ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಸ್ವೀಕರಿಸಿದ ಉಡುಗೊರೆಗಳ ಎರಡನೇ ಆವೃತ್ತಿಯ ಹರಾಜು ಪ್ರಕ್ರಿಯೆಯನ್ನು ಸಂಸ್ಕೃತಿ ಸಚಿವಾಲಯದ ಆಯೋಜನೆಗೊಳಿಸುತ್ತಿದೆ. ಇಲ್ಲಿ ಮೋದಿಯವರು ಸ್ವೀಕರಿಸಿದ ಒಟ್ಟು 2,772 ಉಡುಗೊರೆಗಳು ಹರಾಜು ಆಗಲಿವೆ.
ಕೇಂದ್ರ ಸಂಸ್ಕೃತಿ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಅವರು ಹರಾಜಿನ ಬಗ್ಗೆ ಘೋಷಣೆಯನ್ನು ಮಾಡಿದ್ದು, ಸೆಪ್ಟೆಂಬರ್ 14 ರಿಂದ ಅಕ್ಟೋಬರ್ 3 ರವರೆಗೆ www.pmmementos.gov.in ಪೋರ್ಟಲ್ನಲ್ಲಿ ಹರಾಜನ್ನು ಆಯೋಜಿಸಲಾಗಿದೆ ಎಂದು ಹೇಳಿದ್ದಾರೆ.
ಮೋದಿ ಉಡುಗೊರೆಯಾಗಿ ಪಡೆದುಕೊಂಡ 576 ಶಾಲುಗಳು, 964 ಅಂಗವಸ್ತ್ರಗಳು, 88 ಪೇಟಗಳು ಮತ್ತು ವಿವಿಧ ಜಾಕೆಟ್ಗಳು, ಮೋದಿಯವರ ಭಾವಚಿತ್ರಗಳು, ಕಲಾಕೃತಿಗಳು ಹರಾಜಿಗೆ ಒಳಪಡಲಿವೆ. ಕಲಾಕೃತಿಗಳ ಮೂಲ ಬೆಲೆಗಳನ್ನು ರೂ.200 ರಿಂದ 2.5 ಲಕ್ಷ ರೂ.ಗಳವರೆಗೆ ನಿಗದಿಪಡಿಸಲಾಗಿದೆ. ಪ್ರಸ್ತುತ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ನಲ್ಲಿ ಇವುಗಳನ್ನು ಪ್ರದರ್ಶನಕ್ಕಿಡಲಾಗಿದೆ.
ಮೊದಲ ಆವೃತ್ತಿಯ ಹರಾಜಿನಲ್ಲಿ, ಪ್ರಧಾನಮಂತ್ರಿಗೆ ಉಡುಗೊರೆಯಾಗಿ ಸಿಕ್ಕ ವಿವಿಧ ವಸ್ತುಗಳಿಗೆ 1800 ಕ್ಕೂ ಹೆಚ್ಚು ಬಿಡ್ಗಳನ್ನು ಸ್ವೀಕರಿಸಲಾಗಿತ್ತು. ಕಳೆದ ಬಾರಿಯಂತೆ ಈ ಬಾರಿಯೂ ಹರಾಜಿನಿಂದ ಬಂದ ಹಣವನ್ನು ನಮಾಮಿ ಗಂಗೆ ಯೋಜನೆಗೆ ನೀಡಲು ಉದ್ದೇಶಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.