ನವದೆಹಲಿ: ಭಾರತವನ್ನು ಏಕ ಬಳಕೆ ಪ್ಲಾಸ್ಟಿಕ್ ಮುಕ್ತಗೊಳಿಸಲು ನರೇಂದ್ರ ಮೋದಿ ಸರ್ಕಾರ ಅಭಿಯಾನವನ್ನು ಆರಂಭಿಸಿದೆ. ಈ ನಿಟ್ಟಿನಲ್ಲಿ ದೇಶವ್ಯಾಪಿಯಾಗಿ ಜಾಗೃತಿ ಕಾರ್ಯಗಳು ನಡೆಯುತ್ತಿವೆ. ‘ಕೂಲಿ ನಂಬರ್ 1’ ಎಂಬ ಹಿಂದಿ ಸಿನಿಮಾದ ತಂಡವು ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಮುಂದಿಟ್ಟಿದೆ. ಇಡೀ ಸಿನಿಮಾ ಸೆಟ್ನಲ್ಲಿ ನೀರಿನ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಕೆ ಮಾಡದಿರಲು ಅದು ನಿರ್ಧರಿಸಿದೆ.
ಸಿನಿಮಾದ ನಾಯಕ ವರುಣ್ ಧವನ್ ಈ ಬಗ್ಗೆ ಟ್ವಿಟ್ ಮಾಡಿದ್ದು, “ಪ್ಲಾಸ್ಟಿಕ್ ಮುಕ್ತ ಭಾರತ ಈ ಕಾಲದ ಅನಿವಾರ್ಯತೆಯಾಗಿದೆ. ನಮ್ಮ ಪ್ರಧಾನಿಗಳು ಈ ನಿಟ್ಟಿನಲ್ಲಿ ಉತ್ತಮ ಕ್ರಮ ತೆಗೆದುಕೊಂಡಿದ್ದಾರೆ. ಸಣ್ಣ ಹೆಜ್ಜೆಯ ಮೂಲಕ ನಾವು ಇದನ್ನು ಸಾಕಾರಗೊಳಿಸಲು ಮುಂದಾಗಿದ್ದೇವೆ. ಕೂಲಿ ನಂಬರ್ 1 ಸೆಟ್ನಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಕೆ ಮಾಡದಿರಲು ನಿರ್ಧರಿಸಿದ್ದೇವೆ, ಎಲ್ಲರೂ ಸ್ಟೀಲ್ ಬಾಟಲಿಗೆ ಬದಲಾಗಿದ್ದೇವೆ” ಎಂದು ಹೇಳಿದ್ದಾರೆ. ಚಿತ್ರ ತಂಡವು ಸ್ಟೀಲ್ ಬಾಟಲಿಗಳೊಂದಿಗೆ ಫೋಸ್ ನೀಡಿದ ಫೋಟೋವನ್ನೂ ಹಂಚಿಕೊಂಡಿದ್ದಾರೆ.
ವರುಣ್ ಧವನ್ ಮಾಡಿರುವ ಈ ಟ್ವಿಟ್ ಪ್ರಧಾನಿ ನರೇಂದ್ರ ಮೋದಿಯವರ ಮೆಚ್ಚುಗೆಯನ್ನು ಗಳಿಸಿದೆ. “ಕೂಲಿ ನಂಬರ್ 1 ಟೀಮ್ ಉತ್ತಮ ಸಂದೇಶವನ್ನು ರವಾನಿಸಿದೆ. ಸಿನಿಮಾ ಲೋಕ ಭಾರತವನ್ನು ಏಕ ಬಳಕೆ ಪ್ಲಾಸ್ಟಿಕ್ ಮುಕ್ತವಾಗಿಸಲು ಕೊಡುಗೆ ನೀಡುತ್ತಿರುವುದನ್ನು ನೋಡಿ ಸಂತೋಷವಾಗುತ್ತಿದೆ” ಎಂದಿದ್ದಾರೆ.
Superb gesture by the team of #CoolieNo1! Happy to see the film world contributing towards freeing India from single use plastic. https://t.co/bPXFgHz2I4
— Narendra Modi (@narendramodi) September 12, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.