ಪ್ಯಾರಿಸ್: ಅಕ್ಟೋಬರ್ 1 ರಂದು ಪ್ಯಾರಿಸ್ನಲ್ಲಿ ನಡೆಯಲಿರುವ ನಾಲ್ಕನೇ ಅಹಿಂಸಾ ಉಪನ್ಯಾಸದಲ್ಲಿ ಮಹಾತ್ಮಾ ಗಾಂಧಿಯನ್ನು ಮೂರು ಆಯಾಮದ ಹೊಲೊಗ್ರಾಮ್ ಮೂಲಕ ಅನಾವರಣಗೊಳಿಸಲಾಗುತ್ತಿದೆ.
ಈ ಕಾರ್ಯಕ್ರಮವನ್ನು ಯುನೆಸ್ಕೋ ಮಹಾತ್ಮ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಎಜುಕೇಶನ್ ಫಾರ್ ಪೀಸ್ ಆ್ಯಂಡ್ ಸಸ್ಟನೇಬಲ್ ಡೆವಲಪ್ಮೆಂಟ್ ಆಯೋಜನೆಗೊಳಿಸುತ್ತಿದೆ.
ಗಾಂಧೀಜಿ ಅವರ ಜನ್ಮ ವಾರ್ಷಿಕೋತ್ಸವದ 150 ನೇ ವರ್ಷದ ಅಂಗವಾಗಿ, ಗಾಂಧಿಯ ಮೂರು ಆಯಾಮದ ಆಳೆತ್ತರದ ಹೊಲೊಗ್ರಾಮ್ ಅಹಿಂಸಾ ಉಪನ್ಯಾಸದಲ್ಲಿ ಭಾಗಿಯಾಗಲಿದೆ. ವಿಜ್ಞಾನಿಗಳು, ಶಿಕ್ಷಣ ತಜ್ಞರು ಮತ್ತು ನೀತಿ ನಿರೂಪಕರೊಂದಿಗೆ ಸಂವಾದದಲ್ಲಿ ಇದು ಭಾಗಿಯಾಗಲಿದೆ.
ಹೊಲೊಗ್ರಾಮ್ 15 ನಿಮಿಷಗಳ ಕಾಲ ಭಾಷಣ ಮಾಡಲಿದೆ ಮತ್ತು ಪ್ರಶ್ನೆಗಳಿಗೆ ಉತ್ತರಿಸಲಿದೆ ಎಂದು ಆಯೋಜಕರು ಹೇಳಿದ್ದಾರೆ.
ಡೆವಲಪ್ಮೆಂಟಲ್ ಸೈಕಾಲಜಿ ಮತ್ತು ಕಾಗ್ನಿಟಿವ್ ನ್ಯೂರೋಸೈನ್ಸ್ ಆಫ್ ಎಜುಕೇಶನ್ ಮತ್ತು ಸಿಎನ್ಆರ್ ಎಸ್ ಪ್ರೊಫೆಸರ್ ಗ್ರೆಗೊಯಿರ್ ಬೊರ್ಸ್ಟ್, ಯುನೆಸ್ಕೋದ ಎಂಜಿಐಇಪಿಯ ಟೆಕ್ 2019 ರ ಸಲಹಾ ಮಂಡಳಿಯ ಸದಸ್ಯ ವೆರಾ ಎಲ್ ಖೌರಿ ಲಾಕೊಯಿಲ್ಹೆ ಮತ್ತು ಡೈರೆಕ್ಟರ್ ಯುನೆಸ್ಕೋ ಎಂಜಿಐಪಿ ಅನಂತ ದುರೈಯಪ್ಪ ಅವರು ಪ್ಯಾನೆಲ್ ಡಿಸ್ಕಶನಿನ ಭಾಗವಾಗಲಿದ್ದಾರೆ.
“ಗಾಂಧಿಯವರು ಅವರು ತಮ್ಮ ಕಾಲದಲ್ಲಿ ಹೆಚ್ಚು ಛಾಯಾಚಿತ್ರಕ್ಕೆ ಒಳಪಟ್ಟ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಅವರ ಛಾಯಾಚಿತ್ರಗಳು, ಚಿತ್ರೀಕರಿಸಿದ ಸಂದರ್ಶನಗಳು ಮತ್ತು ರೇಡಿಯೊ ಕಾರ್ಯಕ್ರಮಗಳು ಪ್ರಪಂಚದ ಜನರಿಗೆ ಲಭ್ಯವಾಗಿವೆ, ಆದರೆ ಇದು ಮಹಾತ್ಮ ಗಾಂಧಿಯವರ ಲಿಖಿತ ಕೃತಿಯ ಸಂಕಲಿಸಿದ 98 ಸಂಪುಟಗಳ ಶೇಕಡಾ 5 ಕ್ಕಿಂತಲೂ ಕಡಿಮೆಯಾಗಿದೆ. ಈ ಕೊರತೆಯನ್ನು ಹೊಲೊಗ್ರಾಮ್ ನಿವಾರಿಸಲಿದೆ. ಮಹಾತ್ಮನ ಲಿಖಿತ ಪದಗಳನ್ನು ಜೀವಂತ ರೀತಿಯ ಸನ್ನಿವೇಶದಲ್ಲಿ ಅನುಭವಿಸುವ ಅವಕಾಶವನ್ನು ಇದು ನೀಡಲಿದೆ “ಎಂದು ಡಾ. ಅನಂತ ದುರೈಯಪ್ಪ ಹೇಳಿದ್ದಾರೆ.
ಹೊಲೊಗ್ರಾಫಿ ಮೂಲಕ, ನಿಂತಿರುವ ಭಂಗಿಯಲ್ಲಿರುವ ಗಾಂಧೀಜಿಯ ಹೊಲೊಗ್ರಾಮ್ ಸತ್ಯಾಗ್ರಹ, ಅಹಿಂಸೆ, ದಯೆ, ವಿಮರ್ಶಾತ್ಮಕ ವಿಚಾರಣೆ ಮತ್ತು ಶಿಕ್ಷಣದ ಬಗ್ಗೆ ಗಾಂಧಿಯವರ ಬರಹಗಳ ಕುರಿತು ಚರ್ಚೆಗೆ ನಾಂದಿ ಹಾಡಲಿದೆ.
ಗಾಂಧಿಯವರ ಹೊಲೊಗ್ರಾಮ್, ನಂತರ ಪ್ಯಾನೆಲಿಸ್ಟ್ಗಳೊಂದಿಗೆ ಕುಳಿತುಕೊಂಡು, ಚರ್ಚೆಯನ್ನು ನಡೆಸಲಿದೆ. ಈ ಸಮಯದಲ್ಲಿ 2 ರಿಂದ 3 ನಿಮಿಷಗಳ ಕಾಲ ಪ್ರಶ್ನೆಗಳಿಗೆ ಉತ್ತರಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.