ಮೋತಿ ಬಾಗ್: ಉತ್ತರಾಖಂಡದ ರೈತನ ಜೀವನವನ್ನು ಆಧರಿಸಿದ ‘ಮೋತಿ ಬಾಗ್’ ಎಂಬ ಸಾಕ್ಷ್ಯಚಿತ್ರವನ್ನು ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ. ನಿರ್ಮಲ್ ಚಂದರ್ ನಿರ್ದೇಶನದ ಈ ಸಾಕ್ಷ್ಯಚಿತ್ರವು ಉತ್ತರಾಖಂಡದ ಪೌರಿ ಗರ್ವಾಲ್ ಪ್ರದೇಶದ ಹಳ್ಳಿಗೆ ಸೇರಿದ ವಿದ್ಯಾದತ್ತ್ ಎಂಬ ರೈತನ ಜೀವನವನ್ನು ಆಧರಿಸಿದೆ.
ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರು ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದು, ಈ ಸಾಧನೆಗಾಗಿ ಚಿತ್ರದ ನಿರ್ದೇಶಕ ನಿರ್ಮಲ್ ಚಂದರ್ ದಂಡ್ರಿಯಾಲ್ ಅವರನ್ನು ಅಭಿನಂದಿಸಿದ್ದಾರೆ. ಈ ಚಿತ್ರವು ಗ್ರಾಮದ ಯುವಕರಿಗೆ ತಮ್ಮ ಹಳ್ಳಿಗಳಲ್ಲೇ ಉಳಿದು ಸಾಧನೆ ಮಾಡುವಂತೆ ಮತ್ತು ತಮ್ಮ ಸಮುದಾಯಗಳಿಗೆ ಕೊಡುಗೆ ನೀಡುವಂತೆ ಪ್ರೇರಣೆ ನೀಡುತ್ತದೆ ಎಂದಿದ್ದಾರೆ. ಅಲ್ಲದೇ ದೂರದ ಪ್ರದೇಶಗಳಿಂದ ವಲಸೆ ಹೋಗುವುದನ್ನು ತಡೆಯಲು ಈ ಚಿತ್ರವು ಸಹಾಯ ಮಾಡುತ್ತದೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.
ಗ್ರಾಮಗಳಿಂದ ವಲಸೆ ಹೋಗುವುದನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಮತ್ತು ರಾಜ್ಯ ಸರ್ಕಾರ ಪ್ರಾರಂಭಿಸಿರುವ ಯೋಜನೆಗಳ ಲಾಭವನ್ನು ಪಡೆದುಕೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಯುವ ರೈತರಿಗೆ ಮನವಿಯನ್ನು ಮಾಡಿಕೊಂಡಿದ್ದಾರೆ.
ಮೋತಿ ಬಾಗ್ ಒಂದು ಸಾಕ್ಷ್ಯಚಿತ್ರವಾಗಿದ್ದು, ಹಿಮಾಲಯ ರಾಜ್ಯವಾದ ಉತ್ತರಾಖಂಡದ ದೂರದ ಹಳ್ಳಿಯ ರೈತನಾದ ವಿದ್ಯಾದತ್ತ್ ಅವರ ಜೀವನವನ್ನು ಆಧರಿಸಿದೆ. ತನ್ನ ಜಮೀನನ್ನು ಜೀವಂತವಾಗಿಡಲು ಮತ್ತು ಜನವಸತಿಯಿಲ್ಲದ ಗುಡ್ಡಗಾಡು ಪ್ರದೇಶಗಳನ್ನು ಸಂರಕ್ಷಿಸಲು ಸುದೀರ್ಘ 83 ವರ್ಷಗಳ ಕಾಲ ಅವರು ನಡೆಸಿದ ಹೋರಾಟವನ್ನು ಸಾಕ್ಷ್ಯಚಿತ್ರದಲ್ಲಿ ಅದ್ಭುತವಾಗಿ ಕಟ್ಟಿಕೊಡಲಾಗಿದೆ.
ಹಳ್ಳಿಗಳಿಂದ, ವಿಶೇಷವಾಗಿ ಉತ್ತರಾಖಂಡದ ಗರ್ವಾಲ್ ಮತ್ತು ಕುಮಾವೂನ್ ಪ್ರದೇಶಗಳಲ್ಲಿನ ದೂರದ ಹಳ್ಳಿಗಳ ಜನರು ವಲಸೆ ಹೋಗುವ ವಿಷಯದ ಬಗ್ಗೆ ಈ ಚಿತ್ರ ಬೆಳಕು ಚೆಲ್ಲುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.