ನ್ಯೂಯಾರ್ಕ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತೀಯ ಮೂಲದ ಶಿರೀನ್ ಮ್ಯಾಥ್ಯು ಅವರನ್ನು ಫೆಡರಲ್ ಜಡ್ಜ್ ಆಗಿ ನೇಮಕಗೊಳಿಸಿದ್ದಾರೆ.
ಶಿರೀನ್ ಅವರು ಜೋನ್ಸ್ ಡೇ ಎಂಬ ಎಲೈಟ್ ಲಾ ಸಂಸ್ಥೆಯ ಭಾಗವಾಗಿದ್ದು, ಇಲ್ಲಿ ಅವರು ವೈಟ್ ಕಾಲರ್ ಕ್ರೈಮ್ಗಳಲ್ಲಿ ತಜ್ಞತೆಯನ್ನು ಪಡೆದುಕೊಂಡಿದ್ದಾರೆ.
ಅದಕ್ಕೂ ಮೊದಲು ಅವರು, ಕ್ಯಾಲಿಫೋರ್ನಿಯಾದಲ್ಲಿ ಅಸಿಸ್ಟೆಂಟ್ ಫೆಡರಲ್ ಪ್ರಾಸಿಕ್ಯೂಟರ್ ಆಗಿದ್ದರು. ಅಪರಾಧ ವೈದ್ಯಕೀಯ ಸೇವೆ ವಂಚನೆ ಪ್ರಕರಣಗಳ ವಿರುದ್ಧ ಕಾರ್ಡಿನೇಟರ್ ಆಗಿದ್ದರು.
ಸ್ಯಾನ್ ಡಿಯಾಗೋದಲ್ಲಿ ಸೌತ್ ಕ್ಯಾಲಿಫೋರ್ನಿಯಾ ಸೌತರ್ನ್ ಡಿಸ್ಟ್ರೀಕ್ಟ್ ಫೆಡರಲ್ ಕೋರ್ಟ್ಗೆ ಅವರ ಹೆಸರನ್ನು ಬುಧವಾರ ವೈಟಹೌಸ್ನಲ್ಲಿ ಘೋಷಣೆ ಮಾಡಲಾಗಿದೆ. ಅವರ ನೇಮಕವನ್ನು ಸೆನೆಟ್ ಅನುಮೋದಿಸಿದೆ.
ಫೆಡರಲ್ ಜುಡಿಶಿಯರಿಯ ವಿವಿಧ ಹುದ್ದೆಗಳಿಗೆ ಟ್ರಂಪ್ ಆಡಳಿತದಲ್ಲಿ ನೇಮಕಗೊಂಡವರಲ್ಲಿ ಶಿರಿನ್ 6ನೇಯವರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.