ನವದೆಹಲಿ: ಭಾರತದ ಅಗ್ರಗಣ್ಯ ಬಿಲಿಯರ್ಡ್ಸ್ ಸೂಪರ್ಸ್ಟಾರ್ ಪಂಕಜ್ ಅಡ್ವಾಣಿ ಅವರು ಭಾನುವಾರ ಮಾಂಡಲೆನಲ್ಲಿ ನಡೆದ ಐಬಿಎಸ್ಎಫ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ಶಿಪ್ನಲ್ಲಿ 150-ಅಪ್ ಫಾರ್ಮ್ಯಾಟ್ನ ನಾಲ್ಕನೇ ನೇರ ಫೈನಲ್ ಪಂದ್ಯವನ್ನು ಗೆಲ್ಲುವ ಮೂಲಕ ದೇಶಕ್ಕೆ ತಮ್ಮ 22 ನೇ ವಿಶ್ವ ಪ್ರಶಸ್ತಿಯನ್ನು ತಂದುಕೊಟ್ಟಿದ್ದಾರೆ.
ಈ ಪ್ರಶಸ್ತಿ ತನಗೆ ಅತ್ಯಂತ ವಿಶೇಷವಾಗಿದೆ ಎಂದು ಬಣ್ಣಿಸಿರುವ ಪಂಕಜ್ ಅಡ್ವಾಣಿ, ” ಇದು ನಿಜಕ್ಕೂ ಟಚ್ ಆ್ಯಂಡ್ ಗೋ ಫ್ಯಾರ್ಮ್ಯಾಟ್ ಆಗಿತ್ತು ಮತ್ತು ನಾಲ್ಕು ವರ್ಷಗಳಿಂದ ಇದನ್ನು ಗೆಲ್ಲುತ್ತಾ ಬರುತ್ತಿರುವುದು ನಿಜಕ್ಕೂ ಅನಿರೀಕ್ಷಿತ ಮತ್ತು ಕೊನೆಯ ಆರರಲ್ಲಿ ಐದನ್ನು ಗೆಲ್ಲುವುದು ನಿಜಕ್ಕೂ ವಿಶೇಷವಾಗಿದೆ” ಎಂದಿದ್ದಾರೆ.
2019 World Billiards Champion (150 up) 🏆❤️😀💪🏼🥇 What. An. Incredible. Feeling. pic.twitter.com/MPQLSzsfnb
— Pankaj Advani (@PankajAdvani247) September 15, 2019
ಬಲಿಷ್ಠ ಅಡ್ವಾಣಿ ಅವರು 6-2 ರಿಂದ ಸ್ಥಳೀಯ ಸ್ಟಾರ್ ನಾಯ್ ಥೇ ಓ ವಿರುದ್ಧ ಜಯಗಳಿಸಿದರು. ಅಡ್ವಾಣಿಯವರ ವಿರುದ್ಧ ಸೋತ ನಂತರ, ನಾಯ್ ಥೇ ಓ ಅವರು ಸತತ ಎರಡನೇ ಬಾರಿಗೆ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಆರಂಭದಿಂದಲೂ ಪಂದ್ಯ ಒನ್ ಸೈಡೆಡ್ ಆಗಿತ್ತು.
“ನಾನು ಪ್ರತಿ ಸಲವೂ ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸುತ್ತೇನೆ, ಆದರೆ ಪ್ರತಿಸಲವೂ ಇನ್ನಷ್ಟು ಸಾಧಿಸುವ ನನ್ನ ಹುರುಪು ಕುಂದುವುದಿಲ್ಲ ಬದಲಿಗೆ ಹೆಚ್ಚಾಗುತ್ತದೆ. ಈ ವಿಜಯ ನನ್ನ ಗೆಲುವಿಗಾಗಿನ ಹಸಿವು ಮತ್ತು ಸ್ಪೂರ್ತಿ ಇನ್ನೂ ಜೀವಂತವಿದೆ ಎಂಬುದುದಕ್ಕೆ ಸಾಕ್ಷಿ” ಎಂದು ಪಂಕಜ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಪಂಕಜ್ ಅವರಿಗೆ ಟ್ವಿಟರ್ ಮೂಲಕ ಅಭಿನಂದನೆಗಳನ್ನು ತಿಳಿಸಿದ್ದು, “ಅಭಿನಂದನೆಗಳು ಪಂಕಜ್ ಅಡ್ವಾಣಿ. ನಿಮ್ಮ ಸಾಧನೆಗಳ ಬಗ್ಗೆ ಇಡೀ ದೇಶವೇ ಹೆಮ್ಮೆಪಡುತ್ತಿದೆ. ನಿಮ್ಮ ಸ್ಥಿರತೆ ನಿಜಕ್ಕೂ ಶ್ಲಾಘನೀಯವಾದುದು. ನಿಮ್ಮ ಭವಿಷ್ಯದ ಸಾಧನೆಗಳಿಗಾಗಿ ಶುಭ ಹಾರೈಕೆಗಳು” ಎಂದಿದ್ದಾರೆ.
Congratulations @PankajAdvani247! The entire nation is proud of your accomplishments. Your tenacity is admirable. Best wishes for your future endeavours. https://t.co/OVjkL2HIFy
— Narendra Modi (@narendramodi) September 15, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.