ಲಕ್ನೋ: ಉತ್ತರ ಪ್ರದೇಶ ಸರ್ಕಾರ 2024 ರ ವೇಳೆಗೆ ಕೃಷಿ ರಫ್ತು ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಂಪುಟ ಸಭೆಯಲ್ಲಿ ಈ ನಿಟ್ಟಿನ 11 ಪ್ರಸ್ತಾವನೆಗಳಿಗೆ ಅನುಮೋದನೆಯನ್ನು ನೀಡಲಾಗಿದೆ.
ಭತ್ತದ ಖರೀದಿ ನೀತಿಯಡಿ 50 ಲಕ್ಷ ಮೆಟ್ರಿಕ್ ಟನ್ ಭತ್ತವನ್ನು ಖರೀದಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಅಕ್ಟೋಬರ್ 1 ರಿಂದ ಕೆಲವು ಜಿಲ್ಲೆಗಳಲ್ಲಿ ಖರೀದಿ ಪ್ರಾರಂಭವಾಗಲಿದ್ದು, ಇದು ಜನವರಿ 31, 2020 ರವರೆಗೆ ಮುಂದುವರೆಯಲಿದೆ. ಕೆಲವು ಜಿಲ್ಲೆಗಳಲ್ಲಿ ಖರೀದಿ ಪ್ರಕ್ರಿಯೆಯು ನವೆಂಬರ್ 1 ರಿಂದ ಪ್ರಾರಂಭವಾಗಲಿದ್ದು, ಇದು ಫೆಬ್ರವರಿ 29, 2020 ರವರೆಗೆ ಮುಂದುವರೆಯಲಿದೆ ಎಂದು ಯುಪಿ ಸರ್ಕಾರದ ವಕ್ತಾರ ಶ್ರೀಕಾಂತ್ ಶರ್ಮಾ ತಿಳಿಸಿದ್ದಾರೆ.
“100 ಕ್ವಿಂಟಲ್ಗಿಂತ ಹೆಚ್ಚು ಭತ್ತವನ್ನು ಉತ್ಪಾದಿಸುವ ರೈತರು ಇಳುವರಿಯ ಪುರಾವೆಗಳನ್ನು ಹಂಚಿಕೊಳ್ಳಬೇಕಾಗುತ್ತದೆ. ಗುತ್ತಿಗೆ ಕೃಷಿಯಲ್ಲಿ ತೊಡಗಿರುವ ರೈತರಿಂದಲೂ ಭತ್ತವನ್ನು ಸರ್ಕಾರ ಖರೀದಿಸುತ್ತದೆ. ಈ ರೈತರಿಗೆ ಪಾವತಿಯನ್ನು 72 ಗಂಟೆಗಳ ಒಳಗೆ ಆನ್ಲೈನ್ನಲ್ಲಿ ಮಾಡಲಾಗುತ್ತದೆ. 2024 ರ ವೇಳೆಗೆ ಕೃಷಿ ರಫ್ತು ದ್ವಿಗುಣಗೊಳ್ಳಲಿದೆ. ಪ್ರಸ್ತುತ ಇದು 17,591 ಕೋಟಿ ರೂಪಾಯಿಗಳ ರಫ್ತು ನಡೆಯುತ್ತಿದೆ “ಎಂದಿದ್ದಾರೆ.
ಮಾತ್ರವಲ್ಲದೇ, “ಆ್ಯಸಿಡ್ ದಾಳಿ, ರೇಪ್, ಕೊಲೆ ಮತ್ತು ಗುಂಪು ಹತ್ಯೆ ಪ್ರಕರಣಗಳಲ್ಲಿ, ಶೇ.25ರಷ್ಟು ಮಧ್ಯಂತರ ಪರಿಹಾರವನ್ನು ತಕ್ಷಣದ ಆಧಾರದ ಮೇಲೆ ನೀಡುವ ಪ್ರಸ್ತಾಪವನ್ನು ಸಂಪುಟ ಇಂದು ಅಂಗೀಕರಿಸಿದೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರ ಶಿಫಾರಸ್ಸಿನ ಮೇರೆಗೆ ಮಧ್ಯಂತರ ಪರಿಹಾರವನ್ನೂ ನೀಡಲಾಗುತ್ತದೆ” ಎಂದು ಶರ್ಮಾ ಹೇಳಿದರು.
ಸಂಪುಟವು ಅಬಕಾರಿ ಕಾಯ್ದೆಯನ್ನೂ ತಿದ್ದುಪಡಿ ಮಾಡಿದೆ. “ಕುಡಿತ, ಕಳ್ಳತನ ಮತ್ತು ಕಲಬೆರಕೆ ತಡೆಗಟ್ಟಲು ಪೋರ್ಟಬಲ್ ಮತ್ತು ಪೋರ್ಟಬಲ್ ಅಲ್ಲದ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. ಆನ್ಲೈನ್ ಟ್ರ್ಯಾಕಿಂಗ್ಗಾಗಿ ಟ್ಯಾಂಕರ್ಗಳಿಗೆ ಜಿಪಿಎಸ್ ಅಳವಡಿಸಲು ನಿರ್ಧರಿಸಲಾಗಿದೆ” ಎಂದಿದ್ದಾರೆ.
ಮಹಾತ್ಮ ಗಾಂಧಿಯವರ 150 ನೇ ಜನ್ಮ ದಿನಾಚರಣೆಯಂದು ರಾಜ್ಯ ವಿಧಾನಸಭೆಯಲ್ಲಿ ಅಭಿವೃದ್ಧಿಗೆ ಸಂಬಂಧಿಸಿದ 17 ಅಂಶಗಳನ್ನು ಚರ್ಚಿಸಲಾಗುವುದು ಎಂದು ಶರ್ಮಾ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.