ಬೆಂಗಳೂರು: ಆಗ್ನೇಯ ಏಷ್ಯಾದ ಅನೇಕ ದೇಶಗಳು ಭಾರತ ದೇಶೀಯವಾಗಿ ನಿರ್ಮಿಸಿದ ಲಘು ಯುದ್ಧ ವಿಮಾನ ತೇಜಸ್ ಅನ್ನು ಖರೀದಿಸುವ ಇಚ್ಛೆಯನ್ನು ವ್ಯಕ್ತಪಡಿಸಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಹೇಳಿದ್ದಾರೆ. ಇಂದು ತೇಜಸ್ ವಿಮಾನದಲ್ಲಿ ಹಾರಾಟವನ್ನು ನಡೆಸಿದ ಬಳಿಕ ಅವರು ಈ ಮಾತನ್ನಾಡಿದ್ದಾರೆ.
ತೇಜಸ್ ವಿಮಾನ ಹಾರಾಟದ ಅನುಭವದ ಬಗ್ಗೆ ಮಾತನಾಡಿದ ರಾಜನಾಥ್ ಸಿಂಗ್, “ಹಾರಾಟವು ತುಂಬಾ ಸುಗಮ ಮತ್ತು ಆರಾಮದಾಯಕವಾಗಿತ್ತು. ನನಗೆ ರೋಮಾಂಚನವನ್ನುಂಡು ಮಾಡಿತು” ಎಂದಿದ್ದಾರೆ.
ತೇಜಸ್ ಅನ್ನು ನಿರ್ಮಾಣ ಮಾಡಿದ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್, ಡಿಆರ್ ಡಿಓ ಮತ್ತು ಇತರ ಕೆಲವು ಏಜೆನ್ಸಿಗಳನ್ನು ರಾಜನಾಥ್ ಸಿಂಗ್ ಈ ವೇಳೆ ಅಭಿನಂದಿಸಿದರು.
“ನಾವು ಈಗ ವಿಶ್ವದಾದ್ಯಂತ ಯುದ್ಧ ವಿಮಾನಗಳನ್ನು ರಫ್ತು ಮಾಡುವ ಮಟ್ಟಕ್ಕೆ ಬೆಳೆದು ನಿಂತಿದ್ದೇವೆ” ಎಂದು ಅವರು ಈ ವೇಳೆ ಹೇಳಿದ್ದಾರೆ.
ಟ್ವೀಟ್ ಮಾಡಿರುವ ರಾಜನಾಥ್ ಸಿಂಗ್, “ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣದಿಂದ ದೇಶೀಯ ಲಘು ಯುದ್ಧ ವಿಮಾನವಾದ ತೇಜಸ್ ಮೂಲಕ ಹಾರಾಟ ನಡೆಸಿದ್ದು ಅತ್ಯಂತ ಅದ್ಭುತ ಮತ್ತು ಆಹ್ಲಾದಕರ ಅನುಭವವಾಗಿತ್ತು. ತೇಜಸ್ ಹಲವಾರು ನಿರ್ಣಾಯಕ ಸಾಮರ್ಥ್ಯಗಳನ್ನು ಹೊಂದಿರುವ ಬಹು-ಪಾತ್ರ ಹೋರಾಟಗಾರ. ಇದು ಭಾರತದ ವಾಯು ರಕ್ಷಣಾ ಸಾಮರ್ಥ್ಯಗಳನ್ನು ಬಲಪಡಿಸುವ ಉದ್ದೇಶಕ್ಕಾಗಿ ನಿರ್ಮಿತಗೊಂಡಿದೆ” ಎಂದಿದ್ದಾರೆ.
Flying on ‘Tejas’, an Indigenous Light Combat Aircraft from Bengaluru’s HAL Airport was an amazing and exhilarating experience.
Tejas is a multi-role fighter with several critical capabilities. It is meant to strengthen India’s air defence capabilities. pic.twitter.com/jT95afb0O7
— Rajnath Singh (@rajnathsingh) September 19, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.