ನವದೆಹಲಿ: ಭಾರತೀಯ ರೈಲ್ವೆಯ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್ಸಿಟಿಸಿ) ಶೀಘ್ರದಲ್ಲೇ ದೇಶದ ಮೊದಲ ಖಾಸಗಿ ಪಾಲುದಾರಿತ್ವ-ಚಾಲಿತ ತೇಜಸ್ ಎಕ್ಸ್ಪ್ರೆಸ್ ರೈಲನ್ನು ದೆಹಲಿ-ಲಕ್ನೋ ಮಾರ್ಗದಲ್ಲಿ ಕಾರ್ಯಾಚರಿಸಲು ಮುಂದಾಗಿದೆ. ಈ ರೈಲಿನ ಮೂಲಕ ಅದು ಹಲವಾರು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಲು ಸಜ್ಜಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಐಆರ್ಸಿಟಿಸಿ, ತೇಜಸ್ ಎಕ್ಸ್ಪ್ರೆಸ್ ಚಲಾಯಿಸಲು ಖಾಸಗಿ ಆಪರೇಟರ್ ಅನ್ನು ಬಿಡ್ಡಿಂಗ್ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಲಾಗುತ್ತದೆ ಮತ್ತು ನವರಾತ್ರಿಯ ಸಮಯದಲ್ಲಿ ಅಕ್ಟೋಬರ್ ಮೊದಲ ವಾರದಲ್ಲಿ ರೈಲು ಕಾರ್ಯಾರಂಭಿಸುವ ನಿರೀಕ್ಷೆಯಿದೆ. ಈ ರೈಲನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಫ್ಲ್ಯಾಗ್ ಆಫ್ ಮಾಡಲಿದ್ದು, ಈ ಬಗ್ಗೆ ಅವರಿಗೆ ಮನವಿ ಮಾಡಿಕೊಳ್ಳಲಾಗಿದೆ ಎಂದಿದೆ.
ಈ ರೈಲುಗಳ ಶುಲ್ಕವು ಡೈನಾಮಿಕ್ ಪ್ರೈಸಿಂಗ್ ಸಿಸ್ಟಮ್ ಅನ್ನು ಆಧರಿಸಿರುತ್ತದೆ, ಈ ವ್ಯವಸ್ಥೆಯನ್ನು ಮೊದಲು ರಾಜಧಾನಿ ಮತ್ತು ಶತಾಬ್ದಿಯಂತಹ ರೈಲುಗಳಿಗೆ ಪರಿಚಯಿಸಲಾಯಿತು. ಆದರೂ, ಶುಲ್ಕವನ್ನು ವಿಮಾನಯಾನ ಸಂಸ್ಥೆಗಳಿಗಿಂತ ಕಡಿಮೆ ಇಡಲು ನಿರ್ಧರಿಸಲಾಗಿದೆ.
ಈ ರೈಲುಗಳಿಗೆ ಟಿಕೆಟ್ ಕಾಯ್ದಿರಿಸುವಿಕೆಯನ್ನು ಶೀಘ್ರದಲ್ಲೇ ಪ್ರಾರಂಭಿಸುವ ಸಾಧ್ಯತೆಯಿದೆ.
ಪ್ರಯಾಣಿಕರ ಮನೆಗಳಿಂದ ಲಗೇಜ್ಗಳನ್ನು ತೆಗೆದುಕೊಂಡು ಹೋಗುವುದು ಮತ್ತು ತರುವುದು ಮುಂತಾದ ಕಾರ್ಯಗಳಿಗೆ ಕೆಲವೊಂದು ನಿಬಂಧನೆಗಳು ಇರಬಹುದು ಎಂದು ಮೂಲಗಳು ತಿಳಿಸಿವೆ. ಇದಲ್ಲದೆ, ಬ್ಯುಸಿನೆಸ್ ಅಥವಾ ಎಕ್ಸಿಕ್ಯೂಟಿವ್ ಕ್ಲಾಸ್ನಲ್ಲಿ ಪ್ರಯಾಣಿಸುವ ಪ್ರಯಾಣಿಕರು ರೈಲ್ವೆ ನಿಲ್ದಾಣಗಳಲ್ಲಿ ವಿಶೇಷ ವಿಶ್ರಾಂತಿ ಸೌಲಭ್ಯವನ್ನು ಸಹ ಪಡೆಯಲಿದ್ದಾರೆ.
ತೇಜಸ್ ಎಕ್ಸ್ಪ್ರೆಸ್ ಪ್ರಯಾಣಿಕರು ಆನ್ಲೈನ್ ಪೋರ್ಟಲ್ ಮೂಲಕ ಹೋಟೆಲ್ ಬುಕಿಂಗ್, ಫ್ಲೈಟ್ ಬುಕಿಂಗ್, ಟ್ಯಾಕ್ಸಿ / ಕ್ಯಾಬ್ ಬುಕಿಂಗ್ ಮತ್ತು ಪೋರ್ಟರ್ಗಳಂತಹ ಸೌಲಭ್ಯಗಳನ್ನು ಪಡೆಯಬಹುದು ಎಂದು ಮೂಲಗಳು ತಿಳಿಸಿವೆ. ಈ ಸೌಲಭ್ಯಗಳನ್ನು ಪಡೆಯಲು ಹೆಚ್ಚುವರಿ ಮೊತ್ತವನ್ನು ಪಾವತಿಸಬೇಕಾಗುತ್ತದೆ, ಆದರೆ ಇದು ಪ್ರಯಾಣವನ್ನು ಸರಾಗಗೊಳಿಸಲಿದೆ.
ತೇಜಸ್ ಎಕ್ಸ್ಪ್ರೆಸ್ ರೈಲುಗಳಲ್ಲಿ ಉನ್ನತ ದರ್ಜೆಯ ಕ್ಯಾಟರಿಂಗ್ ಸೇವೆಯನ್ನು ಸಹ ಒದಗಿಸುವ ಸಾಧ್ಯತೆಯಿದೆ. ಕಾರ್ನ್-ಫ್ಲೇಕ್ಸ್, ಫ್ರೂಟ್ ಸಲಾಡ್ ಇತ್ಯಾದಿಗಳನ್ನು ಉಪಾಹಾರಕ್ಕಾಗಿ ನೀಡಲಾಗುತ್ತದೆ ಎನ್ನಲಾಗಿದೆ
ವಿಮಾನಯಾನಗಳಂತೆಯೇ, ಈ ರೈಲುಗಳಲ್ಲಿ ಟ್ರೈನ್ ಹೊಸ್ಟೆಸ್ಗಳೂ ಇರಬಹುದು ಎಂದು ಮೂಲಗಳು ತಿಳಿಸಿವೆ. ಪ್ರಯಾಣಿಕರ ಆನ್ ಬೋರ್ಡ್ ಮನೋರಂಜನೆಗಾಗಿ ವಿಶೇಷ ಗಮನ ನೀಡುವ ಸಾಧ್ಯತೆಯಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.