ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೇರಿದಂತೆ ಅನೇಕ ಗಣ್ಯರು ಬುಧವಾರ ದೇಶದ ಜನತೆಗೆ ಓಣಂ ಶುಭಾಶಯಗಳನ್ನು ಕೋರಿದ್ದಾರೆ.
ಟ್ವಿಟ್ ಮಾಡಿರುವ ಪ್ರಧಾನಿ ಮೋದಿ, “ಓಣಂ ಶುಭ ಸಂದರ್ಭದ ಶುಭಾಶಯಗಳು! ಈ ಹಬ್ಬವು ನಮ್ಮ ಸಮಾಜದಲ್ಲಿ ಸಂತೋಷ, ಆರೋಗ್ಯ ಮತ್ತು ಸಮೃದ್ಧಿಯ ಉತ್ಸಾಹವನ್ನು ಹೆಚ್ಚಿಸಲಿ” ಎಂದು ಹೇಳಿದ್ದಾರೆ.
Greetings on the auspicious occasion of Onam! May this festival further the spirit of happiness, well-being and prosperity in our society.
— Narendra Modi (@narendramodi) September 11, 2019
ಉಪ ರಾಷ್ಟ್ರಪತಿಯವರು ತನ್ನ ಟ್ವೀಟ್ನಲ್ಲಿ, “ಓಣಂ ಶುಭ ಸಂದರ್ಭದಲ್ಲಿ ದೇಶದ ಜನರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಮತ್ತು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಕೇರಳ ಪ್ರದೇಶದ ಪ್ರಸಿದ್ಧ ಪೌರಾಣಿಕ ರಾಜ ಮಹಾಬಲಿಯ ನೆನಪಿಗಾಗಿ ಓಣಂ ಆಚರಿಸಲಾಗುತ್ತದೆ. ಅವರ ಆದರ್ಶಮಯ ಕಲ್ಯಾಣ ಆಡಳಿತದ ವೇಳೆ ರಾಜ್ಯದಲ್ಲಿ ಶಾಂತಿ ಮತ್ತು ಸಮೃದ್ಧಿ ಮೇಲುಗೈ ಸಾಧಿಸಿತ್ತು” ಎಂದಿದ್ದಾರೆ.
ओणम के शुभ अवसर पर देश वासियों को हार्दिक शुभकामनाएं और बधाई देता हूं। ओणम, केरल क्षेत्र के प्रसिद्ध पौराणिक राजा महाबली की स्मृति में मनाया जाता है जिनके आदर्श लोक कल्याणकारी शासन में राज्य में शांति और समृद्धि थी। #Onam #Onam2019 pic.twitter.com/N3ZYQj2mSI
— VicePresidentOfIndia (@VPSecretariat) September 11, 2019
ತ್ಯಾಗ, ನಿಷ್ಠೆ ಮತ್ತು ಸಂತೃಪ್ತಿಯನ್ನು ಆಚರಿಸುವ ಸಮಯ ಇದು ಎಂದಿರುವ ನಾಯ್ಡು, “ಓಣಂ ಸಮೃದ್ಧಿ, ಕರುಣೆ, ಸಹಾನುಭೂತಿ, ತ್ಯಾಗ, ನಿಷ್ಠೆ ಮತ್ತು ಸಂತೃಪ್ತಿಯ ಹಬ್ಬವಾಗಿದೆ. ಈ ಶುಭ ಸಂದರ್ಭವು ನಮ್ಮ ದೇಶದಲ್ಲಿ ಶಾಂತಿ, ಸಾಮರಸ್ಯ, ಸಮೃದ್ಧಿ ಮತ್ತು ಸಂತೋಷವನ್ನು ತರುತ್ತದೆ ಎಂದು ನಾನು ಬಯಸುತ್ತೇನೆ” ಎಂದಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಶುಭ ಸಂದರ್ಭದಲ್ಲಿ ಜನರಿಗೆ ಟ್ವಿಟರ್ ಮೂಲಕ ಶುಭಾಶಯವನ್ನು ಕೋರಿದ್ದಾರೆ. “ಓಣಂನ ಶುಭ ಸಂದರ್ಭದಲ್ಲಿ ಎಲ್ಲರಿಗೂ, ವಿಶೇಷವಾಗಿ ಕೇರಳದ ಜನರಿಗೆ ಶುಭಾಶಯಗಳು. ಈ ಹಬ್ಬವು ನಿಮ್ಮ ಜೀವನದಲ್ಲಿ ಸಂತೋಷ, ಉತ್ತಮ ಆರೋಗ್ಯ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ. ಓಣಂ ಶುಭಾಶಯಗಳು!” ಎಂದು ಸಿಂಗ್ ಹೇಳಿದ್ದಾರೆ.
Greetings to everyone, especially the people of Kerala on the auspicious occasion of Onam.
May this festival brings happiness, good health, peace and prosperity in your life. Happy Onam!
— Rajnath Singh (@rajnathsingh) September 11, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.