ನವದೆಹಲಿ: ಅಮೆರಿಕಾದ ಟೆಕ್ಸಾಸ್ನ ಹೌಸ್ಟನ್ನಲ್ಲಿ ಸೆಪ್ಟಂಬರ್ 22ರಂದು ನಡೆಯಲಿರುವ ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜೊತೆಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾಗಿಯಾಗುತ್ತಿರುವುದು ದೃಢಪಟ್ಟಿದೆ. ಟ್ರಂಪ್ ಅವರ ನಿರ್ಧಾರದಿಂದ ಸಂತೋಷವಾಗಿದೆ ಎಂದು ಮೋದಿ ಹೇಳಿಕೊಂಡಿದ್ದಾರೆ.
ಟ್ರಂಪ್ ಉಪಸ್ಥಿತಿಯನ್ನು ವೈಟ್ಹೌಸ್ ದೃಢಪಡಿಸುತ್ತಿದ್ದಂತೆ ಟ್ವಿಟ್ ಮಾಡಿರುವ ಮೋದಿಯವರು, “ಟ್ರಂಪ್ ಅವರ ಈ ವಿಶೇಷ ನಡೆ ಉಭಯ ದೇಶಗಳ ನಡುವಣ ವಿಶೇಷ ಸ್ನೇಹವನ್ನು ಸಾಂಕೇತಿಸುತ್ತದೆ. ಸೆ.22ರಂದು ಸಮುದಾಯ ಕಾರ್ಯಕ್ರಮದಲ್ಲಿ ಟ್ರಂಪ್ ಅವರು ನಮ್ಮ ಜೊತೆಗೂಡುತ್ತಿದ್ದಾರೆ ಎಂಬುದು ಅತೀವ ಸಂತೋಷ ತಂದಿದೆ. ಭಾರತೀಯ ಸಮುದಾಯದ ಜೊತೆ ಸೇರಿ ಟ್ರಂಪ್ ಅವರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸುವುದನ್ನು ಎದುರು ನೋಡುತ್ತಿದ್ದೇನೆ” ಎಂದಿದ್ದಾರೆ.
“ಹೋಸ್ಟನ್ನಲ್ಲಿ ನಮ್ಮ ಜೊತೆ ಸೇರುತ್ತಿರುವ ಟ್ರಂಪ್ ಅವರ ವಿಶೇಷ ನಡೆ ಬಾಂಧವ್ಯದ ಬಲಿಷ್ಠತೆಯನ್ನು ಎತ್ತಿ ತೋರಿಸುತ್ತದೆ ಮತ್ತು ಅಮೆರಿಕಾದ ಸಮಾಜ ಮತ್ತು ಆರ್ಥಿಕತೆಗೆ ಭಾರತೀಯ ಸಮುದಾಯ ನೀಡುತ್ತಿರುವ ಕೊಡುಗೆಗಳಿಗೆ ಮಾನ್ಯತೆ ಸಿಕ್ಕಿರುವುದನ್ನು ಸಾಂಕೇತಿಸುತ್ತದೆ” ಎಂದಿದ್ದಾರೆ.
A special gesture by @POTUS, signifying the special friendship between India and USA!
Delighted that President @realDonaldTrump will join the community programme in Houston on the 22nd.
Looking forward to joining the Indian origin community in welcoming him at the programme.
— Narendra Modi (@narendramodi) September 16, 2019
ಹೋಸ್ಟನ್ನಲ್ಲಿ ಪ್ರಧಾನಿ ಮೋದಿಯವರನ್ನು ಟ್ರಂಪ್ ಭೇಟಿ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ವೈಟ್ಹೌಸ್ “ವಿಶ್ವದ ಅತ್ಯಂತ ಹಳೆಯ ಮತ್ತು ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವಗಳ ನಡುವಿನ ಬಲವಾದ ಸಂಬಂಧವನ್ನು ಒತ್ತಿಹೇಳಲು ಒಂದು ಉತ್ತಮ ಅವಕಾಶ ಇದಾಗಿದೆ” ಎಂದಿದೆ.
“ಹೋಸ್ಟನ್ನಲ್ಲಿ ಅಧ್ಯಕ್ಷ ಟ್ರಂಪ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಮೆರಿಕ ಮತ್ತು ಭಾರತದ ಜನರ ನಡುವಿನ ಬಲವಾದ ಸಂಬಂಧವನ್ನು ಒತ್ತಿಹೇಳಲು, ವಿಶ್ವದ ಹಳೆಯ ಮತ್ತು ಅತಿದೊಡ್ಡ ಪ್ರಜಾಪ್ರಭುತ್ವಗಳ ನಡುವಿನ ಕಾರ್ಯತಂತ್ರದ ಸಹಭಾಗಿತ್ವವನ್ನು ಪುನರುಚ್ಚರಿಸಲು ಇದು ಒಂದು ಉತ್ತಮ ಅವಕಾಶವಾಗಿದೆ. ಉಭಯ ದೇಶಗಳ ಶಕ್ತಿ ಮತ್ತು ವ್ಯಾಪಾರ ಸಂಬಂಧವನ್ನು ಗಾಢವಾಗಿಸುವ ಮಾರ್ಗಗಳನ್ನೂ ಇದು ಚರ್ಚಿಸಲಿದೆ” ಎಂದು ವೈಟ್ಹೌಸ್ ಭಾನುವಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.