ವಿಶ್ವಸಂಸ್ಥೆ: ಮುಂದಿನ ವಾರ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ಥಾನವು ಕೆಳಮಟ್ಟಕ್ಕೆ ಇಳಿಯಲು ಪ್ರಯತ್ನಿಸಿದರೆ ಭಾರತವು ಉನ್ನತಮಟ್ಟವನ್ನು ಏರುತ್ತದೆ ಎಂದು ವಿಶ್ವಸಂಸ್ಥೆಯ ಭಾರತ ರಾಯಭಾರಿ ಸೈಯದ್ ಅಕ್ಬರುದ್ದೀನ್ ಹೇಳಿದ್ದಾರೆ. ಭಯೋತ್ಪಾದನೆಯನ್ನು ನೆಚ್ಚಿಕೊಂಡಿರುವ ಪಾಕಿಸ್ಥಾನಕ್ಕೆ ಭಾರತದ ವಿರುದ್ಧ ದ್ವೇಷ ಕಾರುವುದೇ ದೊಡ್ಡ ಕಾಯಕವಾಗಿಬಿಟ್ಟಿದೆ ಎಂದಿದ್ದಾರೆ.
ಸೆ.27ರಂದು ನ್ಯೂಯಾರ್ಕಿನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕಾಶ್ಮೀರದ ವಿಷಯವನ್ನು ಪ್ರಸ್ತಾಪ ಮಾಡುವುದಾಗಿ ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಈಗಾಗಲೇ ಹೇಳಿಕೊಂಡಿದ್ದಾರೆ. ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರೂ ಭಾಷಣವನ್ನು ಮಾಡಲಿದ್ದಾರೆ.
“ಜಾಗತಿಕ ವೇದಿಕೆಯಲ್ಲಿ ತಮ್ಮ ದೇಶವನ್ನು ಹೇಗೆ ಪ್ರತಿಬಿಂಬಿಸಿಕೊಳ್ಳಬೇಕು ಎಂಬ ಅರಿವು ಪ್ರತಿ ದೇಶಗಳಿಗೂ ಇರಬೇಕು. ಕೆಲವರು ಕೆಳ ಮಟ್ಟಕ್ಕೆ ಇಳಿಯಬಹುದು, ಆದರೆ ಈ ಸಂದರ್ಭದಲ್ಲಿ ನಮ್ಮ ಪ್ರತಿಕ್ರಿಯೆ ಉನ್ನತವಾಗಿಯೇ ಇರುತ್ತದೆ. ಅವರು ಕೆಳಮಟ್ಟಕ್ಕೆ ಇಳಿದಷ್ಟು, ನಾವು ಉನ್ನತವಾಗುತ್ತೇವೆ” ಎಂದಿದ್ದಾರೆ.
“ಉನ್ನತ ಮಟ್ಟದಲ್ಲಿರುತ್ತೇವೆ ಎಂಬ ವಿಶ್ವಾಸ ನಮಗಿದೆ. ಈ ಬಗ್ಗೆ ಈಗಾಗಲೇ ಸಾಕಷ್ಟು ಉದಾಹರಣೆಗಳನ್ನು ನಾವು ನೀಡಿದ್ದೇವೆ” ಎಂದಿದ್ದಾರೆ.
74 ನೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನಕ್ಕೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿಯವರ ಆದ್ಯತೆಗಳ ಬಗ್ಗೆ ಅಕ್ಬರುದ್ದೀನ್ ವಿವರಿಸಿದ್ದಾರೆ.
ಬಹುಪಕ್ಷೀಯ ಮತ್ತು ದ್ವಿಪಕ್ಷೀಯ ಸಭೆಗಳು, ಪ್ರಧಾನ ಮಂತ್ರಿಯವರು ಭಾಗವಹಿಸಲಿರುವ ಕಾರ್ಯಕ್ರಮಗಳು ಭಾರತವು ಹೇಗೆ ಉನ್ನತ ಮಟ್ಟಕ್ಕೆ ಏರುತ್ತದೆ ಎಂಬುದಕ್ಕೆ ಉದಾಹರಣೆಗಳನ್ನು ನೀಡುತ್ತದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.