ಗುರುಗ್ರಾಮ: ಹರಿಯಾಣದ ಗುರುಗ್ರಾಮದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಮೊದಲ ವಿಶ್ವವಿದ್ಯಾಲಯವು ಮುಂದಿನ ಶೈಕ್ಷಣಿಕ ವರ್ಷದಿಂದ ಕಾರ್ಯಾರಂಭ ಮಾಡಲಿದೆ. ಈ ವಿಶ್ವವಿದ್ಯಾಲಯಕ್ಕೆ ಅಶೋಕ್ ಸಿಂಘಲ್ ವೇದ್ ವಿಗ್ಯಾನ್ ಪ್ರೌದ್ಯೋಗಿಕಿ ವಿಶ್ವವಿದ್ಯಾಲಯಂ ಎಂದು ನಾಮಕರಣ ಮಾಡಲಾಗಿದೆ.
ಪ್ರಾಚೀನ ವೇದಿಕ ಪರಂಪರೆಯ ಬೋಧನಾ ಶೈಲಿಯನ್ನು ಈ ವಿಶ್ವವಿದ್ಯಾಲಯದಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ.
ವೇದ ಮತ್ತು ಆಧುನಿಕ ಶಿಕ್ಷಣ ಎರಡನ್ನೂ ಇದು ಹೊಂದಲಿದೆ. ಅದರ ಜೊತೆಗೆ ವೇದ ಕಾಲದ ಬೋಧನಾ ವಾತಾವರಣವನ್ನು ಗುರುಕುಲದಂತೆ ಇಲ್ಲಿ ಮರುಸೃಷ್ಟಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ಇದಕ್ಕಾಗಿ ಕೆಲವೊಂದು ತರಗತಿಗಳನ್ನು ಮರದ ಕೆಳಗೆ ನಡೆಸಲು ನಿರ್ಧರಿಸಿದೆ. ಇದರಿಂದ ಕಲಿಕೆಗೆ ವೇದ ಕಾಲದ ಸ್ಪರ್ಶ ಸಿಗಲಿದೆ.
“ವಿಶ್ವವಿದ್ಯಾಲಯದ ಕ್ಯಾಂಪಸ್ ವೈದಿಕ ಸ್ತೋತ್ರಗಳೊಂದಿಗೆ ಪ್ರತಿಧ್ವನಿಸಲಿದೆ. ಸಾರ್ವಜನಿಕ ಭಾಷಣ ವ್ಯವಸ್ಥೆಯ ಮೂಲಕ ಉಪನಿಷತ್ತುಗಳು ಮತ್ತು ‘ಭಗವದ್ಗೀತಾ’ದ ಸಾರಗಳನ್ನು ಕ್ಯಾಂಪಸ್ನಾದ್ಯಂತ ಬೆಳಿಗ್ಗೆ ಮತ್ತು ಸಂಜೆ ಪ್ರಸಾರ ಮಾಡಲಾಗುವುದು” ಎಂದು ಹಿರಿಯ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.
ಕ್ಯಾಂಪಸ್ನಲ್ಲಿ ‘ವೈದಿಕ ಗೋಪುರ’ವನ್ನು ಸಹ ನಿರ್ಮಿಸಲಾಗುತ್ತಿದೆ ಮತ್ತು ಪ್ರತಿ ವೇದ ಸಂಬಂಧಿತ ಸಾಹಿತ್ಯವು ಆಡಿಯೊ-ವಿಷುಯಲ್ ಸ್ಟುಡಿಯೊದೊಂದಿಗೆ ಪ್ರತ್ಯೇಕ ಘಟಕವನ್ನು ಹೊಂದಿರಲಿದೆ ಎಂದು ಮೂಲಗಳು ತಿಳಿಸಿವೆ.
ಸುರಭಿ ಸದನ್ (ಗೋ ಆಶ್ರಯ), ದೇವಾಲಯ, ಲೈಬ್ರರಿ, ಧ್ಯಾನ ಮಂದಿರ ಮತ್ತು ಯಜ್ಞ ಶಾಲಾ ಕೂಡ ಇದರಲ್ಲಿ ಇರಲಿದೆ.
ಒಟ್ಟು 39.68 ಎಕರೆ ಪ್ರದೇಶದಲ್ಲಿ ಈ ವಿಶ್ವವಿದ್ಯಾಲಯವನ್ನು ನಿರ್ಮಿಸಲಾಗುತ್ತಿದ್ದು, ಇದನ್ನು ಅನೇಕ ಹಂತಗಳಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.