ನವದೆಹಲಿ: ರಾಷ್ಟ್ರೀಯ ಚಳುವಳಿಯಾಗಿ ರೂಪುಗೊಂಡಿರುವ ಸ್ವಚ್ಛ ಭಾರತ ಅಭಿಯಾನದಿಂದಾಗಿ ದೇಶದ ಪ್ರತಿಯೊಬ್ಬ ನಾಗರಿಕನೂ ಸ್ವಚ್ಛ ಮತ್ತು ಸುರಕ್ಷಿತ ವಾತಾವರಣವನ್ನು ರೂಪಿಸುವಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾನೆ. ಸ್ವಚ್ಛ ಭಾರತ ಅಭಿಯಾನದಡಿ ಮಹತ್ವದ ಸಾಧನೆಯನ್ನು ಮಾಡಿದವರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ನವದೆಹಲಿಯ ವಿಜ್ಞಾನ ಭವನದಲ್ಲಿ ‘ಸ್ವಚ್ಛ ಮಹೋತ್ಸವ್ 2019’ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಸ್ವಚ್ಛತೆಯಲ್ಲಿ ಅನನ್ಯ ಸಾಧನೆಯನ್ನು ಮಾಡಿರುವ ಭಾರತೀಯ ರೈಲ್ವೆ ಮತ್ತು ವೈಷ್ಣೋ ದೇವಿ ದೇಗುಲ ಮಂಡಳಿಯನ್ನು ಅವರು ಸನ್ಮಾನಿಸಿದರು.
ಜಲಶಕ್ತಿ ಸಚಿವಾಲಯವು ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ರಾಷ್ಟ್ರಪತಿಗಳು ವಿವಿಧ ವಿಭಾಗಗಳಲ್ಲಿ ಸ್ವಚ್ಛ ಭಾರತ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಜಮ್ಮು ಮತ್ತು ಕಾಶ್ಮೀರದ ವೈಷ್ಣೋ ದೇವಿ ದೇಗುಲ ಮಂಡಳಿಯು ಅತ್ಯುತ್ತಮ ಸ್ವಚ್ಛ ಐಕಾನಿಕ್ ಪ್ಲೇಸ್ ಪ್ರಶಸ್ತಿಯನ್ನು ಪಡೆದಿದೆ. ನೈರ್ಮಲ್ಯದ ಸಮಗ್ರ ಸುಧಾರಣೆಯ ಆಧಾರದ ಮೇಲೆ ಈ ದೇವಾಲಯವನ್ನು ಆಯ್ಕೆ ಮಾಡಲಾಗಿದೆ. ಸ್ವಚ್ಛತಾ ಕ್ರಿಯಾ ಯೋಜನೆ ವಿಭಾಗದಲ್ಲಿ ರೈಲ್ವೆ ಸಚಿವಾಲಯಕ್ಕೆ ಸ್ವಚ್ಛತಾ ಪ್ರಶಸ್ತಿಯನ್ನು ನೀಡಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಗಳು, “ಸ್ವಚ್ಛ ಭಾರತ ಜನರ ಅಭಿಯಾನವಾಗಿದೆ. ದೇಶಾದ್ಯಂತ ಶೌಚಾಲಯಗಳ ನಿರ್ಮಾಣವು ಮಹಿಳೆಯರ ಘನತೆಯನ್ನು ಕಾಪಾಡಿಕೊಳ್ಳಲು ಮತ್ತು ಅವರ ಸಬಲೀಕರಣಕ್ಕೆ ಸಹಕಾರಿಯಾಗಿದೆ. ಸ್ವಚ್ಛತೆ ಯಶಸ್ಸಿನ ಹಾದಿಯಾಗಿದೆ” ಎಂದರು.
“ವಿಶ್ವಸಂಸ್ಥೆಯು ನಿಗದಿಪಡಿಸಿದ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು 2030 ರ ವೇಳೆಗೆ ಸಾಧಿಸಲಿದ್ದೇವೆ. ಆದರೆ, ಭಾರತವು 11 ವರ್ಷಗಳ ಮುಂಚೆಯೇ ಸ್ವಚ್ಛತೆಯ ಗುರಿಗಳನ್ನು ಸಾಧಿಸಲು ಸಜ್ಜಾಗಿದೆ, ಅಂದರೆ 2019 ವೇಳೆಗೆ ನಾವು ಗುರಿಯನ್ನು ತಲುಪಲಿದ್ದೇವೆ. ಇದು ನಮಗೆ ಹೆಮ್ಮೆಯ ವಿಷಯವಾಗಿದೆ ಮತ್ತು ದೇಶದ ಪ್ರತಿಯೊಬ್ಬ ನಾಗರಿಕರು ಈ ಸಾಧನೆಯ ಮೆಚ್ಚುಗೆಗೆ ಅರ್ಹರು” ಎಂದು ಹೇಳಿದರು.
Shri Ram Nath Kovind, Hon’ble President of India, presented an award to Indian Railways as one of the best ministries for implementation of Swachhata Action plan for 2018-19. Shri Vinod Kumar Yadav, Chairman Railway Board has received the award today at New Delhi. pic.twitter.com/3z7wEKL20E
— Ministry of Railways (@RailMinIndia) September 6, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.