯಲಿದೆ.
‘ಇ-ಬೀಟ್ ಬುಕ್’ ವೆಬ್ ಮತ್ತು ಮೊಬೈಲ್ ಆಧಾರಿತ ಅಪ್ಲಿಕೇಶನ್ ಆಗಿದ್ದು, ಇದು ನೈಜ ಸಮಯದಲ್ಲಿ ಅಪರಾಧ ಮತ್ತು ಅಪರಾಧಿಗಳಿಗೆ ಸಂಬಂಧಿಸಿದ ಮಾಹಿತಿಯ ಸಂಗ್ರಹಣೆ, ನವೀಕರಣ ಮತ್ತು ವಿಶ್ಲೇಷಣೆಯನ್ನು ಸರಾಗಗೊಳಿಸುತ್ತದೆ. ಚಂಡೀಗಢವನ್ನು 54 ವಿಭಾಗಗಳಾಗಿ ಇಲ್ಲಿ ವಿಂಗಡಿಸಲಾಗಿದೆ. ಪ್ರತಿ ವಿಭಾಗದಲ್ಲಿ, ಒಂದು ‘ಅಟಲ್ ಸೆಹಭಾಗಿತ ಕೇಂದ್ರ’ವು ಬೀಟ್ ಅಧಿಕಾರಿಯ ಮೇಲ್ವಿಚಾರಣೆಯಲ್ಲಿರಲಿದೆ, ಅಪ್ಲಿಕೇಶನ್ ಬಳಸಲು ಆಂಡ್ರಾಯ್ಡ್ ಫೋನ್ ಹೊಂದಿರಬೇಕು. ಇ-ಬೀಟ್ ಪುಸ್ತಕವನ್ನು ಅಪರಾಧ ಮತ್ತು ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್ವರ್ಕ್ ಮತ್ತು ಸಿಸ್ಟಮ್ಸ್ (ಸಿಸಿಟಿಎನ್ಎಸ್) ನೊಂದಿಗೆ ಜೋಡಿಸಲಾಗಿದೆ, ಇದು ಅಪರಾಧ / ಕ್ರಿಮಿನಲ್ ಡೇಟಾವನ್ನು ನೈಜ ಸಮಯದಲ್ಲಿ ನವೀಕರಣ ಮಾಡಲು ಸಹಾಯ ಮಾಡುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.