ಬೆಂಗಳೂರು: ಚಂದ್ರಯಾನ-2 ಮಿಷನ್ ವೇಳೆ ಬೆಂಗಳೂರಿನ ಕೇಂದ್ರ ಕಛೇರಿಯಲ್ಲಿ ಉಪಸ್ಥಿತರಿದ್ದ ಮಕ್ಕಳೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ಆತ್ಮೀಯ ಸಂಭಾಷಣೆಯನ್ನು ನಡೆಸಿದ್ದಾರೆ. “ಬದುಕಿನಲ್ಲಿ ದೊಡ್ಡ ಗುರಿಯನ್ನು ಇಟ್ಟುಕೊಳ್ಳಿ, ಗುರಿಯನ್ನು ಸಾಧಿಸುವಲ್ಲಿ ಎದುರಾಗುವ ಹತಾಶೆಗಳಿಂದ ಎದೆಗುಂದಬೇಡಿ” ಎಂದು ಕಿವಿಮಾತು ಹೇಳಿದ್ದಾರೆ.
“ಬದುಕಿನಲ್ಲಿ ದೊಡ್ಡ ದೊಡ್ಡ ಗುರಿಗಳನ್ನು ಇಟ್ಟುಕೊಳ್ಳಿ. ಅವುಗಳನ್ನು ಗುರಿಗಳಾಗಿ ವಿಭಜಿಸಿ ಮತ್ತು ಒಂದೊಂದೇ ಗುರಿಗಳನ್ನು ಒಟ್ಟು ಸೇರಿಸಿ ದೊಡ್ಡ ಗುರಿಯನ್ನು ಸಾಧಿಸಿ. ಏನು ಕಳೆದುಕೊಂಡಿರಿ ಎಂಬ ಬಗ್ಗೆ ಚಿಂತ ಬೇಡ ಮತ್ತು ಎದುರಾಗುವ ಹತಾಶೆಗಳಿಂದ ಎದೆಗುಂದಬೇಡಿ” ಎಂದು ಮಕ್ಕಳಿಗೆ ಮೋದಿ ಸಲಹೆಯನ್ನು ನೀಡಿದ್ದಾರೆ.
ಭೂತಾನ್ ವಿದ್ಯಾರ್ಥಿಯನ್ನೂ ಭೇಟಿಯಾದ ಮೋದಿ, ಭಾರತದ ಮಕ್ಕಳೊಂದಿಗೆ ಸ್ನೇಹ ಮಾಡಿಕೊಂಡೆಯಾ ಎಂದು ಪ್ರಶ್ನಿಸಿದ್ದಾರೆ. ಆತನಿಗೆ ತಮ್ಮ ಆಟೋಗ್ರಾಫ್ ನೀಡಿದ್ದಾರೆ. ಉಳಿದ ಮಕ್ಕಳೂ ಮೋದಿಯಿಂದ ಆಟೋಗ್ರಾಫ್ ಪಡೆದುಕೊಂಡಿದ್ದಾರೆ.
ಈ ವೇಳೆ ವಿದ್ಯಾರ್ಥಿಯೊಬ್ಬ, ದೇಶದ ರಾಷ್ಟ್ರಪತಿಯಾಗಲು ಏನು ಮಾಡಬೇಕು ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ನಗುತ್ತಲೇ ಉತ್ತರಿಸಿದ ಮೋದಿ, ನೀನ್ಯಾಕೆ ಪ್ರಧಾನಿಯಾಗಲು ಬಯಸುತ್ತಿಲ್ಲ ಎಂದಿದ್ದಾರೆ.
ಸುಮಾರು 60 ಮಕ್ಕಳು ಇಸ್ರೋ ನಡೆಸಿದ ಆನ್ಲೈನ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಚಂದ್ರಯಾನ-2 ಮಿಷನ್ ವೀಕ್ಷಣೆಗೆ ಆಯ್ಕೆಯಾಗಿದ್ದರು.
ಮಿಷನ್ ವೇಳೆ ಇಸ್ರೋ ಕೇಂದ್ರ ಕಛೇರಿಯಲ್ಲಿದ್ದ ಮೋದಿ, ಮಿಷನ್ ಹಿನ್ನಡೆ ಅನುಭವಿಸಿದ ಸಂದರ್ಭದಲ್ಲಿ ಅಲ್ಲಿನ ವಾತಾವರಣವನ್ನು ತಿಳಿಗೊಳಿಸುವ ಪ್ರಯತ್ನವನ್ನು ಮಾಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.