ನವದೆಹಲಿ: ದೇಶದ 45 ಕೋಟಿ ಅಸಂಘಟಿತ ವಲಯದ ಕಾರ್ಮಿಕರಿಗೆ ಪಿಂಚಣಿ ನೀಡುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಪ್ರಾರಂಭಿಸಿರುವ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಇದೀಗ ಮತ್ತೊಂದು ಮಹತ್ವದ ಯೋಜನೆಯನ್ನು ತರುತ್ತಿದೆ. ರೈತರಿಗೆ ಪಿಂಚಣಿ ಒದಗಿಸುವ ಪ್ರಧಾನ್ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ ಪ್ರಾರಂಭಿಸಲು ಸರ್ಕಾರ ಸಜ್ಜಾಗಿದೆ. ಈ ಯೋಜನೆಯನ್ನು ಪ್ರಧಾನಮಂತ್ರಿ ಮೋದಿ ಜಾರ್ಖಾಂಡ್ ರಾಜಧಾನಿ ರಾಂಚಿಯಲ್ಲಿ ಸೆಪ್ಟೆಂಬರ್ 12 ರಂದು ಪ್ರಾರಂಭಿಸಲಿದ್ದಾರೆ.
ಈ ಯೋಜನೆಯು 5 ಕೋಟಿ ಸಣ್ಣ ಮತ್ತು ಮಧ್ಯಮ ರೈತರನ್ನು ಗುರಿಯಾಗಿಸಿಕೊಂಡಿದೆ ಮತ್ತು ಮುಂದಿನ ಮೂರು ವರ್ಷಗಳಲ್ಲಿ 10,774 ಕೋಟಿ ರೂ.ಗಳ ಬಂಡವಾಳ ತೊಡಗಿಸುವಿಕೆಯನ್ನು ಒಳಗೊಂಡಿದೆ.
ಈ ಯೋಜನೆಯು 18 ರಿಂದ 40 ವರ್ಷದೊಳಗಿನ ರೈತರಿಗೆ ಸ್ವಯಂಪ್ರೇರಿತ ಮತ್ತು ಕೊಡುಗೆಯಾಗಿದೆ. 60 ವರ್ಷ ದಾಟಿದ ನಂತರ ರೈತರಿಗೆ ಮಾಸಿಕ 3000 ರೂ ಪಿಂಚಣಿಯನ್ನು ಈ ಯೋಜನೆಯ ಮೂಲಕ ನೀಡಲಾಗುತ್ತದೆ. ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಲ್ಐಸಿ) ಈ ಯೋಜನೆಗೆ ಪಿಂಚಣಿ ನಿಧಿ ವ್ಯವಸ್ಥಾಪಕನಾಗಿ ಆಯ್ಕೆಯಾಗಿದೆ.
ಯೋಜನೆಯನ್ನು ಆರಿಸಿಕೊಳ್ಳುವವರು ತಾವು ಪಿಂಚಣಿ ನಿಧಿಗೆ ಪ್ರವೇಶಿಸಿದ ವಯಸ್ಸಿಗೆ ಅನುಗುಣವಾಗಿ ಮಾಸಿಕ ರೂ. 55 ರಿಂದ 200 ರೂ. ವರೆಗೆ ಕೊಡುಗೆ ನೀಡಬೇಕು. 60 ವರ್ಷ ವಯಸ್ಸು ದಾಟಿದ ಬಳಿಕ ಅವರು ಪಾವತಿಸಿದ ಮಾಸಿಕ ಹಣಕ್ಕೆ ಅನುಗುಣವಾಗಿ ಅವರಿಗೆ ಪಿಂಚಣಿ ಬರುತ್ತದೆ. ಕೇಂದ್ರ ಸರ್ಕಾರವು ಪಿಂಚಣಿ ನಿಧಿಯಲ್ಲಿನ ಮೊತ್ತಕ್ಕೆ ಸಮಾನವಾದ ಕೊಡುಗೆಯನ್ನು ನೀಡುತ್ತದೆ.
ರೈತರು ತಮ್ಮ ಪಿಎಂ-ಕಿಸಾನ್ ಕಂತುಗಳಿಂದ ಅಥವಾ ಪ್ರದೇಶಗಳಲ್ಲಿನ ಸಾಮಾನ್ಯ ಸೇವಾ ಕೇಂದ್ರಗಳ (ಸಿಎಸ್ಸಿ) ಮೂಲಕ ಯೋಜನೆಗೆ ಕೊಡುಗೆ ನೀಡಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.