ಭುವನೇಶ್ವರ್: ಪ್ರಧಾನಿ ನರೇಂದ್ರ ಮೋದಿ ಬುಧವಾರ ಒರಿಸ್ಸಾದ ರೂರ್ಕೆಲಾದಲ್ಲಿನ 4.5 ಎಂ.ಟಿ ವಿಸ್ತರಣಾ ಸ್ಟೀಲ್ ಪ್ಲಾಂಟ್ನ್ನು ಲೋಕಾರ್ಪಣೆಗೊಳಿಸಿದರು. ಪ್ರಧಾನಿಯಾದ ಬಳಿಕ ಇದು ಅವರ ಮೊದಲ ಒರಿಸ್ಸಾ ಭೇಟಿಯಾಗಿದೆ.
ಬಳಿಕ ಸಮಾರಂಭದಲ್ಲಿ ಮಾತನಾಡಿದ ಅವರು ‘ಅಭಿವೃದ್ಧಿಯ ಕಾರ್ಯವನ್ನು ಮಾಡಲು ಇಂದು ರೂರ್ಕೆಲಾಗೆ ಆಗಮಿಸಿದ್ದೇನೆ. ರೂರ್ಕೆಲಾ ಭಾರತಕ್ಕೆ ಉಕ್ಕಿನ ಶಕ್ತಿಯನ್ನು ನೀಡಿದೆ. ಭಾರತದ ರಕ್ಷಣಾ ವಲಯದಲ್ಲೂ ರೂರ್ಕೆಲಾ ಸ್ಟೀಲ್ ಪ್ಲಾಂಟ್ ಮಹತ್ವದ ಪಾತ್ರವನ್ನು ನಿಭಾಯಿಸಲಿದೆ. ಭಾರತ ಉಕ್ಕು ಉತ್ಪಾದನೆಯಲ್ಲಿ ಅಮೆರಿಕಾವನ್ನೂ ಮೀರಿಸಿದೆ. ಆದರೂ ಚೀನಾಗಿಂತ ಬಹಳಷ್ಟು ಹಿಂದುಳಿದಿದೆ. ಹೀಗಾಗಿ ಈ ವಲಯದಲ್ಲಿ ಇನ್ನೂ ಮಾಡಬೇಕಾದುದು ಬಹಳಷ್ಟಿದೆ’ ಎಂದರು.
ಆಶಾಭಾವದಿಂದ ಜಗತ್ತು ಭಾರತವನ್ನು ನೋಡುತ್ತಿದೆ, ವಿಶ್ವದಾದ್ಯಂತ ಇರುವ ಬಂಡವಾಳದಾರರನ್ನು ನಾವು ಭಾರತಕ್ಕೆ ಆಹ್ವಾನಿಸಿದ್ದೇವೆ. ಅಸ್ಸಾಂ, ಪಶ್ಚಿಮಬಂಗಾಳ, ಒರಿಸ್ಸಾ, ಬಿಹಾರ ಮತ್ತು ಉತ್ತರಪ್ರದೇಶ ಸೇರಿದಂತೆ ಭಾರತದ ಈಶಾನ್ಯ ಭಾಗ ಅಭಿವೃದ್ಧಿ ಹೊಂದುವ ಅಗತ್ಯವಿದೆ ಎಂದು ಅವರು ಹೇಳಿದರು.
‘ರಾಜ್ಯ ಮತ್ತು ಕೇಂದ್ರ ಎರಡೂ ದೇಶದ ಅಭಿವೃದ್ಧಿಯಲ್ಲಿ ಸಮಾನ ಭಾಗಿದಾರರು. ರಾಜ್ಯಗಳನ್ನು ಅಭಿವೃದ್ಧಿಪಡಿಸಲು ನಾವು ಹೆಜ್ಜೆಯನ್ನಿಟ್ಟಿದ್ದೇವೆ. ಖನಿಜ ಸಂಪತ್ತು ಮತ್ತು ಅಧಿಕಾರ ವಿಕೇಂದ್ರಿಕರಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ’ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.