ನಾಸಿಕ್: ಹೊಸ ಕಾಶ್ಮೀರ, ಹೊಸ ಸ್ವರ್ಗವಾಗಿ ಉದಯವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸರ್ಕಾರ ಎರಡನೆಯ ಅವಧಿಯಲ್ಲಿ ಅಧಿಕಾರಕ್ಕೆ ಬಂದ ನೂರು ದಿನಗಳಲ್ಲಿ ಜಮ್ಮು ಕಾಶ್ಮೀರದ ವಿಶೇಷಾಧಿಕಾರವನ್ನು ತೆಗೆದು ಹಾಕಿ, ಅದನ್ನು ಎರಡು ಕೇಂದ್ರಾಡಳಿತ ಪ್ರದೇಶವಾಗಿ ವಿಭಜಿಸುವ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ ಎಂದರು.
ಮಹಾರಾಷ್ಟ್ರದಲ್ಲಿ ವಿಧಾನಸಭಾ ಪ್ರಚಾರ ಕಾರ್ಯಕ್ಕೆ ಆರಂಭವನ್ನು ನೀಡಿದ ಅವರು ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.
“ಜಮ್ಮು ಕಾಶ್ಮೀರ ಮತ್ತು ಲಡಾಖಿನ ಸಮಸ್ಯೆಯನ್ನು ಬಗೆಹರಿಸಲು ಹೊಸ ಪ್ರಯತ್ನಗಳನ್ನು ನಡೆಸುತ್ತೇವೆ ಎಂದು ನಾವು ಭರವಸೆಯನ್ನು ನೀಡಿದ್ದೆವು. ಆ ದಿಕ್ಕಿನತ್ತ ದೇಶ ಸಾಗುತ್ತಿದೆ ಎಂಬ ಬಗ್ಗೆ ನನಗೆ ಹೆಮ್ಮೆಯಾಗುತ್ತಿದೆ” ಎಂದಿದ್ದಾರೆ.
“ಕಾಶ್ಮೀರ ನಮ್ಮದು ಎಂದು ನಾವು ಯಾವಾಗಲೂ ಹೇಳುತ್ತೇವೆ. ಆದರೀಗ ಪ್ರತಿ ಭಾರತೀಯನಿಗೂ ಹೊಸ ಉದ್ಘೋಷ ಸಿಕ್ಕಿದೆ. ಅದೇನೆಂದರೆ ‘ಅಬ್ ಮಿಲ್ಕರ್ ಏಕ್ ನಯಾ ಕಾಶ್ಮೀರ್ ಬನಾನಾ ಹೈ (ಎಲ್ಲರೂ ಒಟ್ಟು ಸೇರಿ ಹೊಸ ಕಾಶ್ಮೀರವನ್ನು ನಿರ್ಮಿಸೋಣ)’ , ‘ಫಿರ್ ಏಕ್ ಬಾರ್ ಕಾಶ್ಮೀರ್ ಕೋ ಸ್ವರ್ಗ್ ಬನಾನಾ ಹೈ’ (ಕಾಶ್ಮೀರ ಮತ್ತೊಮ್ಮೆ ಸ್ವರ್ಗವಾಗುವಂತೆ ಮಾಡಬೇಕು)” ಎಂದರು.
ಉಳಿದ ಭಾರತ ಪಡೆಯುವ ಸಾಕಷ್ಟು ಸೌಲಭ್ಯಗಳಿಂದ ಕಾಶ್ಮೀರ ವಂಚಿತವಾಗಿದೆ. 370ನೇ ವಿಧಿ ರದ್ಧತಿಯಿಂದ ಕಾನೂನಿನ ಅನುಷ್ಠಾನಕ್ಕೆ ಇದ್ದ ಅಡೆತಡೆ ದೂರವಾಗಲಿದೆ. ಆ ರಾಜ್ಯ ಸಮೃದ್ಧಿಯಾಗಲು ಇದು ಸಹಕಾರಿಯಾಗಲಿದೆ ಎಂದರು.
“ಕಾಶ್ಮೀರವು ದೆಹಲಿಯಿಂದ ಬರಬಹುದಾದ ಬಹಳಷ್ಟು ಒಳ್ಳೆಯದನ್ನು ಕಳೆದುಕೊಂಡಿತು. ಆದರೆ ಈ ಅಡಚಣೆಯು ಈಗ ದೂರವಾಗಿದೆ. ಅವರು ಈಗ ನೇರವಾಗಿ ದೆಹಲಿಯಿಂದ ಪ್ರಯೋಜನವನ್ನು ಪಡೆಯಬಹುದು. ಇದರಿಂದ ಲಕ್ಷಾಂತರ ಜನರಿಗೆ ಪ್ರಯೋಜನವಾಗಲಿದೆ ಮತ್ತು ಅವರಿಗೆ ಹೊಸ ಭರವಸೆ ಮತ್ತು ಉತ್ತಮ ಭವಿಷ್ಯ ಸಿಗುತ್ತದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.