ನವದೆಹಲಿ: ಭಾರತೀಯ ವಾಯುಪಡೆಯನ್ನು ಆಧುನೀಕರಿಸುವ ನಿಟ್ಟಿನಲ್ಲಿ ಮಹತ್ವದ ಪ್ರಗತಿಯನ್ನು ಸಾಧಿಸಲಾಗುತ್ತಿದೆ, ಅಮೆರಿಕಾ ನಿರ್ಮಿತ 8 ಅಪಾಚೆ ಎಹೆಚ್ -64 ಇ (ಐ) ಹೆಲಿಕಾಪ್ಟರ್ಗಳನ್ನು ಮಂಗಳವಾರ ಪಠಾಣ್ಕೋಟ್ ವಾಯುನೆಲೆಯಲ್ಲಿ ಭಾರತೀಯ ವಾಯುಪಡೆಗೆ ಸೇರ್ಪಡೆಗೊಳಿಸಲಾಗಿದೆ.
ಈ ಬಗ್ಗೆ ವಾಯುಸೇನೆಯು ಟ್ವಿಟರ್ ಮೂಲಕ ಮಾಹಿತಿ ನೀಡಿದೆ. “ಹೊಸ ಸೇರ್ಪಡೆ: ಎಎಫ್ಎಸ್ ಹಿಂಡಾನ್ನಲ್ಲಿ ಎಹೆಚ್ -64 ಇ ಅಪಾಚೆ ಅಟ್ಯಾಕ್ ಹೆಲಿಕಾಪ್ಟರ್ನ ಮೊದಲ ಹಾರಾಟದ ನೋಟಗಳು. ಹೆಲಿಕಾಪ್ಟರ್ ಅನ್ನು ವಾಯುಸೇನೆ ಸೆ. 3ರಂದು ಎಎಫ್ಎಸ್ ಪಠಾಣ್ಕೋಟಿನಲ್ಲಿ ಸೇರ್ಪಡೆಗೊಳಿಸಲಾಗಿದೆ” ಎಂದು ಒಕ್ಕಣೆಯನ್ನು ನೀಡಿ ಟ್ವಿಟ್ ಮಾಡಿದ್ದು, ನಾಲ್ಕು ನಿಮಿಷಗಳ ವೀಡಿಯೊವನ್ನು ಹಂಚಿಕೊಂಡಿದೆ.
ತನ್ನ ದಾಳಿ ಸಾಮರ್ಥ್ಯವನ್ನು ಬಲಿಷ್ಠಗೊಳಿಸಲು 22 ಅಪಾಚೆ ಹೆಲಿಕಾಫ್ಟರ್ಗಳಿಗಾಗಿ ಭಾರತವು ಸೆಪ್ಟೆಂಬರ್ 2015 ರಲ್ಲಿ ಯುಎಸ್ ರಕ್ಷಣಾ ದೈತ್ಯ ಬೋಯಿಂಗ್ನೊಂದಿಗೆ 1.1 ಬಿಲಿಯನ್ ಡಾಲರ್ ಒಪ್ಪಂದಕ್ಕೆ ಸಹಿ ಹಾಕಿತು. ಐಎಎಫ್ ಪ್ರಸ್ತುತ ಸೋವಿಯತ್ ಮೂಲದ ಮಿ -25 ಮತ್ತು ಮಿ -35 ಹೆಲಿಕಾಪ್ಟರ್ ಗನ್ಶಿಪ್ಗಳನ್ನು ಹಾರಿಸುತ್ತಿದೆ.
ಮೊದಲ ಅಪಾಚೆ ಸ್ಕ್ವಾಡ್ರನ್ನಲ್ಲಿ ಎಂಟು ಹೆಲಿಕಾಪ್ಟರ್ಗಳು ಇದ್ದು, ಅದನ್ನು ಈಗಾಗಲೇ ಬೋಯಿಂಗ್ ಪೂರೈಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 2020 ರ ವೇಳೆಗೆ ಬೋಯಿಂಗ್ ಎಲ್ಲಾ 22 ಹೆಲಿಕಾಪ್ಟರ್ಗಳನ್ನು ಭಾರತಕ್ಕೆ ತಲುಪಿಸುವ ಸಾಧ್ಯತೆಯಿದೆ. ಈ ನಾಲ್ಕು ಹೆಲಿಕಾಪ್ಟರ್ಗಳು ಪಾಕಿಸ್ಥಾನದನದ ಗಡಿಯಿಂದ ಕೆಲವೇ ಮೈಲುಗಳಷ್ಟು ದೂರದಲ್ಲಿರುವ ಮತ್ತು ಪ್ರಧಾನ ವಾಯುನೆಲೆಯಾದ ಪಠಾಣ್ಕೋಟ್ ವಾಯುಪಡೆ ನೆಲೆಯಲ್ಲಿ ನಿಯೋಜನೆ ಗೊಳಿಸಲಾಗುತ್ತಿದೆ.
ಅಪಾಚೆ ಹೆಲಿಕಾಫ್ಟರ್ಗಳು ಭಾರತೀಯ ವಾಯುಪಡೆಯನ್ನು ಸೇರ್ಪಡೆಯಾಗುತ್ತಿರುವ ಎರಡನೇಯ ಯುಎಸ್ ನಿರ್ಮಿತ ಹೆಲಿಕಾಪ್ಟರ್ಗಳಾಗಿವೆ. ವಾಯುಸೇನೆ ಈಗಾಗಲೇ ಮಾರ್ಚ್ 25 ರಂದು ಬೋಯಿಂಗ್ ಸಿಎಚ್ -47 ಎಫ್ (ಐ) ಚಿನೂಕ್ ಹೆವಿ-ಲಿಫ್ಟ್ ಹೆಲಿಕಾಪ್ಟರ್ಗಳನ್ನು ಸೇರ್ಪಡೆಗೊಳಿಸಿದೆ.
#NewInduction: Glimpses of AH-64E Apache attack helicopter’s maiden flight at AFS Hindan.
The helicopter is planned to be inducted into the IAF on 03 Sep 19 at AFS Pathankot. pic.twitter.com/UYiSrEfOsg— Indian Air Force (@IAF_MCC) September 2, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.