ನವದೆಹಲಿ: ಮುಂಬರುವ ದಸರಾ ಹಬ್ಬದ ಸಂದರ್ಭದಲ್ಲಿ ಭಾರತದ ದೇಗುಲಗಳು, ರೈಲ್ವೇ ನಿಲ್ದಾಣಗಳು ಮುಂತಾದ ಕಡೆಗಳಲ್ಲಿ ಬಾಂಬ್ ದಾಳಿಯನ್ನು ನಡೆಸುವುದಾಗಿ ಪಾಕಿಸ್ಥಾನ ಮೂಲದ ಭಯೋತ್ಪಾದನಾ ಸಂಘಟನೆ ಜೈಶೇ-ಇ-ಮೊಹಮ್ಮದ್ ಬೆದರಿಕೆ ಹಾಕಿದೆ.
ವರದಿಯ ಪ್ರಕಾರ, ಭದ್ರತಾ ಪಡೆಗಳು ಬೆದರಿಕೆ ಪತ್ರಗಳನ್ನು ಸ್ವೀಕರಿಸಿದ್ದು, ಅಕ್ಟೋಬರ್ ತಿಂಗಳಿನಲ್ಲಿ ನಡೆಯಲಿರುವ ದಸರಾ ಹಬ್ಬದ ಸಂದರ್ಭದಲ್ಲಿ ಭಯೋತ್ಪಾದನಾ ಸಂಘಟನೆಯು ಕನಿಷ್ಠ 11 ರೈಲ್ವೇ ನಿಲ್ದಾಣ ಮತ್ತು ಆರು ದೇಗುಲಗಳ ಮೇಲೆ ದಾಳಿಯನ್ನು ನಡೆಸುವ ಎಚ್ಚರಿಕೆಯನ್ನು ನೀಡಿದೆ.
ಭಯೋತ್ಪಾದಕರು ಪತ್ರದಲ್ಲಿ ಉಲ್ಲೇಖಿಸಿರುವ ರೈಲ್ವೆ ನಿಲ್ದಾಣಗಳೆಂದರೆ, ರೋಹ್ಟಕ್, ರೇವಾರಿ, ಹಿಸಾರ್, ಕುರುಕ್ಷೇತ್ರ, ಮುಂಬೈ ನಗರ, ಬೆಂಗಳೂರು, ಚೆನ್ನೈ, ಜೈಪುರ, ಕೋಟಾ ಮತ್ತು ಇಟಾರ್ಸಿ ನಿಲ್ದಾಣಗಳು ಸೇರಿವೆ. ಅಲ್ಲದೆ, ರಾಜಸ್ಥಾನ, ಗುಜರಾತ್, ತಮಿಳುನಾಡು, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಹರಿಯಾಣ ದೇವಾಲಯಗಳನ್ನು ದಾಳಿಯ ಗುರಿಗಳೆಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ವರದಿಯ ಪ್ರಕಾರ, ಹರಿಯಾಣದ ರೋಹ್ಟಕ್ ಜಂಕ್ಷನ್ ಸ್ಟೇಷನ್ ಪೊಲೀಸ್ ಅಧಿಕಾರಿಯು ಪಾಕಿಸ್ಥಾನದ ಕರಾಚಿಯಿಂದ ಬಂದಿರುವ ಮಸೂದ್ ಅಹ್ಮದ್ ಎಂಬ ವ್ಯಕ್ತಿಯ ಹೆಸರನ್ನು ಹೊಂದಿರುವ ಪತ್ರವನ್ನು ಶನಿವಾರ ಮಧ್ಯಾಹ್ನ 3 ಗಂಟೆಗೆ ಸಾಮಾನ್ಯ ಅಂಚೆ ಮೂಲಕ ಸ್ವೀಕರಿಸಿದ್ದಾರೆ.
ಈ ಕುರಿತು ಹರಿಯಾಣ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬೆದರಿಕೆಯನ್ನು ಅನುಸರಿಸಿ, ರೇವಾರಿ ರೈಲ್ವೆ ನಿಲ್ದಾಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮತ್ತು ಇತರ ಪ್ರಮುಖ ಸ್ಥಾಪನೆಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.