ಲಂಡನ್: ಲಂಡನ್ನಲ್ಲಿರುವ ಭಾರತದ ಹೈಕಮಿಷನ್ ಕಚೇರಿಯ ಮೇಲೆ ಪಾಕಿಸ್ಥಾನಿ ಬೆಂಬಲಿಗರು ದಾಳಿಯನ್ನು ನಡೆಸಿದ್ದಾರೆ. ಕಚೇರಿಯ ಹೊರಗೆ ನಡೆಯುತ್ತಿದ್ದ ಪಾಕಿಸ್ಥಾನಿಯರ ಪ್ರತಿಭಟನೆ ಏಕಾಏಕಿ ಹಿಂಸಾರೂಪಕ್ಕೆ ತೆರಳಿದೆ.
ಪಾಕಿಸ್ಥಾನಿಯರು ನಡೆಸಿದ ಪ್ರತಿಭಟನೆಯಿಂದಾಗಿ ಭಾರತದ ಹೈಕಮಿಷನ್ ಕಚೇರಿಗೆ ಹಾನಿಯಾಗಿದೆ, ಆವರಣ ಮತ್ತು ವಿಂಡೋ ಪೇನ್ಗೆ ಡ್ಯಾಮೇಜ್ ಆಗಿದೆ ಎಂಬುದನ್ನು ಭಾರತೀಯ ಹೈಕಮಿಷನ್ ಮೂಲಗಳು ಟ್ವಿಟರ್ ಮೂಲಕ ದೃಢಪಡಿಸಿದೆ.
ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆ ಸಮಾರಂಭದ ವೇಳೆಯಲ್ಲೂ ಪಾಕಿಸ್ತಾನಿ ಬೆಂಬಲಿಗರು ಅಲ್ಲಿನ ಭಾರತೀಯ ಹೈಕಮಿಷನ್ ಕಚೇರಿಯ ಮುಂದೆ ಪ್ರತಿಭಟನೆಯನ್ನು ನಡೆಸಿ ಸಮಾರಂಭವನ್ನು ಹಾಳುಗೆಡವಲು ಮುಂದಾಗಿದ್ದರು. ಇದೀಗ ಮತ್ತೆ ಪಾಕಿಸ್ಥಾನಿ ಬೆಂಬಲಿಗರು ಪುಂಡಾಟವನ್ನು ಮೆರೆದಿದ್ದಾರೆ.
ಈ ಘಟನೆಯನ್ನು ಲಂಡನ್ ಮೇಯರ್ ಸಾಧಿಕ್ ಖಾನ್ ಅವರು ಖಂಡಿಸಿದ್ದು, ಇದನ್ನು ಸಹಿಸಲು ಅಸಾಧ್ಯ ಎಂದಿದ್ದಾರೆ. “ಇಂತಹ ವರ್ತನೆಯನ್ನು ನಾನು ಕಟುವಾಗಿ ಖಂಡಿಸುತ್ತೇನೆ. ಮೆಟ್ರೋಪೊಲೀಸ್ಗೆ ಈ ಬಗ್ಗೆ ನಾನು ಮಾಹಿತಿಯನ್ನು ನೀಡಿದ್ದು ತಕ್ಷಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡಿದ್ದೇನೆ ಎಂದಿದ್ದಾರೆ.
#WATCH United Kingdom: Pakistani supporters protested outside the Indian High Commission in London yesterday. They also caused damage to the premises. (Video Source: Indian High Commission in London) pic.twitter.com/dFtm7C64XO
— ANI (@ANI) September 4, 2019
ಈ ಹಿನ್ನೆಲೆಯಲ್ಲಿ 2 ಜನರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.