ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಐತಿಹಾಸಿಕ ಭಾರತ-ನೇಪಾಳ ಪೆಟ್ರೋಲಿಯಂ ಪೈಪ್ಲೈನ್ ಅನ್ನು ನೇಪಾಳದ ಪ್ರಧಾನಿ ಕೆಪಿ ಶರ್ಮ ಒಲಿ ಅವರೊಂದಿಗೆ ಜಂಟಿಯಾಗಿ ಉದ್ಘಾಟನೆಗೊಳಿಸಿದ್ದಾರೆ.
ಇದು ದಕ್ಷಿಣ ಏಷ್ಯಾದ ಮೊತ್ತ ಮೊದಲ ಕ್ರಾಸ್ ಬಾರ್ಡರ್ ಪೈಪ್ಲೈನ್ ಆಗಿದೆ.
ಈ ಪೈಪ್ ಲೈನ್ ಮೂಲಕ ನೇಪಾಳಕ್ಕೆ ಭಾರತವು ಪರಿಸರಸ್ನೇಹಿ ವಿಧಾನದಲ್ಲಿ ನೇಪಾಳಕ್ಕೆ ಪೆಟ್ರೋಲಿಯಂ ಉತ್ಪನ್ನಗಳನ್ನು ಪೂರೈಕೆ ಮಾಡಲಿದೆ. ಈ ಪೈಪ್ಲೈನಿನ ಒಟ್ಟು ಉದ್ದ 69 ಕಿಮೀ ಆಗಿದೆ.
ರೂ. 350 ಕೋಟಿ ವೆಚ್ಚದಲ್ಲಿ ಒಂದು ವರ್ಷಗಳ ಅವಧಿಯಲ್ಲಿ ಇದನ್ನು ನಿರ್ಮಾಣ ಮಾಡಲಾಗಿದೆ. ಇಂಡಿಯನ್ ಆಯಿಲ್ ಕಾರ್ಪೋರೇಶನ್ ಇದರ ವೆಚ್ಚವನ್ನು ಪಬ್ಲಿಕ್ ಸೆಕ್ಟರ್ ಅಂಡರ್ಟೇಕಿಂಗ್ಸ್ ಮೂಲಕ ಭರಿಸಿದೆ.
ಈ ಯೋಜನೆಯನ್ನು ಉಭಯ ರಾಷ್ಟ್ರಗಳ ನಡುವಣ ದ್ವಿಪಕ್ಷೀಯ ಬಾಂಧವ್ಯದ ಸಂಕೇತ ಎಂದಿದ್ದಾರೆ.
ಈ ಪ್ರದೇಶದ ಭದ್ರತೆಯನ್ನು ಉತ್ತೇಜಿಸಲು ಸಹಾಯ ಮಾಡುವುದಾಗಿ ಭರವಸೆ ನೀಡಿದ ಮೋದಿ, ಪೈಪ್ಲೈನ್ ಯೋಜನೆಯು ಸಾಗಾಣೆ ದರವನ್ನು ಕಡಿತಗೊಳಿಸಲಿದೆ ಎಂದಿದ್ದಾರೆ.
Boosting ties with Nepal! Inaugurating first ever cross-border petroleum products pipeline in South Asia https://t.co/9CGe36g3m1
— Narendra Modi (@narendramodi) September 10, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.