ಮುಜಾಫರಾಬಾದ್ : ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ತಾನು ಕಾಶ್ಮೀರ ಮತ್ತು ಕಾಶ್ಮೀರ ಜನರ ಹಿತಚಿಂತಕ ಎಂದು ತನ್ನನ್ನು ತಾನು ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ ಜನರು ಮಾತ್ರ ಇಮ್ರಾನ್ ಖಾನ್ ವಿರುದ್ಧ ತಿರುಗಿಬೀಳುತ್ತಿದ್ದಾರೆ. ಇತ್ತೀಚಿಗೆ ಪಿಒಕೆಗೆ ಭೇಟಿ ನೀಡಿದ್ದ ಅವರ ವಿರುದ್ಧ ನೂರಾರು ಜನರು ‘ಗೋ ಬ್ಯಾಕ್’ ಎಂದು ಷೋಷಣೆ ಕೂಗಿದ್ದಾರೆ.
ಶುಕ್ರವಾರ ಮುಜಾಫರಾಬಾದಿಗೆ ಭೇಟಿ ನೀಡಿದ್ದ ಇಮ್ರಾನ್ ಖಾನ್ ಅವರು, ಭಾರತ ಸರಕಾರದ ವಿರುದ್ಧ ಸಮಾವೇಶ ಆಯೋಜನೆಗೊಳಿಸಿದ್ದಾರೆ. ಜಮ್ಮ ಕಾಶ್ಮೀರ ಜನರ ಹಕ್ಕಿಗಾಗಿ ಪಿಒಕೆ ಜನರು ಎದ್ದು ನಿಲ್ಲಬೇಕು ಎಂದು ಕರೆ ನೀಡಿದ್ದಾರೆ. ಮೋದಿ ಜಮ್ಮ ಕಾಶ್ಮೀರದ ಜನರನ್ನು ಮೋದಿ ಸರ್ಕಾರ ಹತ್ತಿಕ್ಕುವ ಕಾರ್ಯ ಮಾಡುತ್ತಿದೆ ಎಂದು ಸುಳ್ಳು ಹರಡಿದ್ದಾರೆ.
ಆದರೆ ಅವರ ಸಮಾವೇಶಕ್ಕೆ ಅಡ್ಡಿಪಡಿಸಿದ ನೂರಾರು ಮಂದಿ, ಇಮ್ರಾನ್ ಖಾನ್ ಗೋ ಬ್ಯಾಕ್ ಎಂದು ಘೋಷಣೆ ಕೂಗಿದ್ದಾರೆ. ಪಾಕಿಸ್ಥಾನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಿಒಕೆ ಜನರು ನಿರಂತರವಾಗಿ ಪಾಕಿಸ್ಥಾನದ ವಿರುದ್ಧ ಪ್ರತಿಭಟನೆಗಳನ್ನು ನಡೆಸುತ್ತಲೇ ಬರುತ್ತಿದ್ದು, ಪಾಕಿಸ್ಥಾನ ತಮ್ಮ ಪ್ರದೇಶದ ಬಗ್ಗೆ ತಾರತಮ್ಯ ಧೋರಣೆಯನ್ನು ಅನುಸರಿಸುತ್ತಿದೆ ಎಂಬುದು ಅವರ ಆರೋಪವಾಗಿದೆ. ಪಾಕಿಸ್ಥಾನದ ಸೇನೆ ಕೂಡ ಪಿಒಕೆ ಭಾಗದಲ್ಲಿನ ಜನರ ಮೇಲೆ ನಿರಂತರವಾಗಿ ದೌರ್ಜನ್ಯಗಳನ್ನು ನಡೆಸುತ್ತಿದೆ ಎಂಬ ಆರೋಪಗಳು ಹಿಂದಿನಿಂದಲೂ ಕೇಳಿಬರುತ್ತಿವೆ. ಆದರೆ ಪಾಕಿಸ್ಥಾನ ಮಾತ್ರ ಈ ಆರೋಪವನ್ನು ಮುಚ್ಚಿಟ್ಟು ಭಾರತದ ವಿರುದ್ಧ ಅಲ್ಲಿನ ಜನರನ್ನು ಎತ್ತಿಕಟ್ಟುವ ಪ್ರಯತ್ನ ನಡೆಸುತ್ತಿದೆ.
ಇಮ್ರಾನ್ ಖಾನ್ ಅವರ ಭೇಟಿಯ ವೇಳೆ ಅಲ್ಲಿನ ಜನರು ನಡೆಸಿದ ಪ್ರತಿಭಟನೆ ನಿಜಕ್ಕೂ ಪಾಕಿಸ್ಥಾನ ಸರಕಾರಕ್ಕೆ ತೀವ್ರಸ್ವರೂಪದ ಮುಖಭಂಗವನ್ನು ಉಂಟುಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.