ನವದೆಹಲಿ: ಎಲ್ಲಾ ಸರ್ಕಾರೇತರ ಸಂಸ್ಥೆಗಳ (ಎನ್ಜಿಒ) ಸದಸ್ಯರು ಮತ್ತು ಕಾರ್ಯಕರ್ತರು ಧಾರ್ಮಿಕ ಮತಾಂತರದೊಂದಿಗೆ ಸಂಬಂಧ ಹೊಂದಿಲ್ಲ ಅಥವಾ ಕೋಮು ಸೌಹಾರ್ದತೆಗೆ ಧಕ್ಕೆ ತಂದ ಪ್ರಕರಣವನ್ನು ಎದುರಿಸುತ್ತಿಲ್ಲ ಎಂದು ಘೋಷಿಸುವುದನ್ನು ಕೇಂದ್ರ ಗೃಹ ಸಚಿವಾಲಯ ಕಡ್ಡಾಯಗೊಳಿಸಿದೆ.
ಎನ್ಜಿಒವೊಂದರಲ್ಲಿ ಕೆಲಸ ಮಾಡುವ ಯಾವುದೇ ವ್ಯಕ್ತಿಯೂ ವಿದೇಶಿಯರ ಕೊಡುಗೆ ನಿಯಂತ್ರಣ ಕಾಯ್ದೆ (ಎಫ್ಸಿಆರ್ಎ) ಅಡಿಯಲ್ಲಿ ನೋಂದಾಯಿಸಿಕೊಳ್ಳಬೇಕಾದರೆ ಈ ಘೋಷಣೆಯನ್ನು ಮಾಡುವುದು ಅನಿವಾರ್ಯ ಎಂದು ಸಚಿವಾಲಯ ಹೇಳಿದೆ. 2019 ರ ವಿದೇಶಿ ಕೊಡುಗೆ ನೋಂದಣಿ ನಿಯಮಗಳ (ಎರಡನೇ ತಿದ್ದುಪಡಿ) ಪ್ರಕಾರ, ಸರ್ಕಾರೇತರ ಸಂಸ್ಥೆಗಳ ಪ್ರತಿ ಪದಾಧಿಕಾರಿ, ಕಾರ್ಯಕಾರಿ ಮತ್ತು ಸದಸ್ಯರು 10 ರೂಪಾಯಿಯ ನ್ಯಾಯಾಂಗೇತರ ಸ್ಟ್ಯಾಂಪ್ ಪೇಪರ್ ಮೇಲೆ ಅಫಿಡವಿಟ್ ಅನ್ನು ಸಲ್ಲಿಸಬೇಕು ಮತ್ತು ಅದನ್ನು ನೋಟರಿಯಿಂದ ದೃಢೀಕರಿಸಬೇಕು.
ಈ ಮೊದಲು 2011 ರ ಮಾನದಂಡಗಳ ಪ್ರಕಾರ, ಎಫ್ಸಿಆರ್ಎ ಅಡಿಯಲ್ಲಿ ವಿದೇಶಿ ಹಣವನ್ನು ಸ್ವೀಕರಿಸಲು ಗೃಹ ಸಚಿವಾಲಯದ ಅನುಮತಿಯನ್ನು ಪಡೆಯಲು ಉನ್ನತ ಅಧಿಕಾರಿಗಳು ಮಾತ್ರ ಈ ಘೋಷಣೆಯನ್ನು ಮಾಡಬೇಕಾಗಿತ್ತು.
ದೇಶದ ಹೊರಗಿನಿಂದ ಧನಸಹಾಯವನ್ನು ಪಡೆಯಲು ಎನ್ಜಿಒಗಳ ಪರವಾನಗಿಗಳನ್ನು ಮೇಲ್ವಿಚಾರಣೆ ಮಾಡುವ ಎಫ್ಸಿಆರ್ಎ ನಿಯಮಗಳನ್ನು ಈ ಹಿಂದೆ 2012, 2015 ಮತ್ತು 2019 ರಲ್ಲಿ ತಿದ್ದುಪಡಿ ಮಾಡಲಾಗಿದೆ. ಆದರೆ, ವೈಯಕ್ತಿಕ ಉಡುಗೊರೆ ಮೌಲ್ಯವನ್ನು ಹೆಚ್ಚಿಸುವ ಸಲುವಾಗಿ, ನಿಯಮ 6 ಎಗೆ ತಿದ್ದುಪಡಿ ಮಾಡುವ ಮೂಲಕ ಹಣಕಾಸು ವರ್ಷದಲ್ಲಿ 25 ಸಾವಿರ ರೂ.ಗಳಿಂದ 1 ಲಕ್ಷ ರೂ.ವರೆಗಿನ ಉಡುಗೊರೆ ಸ್ವೀಕರಿಸುವಂತೆ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.