ನವದೆಹಲಿ: ಅಸ್ಸಾಂನಲ್ಲಿ ಇತ್ತೀಚಿಗಷ್ಟೇ ಮುಕ್ತಾಯಗೊಂಡಿರುವ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್ಆರ್ಸಿ)ಯನ್ನು ದೇಶವ್ಯಾಪಿಯಾಗಿ ಅನುಷ್ಠಾನಕ್ಕೆ ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಈ ಬಗ್ಗೆ ಹೇಳಿಕೊಂಡಿದ್ದಾರೆ. ಅಕ್ರಮ ವಲಸಿಗರನ್ನು ಪತ್ತೆ ಮಾಡುವ ಸಲುವಾಗಿ ದೇಶವ್ಯಾಪಿಯಾಗಿ ಎನ್ ಆರ್ ಸಿ ತರುವುದಾಗಿ ಅವರು ಹೇಳಿದ್ದಾರೆ.
ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ, ಅಧಿಕಾರಕ್ಕೆ ಮರಳಿದರೆ ರಾಷ್ಟ್ರವ್ಯಾಪಿ ಎನ್ಆರ್ಸಿ ನಡೆಸುತ್ತದೆ ಮತ್ತು ಕಾನೂನಿನ ಪ್ರಕಾರ ಅಕ್ರಮ ವಲಸಿಗರ ವಿರುದ್ಧ ಕ್ರಮ ಕೈಗೊಳ್ಳುತ್ತದೆ ಎಂದು ಭರವಸೆ ನೀಡಿತ್ತು ಎಂಬುದಾಗಿ ಹೇಳಿರುವ ಶಾ, ಯಾರು ಬೇಕಾದರು ಹೋಗಿ ನೆಲಸಬಹುದಾದ ರಾಷ್ಟ್ರ ವಿಶ್ವದಲ್ಲೇ ಇಲ್ಲ. ಯಾರಿಗಾದರೂ ಅಮೆರಿಕಾಗೆ ಬೇಕಾಬಿಟ್ಟಿ ಹೋಗಿ ನೆಲೆಸಲು ಸಾಧ್ಯವೇ? ಹಾಗಿದ್ದಾಗ ಭಾರತದಲ್ಲಿ ಹೇಗೆ ಅದು ಸಾಧ್ಯವಾಗುತ್ತದೆ? ಇದು ಸರಳವಾಗಿ ಅರ್ಥವಾಗುವ ವಿಷಯ ಎಂದಿದ್ದಾರೆ.
“ಇಂಗ್ಲೆಂಡ್, ನೆದರ್ಲ್ಯಾಂಡ್ಸ್, ರಷ್ಯಾದಲ್ಲಿ ಹೋಗಿ ನೆಲಸಲು ಯಾರೂ ನಮ್ಮನ್ನು ಅನುಮತಿಸುವುದಿಲ್ಲ. ಹಾಗಾದರೆ ಯಾರಾದರೂ ಹೇಗೆ ಭಾರತಕ್ಕೆ ಬಂದು ನೆಲೆಸುತ್ತಾರೆ. ದೇಶಗಳು ಈ ರೀತಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ದೇಶದ ಜನರು ರಾಷ್ಟ್ರೀಯ ನಾಗರಿಕ ನೋಂದಣಿಗೆ ಒಳಪಡುವುದು ಈ ಕಾಲದ ಅನಿವಾರ್ಯತೆಯಾಗಿದೆ” ಎಂದು ಶಾ ಹೇಳಿದ್ದಾರೆ.
ಸುದೀರ್ಘ ಸಮಯದವರೆಗೆ ನಡೆದ ಅಸ್ಸಾಂ ಎನ್ ಆರ್ ಸಿಯ ಅಂತಿಮ ಪಟ್ಟಿಯಿಂದ 19 ಲಕ್ಷಕ್ಕೂ ಹೆಚ್ಚು ಜನರನ್ನು ಪ ಹೊರಗಿಡಲಾಗಿದೆ. ಇವರೆಲ್ಲರೂ ಪ್ರಸ್ತುತ ಅಸ್ಸಾಂ ರಾಜ್ಯದಲ್ಲಿ ವಾಸಿಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.