ನವದೆಹಲಿ: ನರೇಂದ್ರ ಮೋದಿ ಸರ್ಕಾರವು ದೇಶದ ಭದ್ರತೆ, ಅಭಿವೃದ್ಧಿ ಮತ್ತು ಬಡವರ ಕಲ್ಯಾಣಕ್ಕೆ ಬದ್ಧತೆಯನ್ನು ತೋರಿಸುವುದರ ಜೊತೆಗೆ ಸಮಾಜದ ಪ್ರತಿ ವರ್ಗದ ಭರವಸೆಯ ಕಿರಣವಾಗಿ ಹೊರಹೊಮ್ಮಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ನರೇಂದ್ರ ಮೋದಿ ಸರ್ಕಾರ 100 ದಿನಗಳನ್ನು ಪೂರೈಸಿರುವ ಹಿನ್ನಲೆಯಲ್ಲಿ ಸರಣಿ ಟ್ವಿಟ್ಗಳನ್ನು ಮಾಡಿರುವ ಶಾ, ” ಮೋದಿ ಸರ್ಕಾರವು ರಾಷ್ಟ್ರೀಯ ಭದ್ರತೆ, ಅಭಿವೃದ್ಧಿ ಮತ್ತು ಬಡವರ ಕಲ್ಯಾಣಕ್ಕೆ ಬದ್ಧತೆಯನ್ನು ತೋರಿಸಿದೆ” ಎಂದಿದ್ದಾರೆ. 100 ದಿನಗಳ ಒಳಗಡೆ ಹಲವಾರು ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಂಡಿದೆ. ಜಮ್ಮ ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ತೆಗೆದುಹಾಕಿದೆ ಎಂದಿದ್ದಾರೆ.
“100 ದಿನಗಳ ಒಳಗಡೆ ಮೋದಿ ಸರ್ಕಾರ ಹಲವಾರು ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಂಡಿದೆ. 70 ವರ್ಷಗಳಿಂದ ಪ್ರತಿ ಭಾರತೀಯನು ಇಟ್ಟುಕೊಂಡಿದ್ದ ಆಶಯಗಳನ್ನು ಪೂರೈಕೆ ಮಾಡಿದೆ. 370ನೇ ವಿಧಿ ಮತ್ತು 35ಎ ಅನ್ನು ರದ್ದು ಪಡಿಸಿದ್ದರಿಂದ ಹಿಡಿದು ತ್ರಿವಳಿ ತಲಾಖ್ನಿಂದ ಮುಸ್ಲಿಂ ಮಹಿಳೆಯರಿಗೆ ಮುಕ್ತಿ ಕೊಡುವವರೆಗೆ, ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ತಂದು ರಾಷ್ಟ್ರೀಯ ಭದ್ರತೆಯನ್ನು ಗಟ್ಟಿಗೊಳಿಸುವವರೆಗೆ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ” ಎಂದಿದ್ದಾರೆ.
ಈ ಎಲ್ಲಾ ಐತಿಹಾಸಿಕ ನಿರ್ಧಾರಗಳು ನರೇಂದ್ರ ಮೋದಿ ಸರ್ಕಾರದ ನಿರ್ಣಾಯಕ ಸರ್ಕಾರದಿಂದ ಸಾಧ್ಯವಾಗಿದೆ ಎಂದಿದ್ದಾರೆ.
Modi govt is synonymous with national security, development & welfare of the poor.
It is a symbol of hope for every section of our society.
Within 100days of Modi 2.0, PM @narendramodi has taken several historic decisions, for which every Indian had been waiting since 70 years.
— Amit Shah (@AmitShah) September 8, 2019
I congratulate PM @narendramodi ji and all my ministerial colleagues on the completion of the historic 100 days of Modi 2.0.
I also assure all our countrymen that Modi government will leave no stone unturned for the development, welfare and security of our nation. #MODIfied100
— Amit Shah (@AmitShah) September 8, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.