ನವದೆಹಲಿ: ಶಿಕ್ಷಕರ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ದೇಶದ ಶಿಕ್ಷಕ ಸಮುದಾಯಕ್ಕೆ ಶುಭಾಶಯಗಳನ್ನು ತಿಳಿಸಿದ್ದಾರೆ. ಮಾತ್ರವಲ್ಲದೇ, ಮಾಜಿ ರಾಷ್ಟ್ರಪತಿ ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಅವರ 131 ನೇ ಜನ್ಮ ದಿನಾಚರಣೆಯ ಅಂಗವಾಗಿ ಅವರು ದೇಶಕ್ಕೆ ನೀಡಿರುವ ಕೊಡುಗೆಗಳನ್ನು ಸ್ಮರಿಸಿದ್ದಾರೆ.
“ಶಿಕ್ಷಕರ ದಿನದಂದು ನಾನು ಡಾ. ಎಸ್. ರಾಧಾಕೃಷ್ಣನ್ ಅವರಿಗೆ ಗೌರವ ಸಲ್ಲಿಸುತ್ತೇನೆ ಮತ್ತು ನಮ್ಮ ಎಲ್ಲ ಶಿಕ್ಷಕರಿಗೆ ಶುಭಾಶಯಗಳನ್ನು ಅರ್ಪಿಸುತ್ತೇನೆ. ಅವರು ಯುವ ಮನಸ್ಸುಗಳಿಗೆ ಬಲವಾದ ಮೌಲ್ಯಗಳನ್ನು ತುಂಬುತ್ತಾರೆ ಮತ್ತು ಕುತೂಹಲ ಹೊಂದಿರಲು, ಜ್ಞಾನವನ್ನು ಪಡೆಯಲು ಮತ್ತು ಕನಸು ಕಾಣಲು ಪ್ರೇರೇಪಿಸುತ್ತಾರೆ. ಈ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಅಪಾರ ಕೊಡುಗೆ ನೀಡುತ್ತಾರೆ ”ಎಂದು ರಾಷ್ಟ್ರಪತಿ ಕೋವಿಂದ್ ಟ್ವಿಟ್ ಮೂಲಕ ಹೇಳಿದ್ದಾರೆ.
On Teachers’ Day, I pay homage to Dr S. Radhakrishnan & extend greetings to all our teachers. They infuse the young minds with strong values & inspire them to be curious, to seek knowledge & to dream. Doing this, they contribute immensely towards nation building #PresidentKovind
— President of India (@rashtrapatibhvn) September 5, 2019
ಶಿಕ್ಷಕರು ಮತ್ತು ಅವರ ವಿದ್ಯಾರ್ಥಿಗಳ ನಡುವಿನ ಬಾಂಧವ್ಯವನ್ನು ವಿವರಿಸುವ ವೀಡಿಯೊವನ್ನು ಟ್ವಿಟರ್ ಮೂಲಕ ಹಂಚಿಕೊಂಡಿರುವ ಪ್ರಧಾನಿ ಮೋದಿ ಅವರು, “ಎಲ್ಲರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು. ಅಸಾಧಾರಣ ಶಿಕ್ಷಕ ಮತ್ತು ಮಾರ್ಗದರ್ಶಕರಾದ ಡಾ.ಎಸ್. ರಾಧಾಕೃಷ್ಣನ್ ಅವರ ಜಯಂತಿ ಅಂಗವಾಗಿ ಅವರಿಗೆ ಭಾರತ ಗೌರವ ಸಲ್ಲಿಸುತ್ತದೆ ” ಎಂದಿದ್ದಾರೆ.
शिक्षक दिवस के अवसर पर सभी शिक्षकों को हार्दिक शुभकामनाएं।
Teachers Day greetings to everyone.
India pays tributes to Dr. S Radhakrishnan, an exceptional teacher and mentor, on his Jayanti. pic.twitter.com/nQWpa9tYLp
— Narendra Modi (@narendramodi) September 5, 2019
1888ರ ಸೆ. 5 ರಂದು ರಂದು ಜನಿಸಿದ ತತ್ವಜ್ಞಾನಿ, ಲೇಖಕ ಮತ್ತು ಭಾರತದ ಎರಡನೇ ರಾಷ್ಟ್ರಪತಿಯಾಗಿದ್ದ ಡಾ.ಎಸ್. ರಾಧಾಕೃಷ್ಣ ಅವರ ಸ್ಮರಣಾರ್ಥ ಶಿಕ್ಷಕರ ದಿನವನ್ನು ದೇಶಾದ್ಯಂತ ಆಚರಿಸಲಾಗುತ್ತದೆ. ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಗಳು ಅನುಕರಣೀಯವಾಗಿವೆ.
1962ರಿಂದ ಭಾರತದಲ್ಲಿ ಶಿಕ್ಷಕರ ದಿನವನ್ನು ಆಚರಿಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.