ಲಂಡನ್: ಯುಕೆಯಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿಗಳಿಗೆ ಅಲ್ಲಿನ ಸರ್ಕಾರ ಶುಭ ಸುದ್ದಿಯನ್ನು ನೀಡಿದೆ. ಅಧ್ಯಯನ ಮುಗಿದ ಬಳಿಕ ಎರಡು ವರ್ಷಗಳ ಕಾಲ ಆ ದೇಶದಲ್ಲಿ ಕಾರ್ಯನಿರ್ವಹಿಸುವ ಅವಕಾಶವನ್ನು ಅದು ಕಲ್ಪಿಸಿಕೊಟ್ಟಿದೆ. ಬ್ರಿಟಿಷ್ ಸರ್ಕಾರವು ಹೊಸ ಎರಡು ವರ್ಷಗಳ ಅಧ್ಯಯನೋತ್ತರ ಕೆಲಸದ ವೀಸಾವನ್ನು ಘೋಷಿಸಿದೆ. ಇದು ಭಾರತೀಯ ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಅನ್ವಯವಾಗಲಿದೆ. 2020-21ರಲ್ಲಿ ಪದವಿ ಕೋರ್ಸ್ಗೆ ಬ್ರಿಟಿಷ್ ವಿಶ್ವವಿದ್ಯಾಲಯಗಳನ್ನು ಆಯ್ಕೆ ಮಾಡುವ ವಿದ್ಯಾರ್ಥಿಗಳಿಗೆ “ಗ್ರ್ಯಾಜುವೇಟ್ ರೂಟ್” ಅನ್ನು ಅದು ಪ್ರಾರಂಭಿಸುತ್ತಿದೆ.
ಭಾರತದಲ್ಲಿರುವ ಬ್ರಿಟಿಷ್ ಹೈಕಮಿಷನರ್ ಸರ್ ಡೊಮಿನಿಕ್ ಅಸ್ಕ್ವಿತ್ ಅವರು ಈ ಬಗ್ಗೆ ಮಾಹಿತಿಯನ್ನು ನೀಡಿದ್ದು, “ಇದು ಭಾರತೀಯ ವಿದ್ಯಾರ್ಥಿಗಳಿಗೆ ಅದ್ಭುತವಾದ ಸುದ್ದಿಯಾಗಿದೆ, ಅವರು ಇನ್ನು ಮುಂದೆ ಪದವಿ ಮುಗಿದ ನಂತರ ಯುಕೆನಲ್ಲಿ ಹೆಚ್ಚಿನ ಸಮಯವನ್ನು ಕಳೆಯುವ ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ. ಇದರಿಂದಾಗಿ ಅವರಿಗೆ ಹೆಚ್ಚಿನ ಕೌಶಲ್ಯ ಮತ್ತು ಅನುಭವವನ್ನು ಪಡೆಯಲು ಸಾಧ್ಯವಾಗುತ್ತದೆ” ಎಂದು ಅವರು ಹೇಳಿದರು.
ಜೂನ್ 2019 ರ ವೇಳೆಗೆ ಯುಕೆನಲ್ಲಿ, 22,000 ಭಾರತೀಯ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದರು, ಯುಕೆ ಸರ್ಕಾರದ ಪ್ರಕಾರ ಇದು ವರ್ಷಕ್ಕೆ ಶೇಕಡಾ 42ರಷ್ಟು ಹೆಚ್ಚಳವಾಗಿದೆ ಮತ್ತು ಜೂನ್ 2016 ರಿಂದ ಸುಮಾರು ಶೇ.100ರಷ್ಟು ಹೆಚ್ಚಾಗಿದೆ.
“ಹೊಸ ಗ್ರ್ಯಾಜುವೇಟ್ ರೂಟ್ ಕಾರ್ಯಕ್ರಮವು ವಿಜ್ಞಾನ ಮತ್ತು ಗಣಿತ ಅಥವಾ ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್ ಯಾವುದೇ ವಿಷಯವನ್ನು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಯುಕೆಯಲ್ಲಿ ಎರಡು ವರ್ಷಗಳ ಕಾಲ ಕಾರ್ಯನಿರ್ವಹಿಸಲು ಅವಕಾಶವನ್ನು ನೀಡುತ್ತದೆ. ಯಶಸ್ವಿ ವೃತ್ತಿಜೀವನವನ್ನು ನಿರ್ಮಿಸಲು ಅವರು ಇಲ್ಲಿ ಅಮೂಲ್ಯವಾದ ಕೆಲಸದ ಅನುಭವವನ್ನು ಪಡೆಯಬಹುದು” ಎಂದು ಯುಕೆ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.