ನವದೆಹಲಿ: ದೇಶದಲ್ಲಿ ಇ-ಸಿಗರೇಟ್ ಉತ್ಪಾದನೆ, ಆಮದು ಮತ್ತು ಮಾರಾಟವನ್ನು ಕೇಂದ್ರ ಸಚಿವ ಸಂಪುಟ ಬುಧವಾರ ನಿಷೇಧಕ್ಕೊಳಪಡಿಸಿದೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಾಹಿತಿಯನ್ನು ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
“ಇ-ಸಿಗರೆಟ್ ನಿಷೇಧಿಸಲು ಸಂಪುಟ ನಿರ್ಧಾರ ಕೈಗೊಂಡಿದೆ. ಇ-ಸಿಗರೇಟ್ಗಳ ಉತ್ಪಾದನೆ, ಆಮದು, ರಫ್ತು, ಮಾರಾಟ, ಸಂಗ್ರಹಣೆ ಮತ್ತು ಜಾಹೀರಾತನ್ನು ನಿಷೇಧಿಸಲಾಗಿದೆ. ಇ-ಸಿಗರೇಟ್ ಇಂದಿನ ಯುವಜನರ ಮೇಲೆ ಬೀರುತ್ತಿರುವ ಪರಿಣಾಮವನ್ನು ಗಮನದಲ್ಲಿರಿಸಿಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ” ಎಂದು ಸೀತಾರಾಮನ್ ಹೇಳಿದ್ದಾರೆ.
ಇ-ಸಿಗರೇಟ್ ನಿಷೇಧವನ್ನು ಸುಗ್ರೀವಾಜ್ಞೆಯ ಮೂಲಕ ದೇಶವ್ಯಾಪಿಯಾಗಿ ತರಲು ನಿರ್ಧಾರ ಮಾಡಲಾಗಿದೆ ಮತ್ತು ಮುಂಬರುವ ಸಂಸತ್ತಿನ ಅಧಿವೇಶನದಲ್ಲಿ ಈ ಬಗ್ಗೆ ವಿಷಯ ಮಂಡಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಸಾರ್ವಜನಿಕ ಹಿತದೃಷ್ಟಿಯಿಂದ ಇ-ಸಿಗರೇಟುಗಳನ್ನು ನಿಷೇಧಿಸಬೇಕು ಎಂದು ಆರೋಗ್ಯ ಸಚಿವಾಲಯವು ಪ್ರಸ್ತಾಪವನ್ನು ಸಲ್ಲಿಕೆ ಮಾಡಿತ್ತು. ಮಕ್ಕಳು ಮತ್ತು ಯುವ ಜನರಿಗೆ ಇ-ಸಿಗರೆಟ್ಗಳು ವ್ಯಸನಗಳಾಗಿ ಪರಿವರ್ತನೆಗೊಳ್ಳುತ್ತಿದ್ದು, ಇದು ಆರೋಗ್ಯಕ್ಕೆ ತೀರಾ ಮಾರಕವಾಗಿದೆ ಎಂದು ಅದು ಹೇಳಿತ್ತು. ಕರಡು ಸುಗ್ರೀವಾಜ್ಞೆಯಲ್ಲಿ ಈ ಹಿಂದೆ ಆರೋಗ್ಯ ಅಧಿಕಾರಿಗಳು ಸಿಗರೇಟು ಉತ್ಪಾದನೆ ಮಾಡುವವರಿಗೆ ಮತ್ತು ಮಾರಾಟ ಮಾಡುವವರಿಗೆ ಗರಿಷ್ಠ ಒಂದು ವರ್ಷದವರೆಗೆ ಜೈಲು ಶಿಕ್ಷೆ ಮತ್ತು ಮೊದಲ ಬಾರಿಗೆ ಉಲ್ಲಂಘಿಸಿದವರಿಗೆ 1 ಲಕ್ಷ ರೂ.ದಂಡವನ್ನು ಪ್ರಸ್ತಾಪಿಸಿದ್ದರು.
#UnionCabinet has today approved the Promulgation of the Prohibition of Electronic Cigarettes (production, manufacture, import, export, transport, sale, distribution, storage and advertisement) Ordinance, 2019.#cabinetdecisions pic.twitter.com/rQg1NUMzbL
— PIB India (@PIB_India) September 18, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.