ಚೆನ್ನೈ: 4 ವರ್ಷದ ಬಾಲಕನೊಬ್ಬನಿಗೆ ಸೋದರ ಮಾವ ಮತ್ತು ಆತನ ಗೆಳೆಯರು ಸೇರಿಕೊಂಡು ಬಲವಂತವಾಗಿ ಮದ್ಯ ಕುಡಿಸುತ್ತಿದ್ದ ವಿಡಿಯೋವೊಂದು ಕಳೆದ ಕೆಲವು ದಿನಗಳಿಂದ ವಾಟ್ಸಾಪ್ನಲ್ಲಿ ಹರಿದಾಡುತ್ತಿತ್ತು.
ಈ ಆಘಾತಕಾರಿ ವಿಡಿಯೋವನ್ನು ತಮಿಳುನಾಡಿನ ಸುದ್ದಿವಾಹಿನಿಗಳು ಪ್ರಕಟಗೊಳಿಸಿದ್ದವು, ಇದರಿಂದ ಎಚ್ಚೆತ್ತುಕೊಂಡ ಪೊಲೀಸರು ತಕ್ಷಣವೇ ಬಾಲಕನ ಮಾವ ಸೇರಿದಂತೆ ಇತರ ಮೂವರನ್ನು ಬಂಧಿಸಿ ಲಾಕಪ್ಗೆ ಹಾಕಿದ್ದಾರೆ.
ತಿರುವಣ್ಣಮಲೈನ ಸೋಝಾನ್ಕೂಪಂ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವಿಡಿಯೋದಲ್ಲಿ ಅಕ್ಕಪಕ್ಕದಲ್ಲಿ ಕಾಣಿಸಿಕೊಂಡಿರುವ ವಾಹನಗಳ ಸಂಖ್ಯೆಯ ಆಧಾರದ ಮೇಲೆ ಪೊಲೀಸರು ಈ ಮಗುವಿಗೆ ಮದ್ಯ ಕುಡಿಸುತ್ತಿದ್ದ ದುರುಳರನ್ನು ಬಂಧಿಸಿದ್ದಾರೆ.
ಬಾಲಕನಿಗೆ ಮದ್ಯವನ್ನು ಕುಡಿಸಿ ಬಳಿಕ ಆತ ಅಮಲಿನಲ್ಲಿ ವರ್ತಿಸುತ್ತಿದ್ದ ರೀತಿಯನ್ನು ಕಂಡು ಎಂಜಾಯ್ ಮಾಡಲು ಕಿಡಿಗೇಡಿಗಳು ಈ ಕೃತ್ಯ ನಡೆಸಿದ್ದಾರೆ. ಅಲ್ಲದೇ ತಮ್ಮ ಮಹತ್ಕಾರ್ಯ ಎಲ್ಲರಿಗೂ ತಿಳಿಯಲಿ ಎಂದು ವಿಡಿಯೋ ಚಿತ್ರಿಸಿದ್ದಾರೆ. ಆದರೆ ಸೋದರ ಮಾವನೇ ಈ ಕೃತ್ಯದಲ್ಲಿ ಭಾಗಿಯಾಗಿರುವುದು ನಿಜಕ್ಕೂ ಆಘಾತಕಾರಿ.
ಅಪಹರಣ ಮತ್ತು ಮಕ್ಕಳ ದುರುಪಯೋಗಪಡಿಸಿಕೊಂಡ ಆರೋಪದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.